Covid 19: ಕೊವಿಡ್​ ಸಮಯದಲ್ಲಿ ಹೃದಯ ಸಂಬಂಧಿ ರೋಗಲಕ್ಷಣ ಹೊಂದಿರುವವರು ತಿಳಿದಿರಬೇಕಾದ ಕೆಲವು ಸಲಹೆಗಳು

ಅಧಿಕ ರಕ್ತದೊತ್ತಡ, ಮಧುಮೇಹ, ಹೃದಯಾಘಾತ, ದುರ್ಬಲ ಹೃದಯ, ಬೊಜ್ಜು, ದೀರ್ಘಕಾಲದ ಶ್ವಾಸಕೋಶದ ಕಾಯಿಲೆ, ಅಸ್ತಮಾ ಮತ್ತು ಮೂತ್ರಪಿಂಡ ಕಾಯಿಲೆಗೆ ಒಳಗಾದವರಲ್ಲಿ ಸೋಂಕು ಬಹುಬೇಗ ಹರಡಿಕೊಳ್ಳಬಹುದು.

Covid 19: ಕೊವಿಡ್​ ಸಮಯದಲ್ಲಿ ಹೃದಯ ಸಂಬಂಧಿ ರೋಗಲಕ್ಷಣ ಹೊಂದಿರುವವರು ತಿಳಿದಿರಬೇಕಾದ ಕೆಲವು ಸಲಹೆಗಳು
ಸಾಂದರ್ಭಿಕ ಚಿತ್ರ
Follow us
TV9 Web
| Updated By: Skanda

Updated on: Jun 09, 2021 | 8:00 AM

ಕೊವಿಡ್​ ಸೋಂಕು ಇತರ ಆರೋಗ್ಯ ಸಮಸ್ಯೆಗಳಿಗೂ ತೊಂದರೆಯನ್ನುಂಟು ಮಾಡಬಹುದು. ಈಗಾಗಲೇ ವ್ಯಕ್ತಿಯಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿದ್ದು ಅದರಲ್ಲಿಯೂ ಇತರ ರೋಗಗಳಿಂದ ಬಳಲುತ್ತಿದ್ದರೆ ಸೋಂಕು ಬಹುಬೇಗ ಹರಡುತ್ತದೆ ಎಂಬುದು ತಿಳಿದು ಬಂದಿದೆ. ಹಾಗೂ ಹೃದಯ ಸಂಬಂಧಿತ ಇತರ ಕಾಯಿಲೆಗಳಿಂದ ಬಳಲುತ್ತಿರುವವರು ಪರಿಣಾಮ ಎದುರಿಸಬಹುದು. ಏಕೆಂದರೆ ಸೋಂಕು ಹೃದಯ ರಕ್ತನಾಳದ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಎಚ್ಚರಿಕೆಯಿಂದ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಅಧಿಕ ರಕ್ತದೊತ್ತಡ, ಮಧುಮೇಹ, ಹೃದಯಾಘಾತ, ದುರ್ಬಲ ಹೃದಯ, ಬೊಜ್ಜು, ದೀರ್ಘಕಾಲದ ಶ್ವಾಸಕೋಶದ ಕಾಯಿಲೆ, ಅಸ್ತಮಾ ಮತ್ತು ಮೂತ್ರಪಿಂಡ ಕಾಯಿಲೆಗೆ ಒಳಗಾದವರಲ್ಲಿ ಸೋಂಕು ಬಹುಬೇಗ ಹರಡಿಕೊಳ್ಳಬಹುದು. ಹಾಗೂ ಅತಿಯಾಗಿ ಆಲ್ಕೋಹಾಲ್​ ಬಳಕೆ, ಅತಿಯಾದ ಗೊರಕೆ, ರಕ್ತದೊತ್ತಡ ಮತ್ತು ರಕ್ತದಲ್ಲಿನ ಗ್ಲುಕೋಸ್​ ನಿಯಂತ್ರಣ, ಅಧಿಕ ತೂಕ ಮತ್ತು ಬೊಜ್ಜು ಇರುವವರಲ್ಲಿ ಬಹುಬೇಗ ಸೋಂಕು ದೇಹಕ್ಕೆ ಪ್ರವೇಶಿಸುತ್ತದೆ.

ಹೃದಯ ರಕ್ತನಾಳದ ತೊಂದರೆ ಡಾ. ಮಹಾಜನ್​ ಅವರ ಪ್ರಕಾರ, ಕೊವಿಡ್ ​19 ಸೋಂಕು ರಕ್ತನಾಳಗಳ ಒಳಪದರವನ್ನು ನೇರವಾಗಿ ಪ್ರವೇಶಿಸುತ್ತದೆ. ಇದು ಶುದ್ಧ ರಕ್ತವನ್ನು ಅಂಗಗಳಿಗೆ ಮತ್ತು ಅಶುದ್ಧ ರಕ್ತವನ್ನು ವಿವಿಧ ಅಂಗಗಳಿಂದ ಹೃದಯಕ್ಕೆ ಒಯ್ಯುತ್ತದೆ. ಇದು ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆಗೆ ಕಾರಣವಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ. ಈ ಕುರಿತಂತೆ ದಿ ಇಂಡಿಯನ್​ ಎಕ್ಸ್​ಪ್ರೆಸ್​ ವರದಿ ಮಾಡಿದೆ.

ದುರ್ಬಲ ಹೃದಯವು ಹೃದಯ ವೈಫಲ್ಯಕ್ಕೆ ಕಾರಣವಾಗಬಹುದು. ದೇಹದಲ್ಲಿ ಉಸಿರಾಟದ ತೊಂದರೆಗೆ ಕಾರಣವಾಗಬಹುದು. ಹಾಗಿದ್ದಾಗ ಹೃದಯ ಸಂಬಂಧಿತ ಇತರ ಕಾಯಿಲೆಗಳಿಂದ ಬಳಲುತ್ತಿರುವವರು ತಮ್ಮ ಆರೋಗ್ಯದ ಕುರಿತಾಗಿ ಹೆಚ್ಚು ಲಕ್ಷ್ಯವಹಿಸುವುದು ಮುಖ್ಯ. ಕೊವಿಡ್​ ಸಮಯದಲ್ಲಿ ಆರೋಗ್ಯದ ಕುರಿತಾಗಿ ಹೆಚ್ಚು ಗಮನವಹಿಸಿ. ಜತೆಗೆ ಆರೋಗ್ಯದ ಏರುಪೇರು ಕಂಡು ಬಂದಲ್ಲಿ ತಕ್ಷಣವೇ ವೈದ್ಯರ ಸಲಹೆಯನ್ನು ಪಡೆದುಕೊಳ್ಳಿ. ಯಾವುದೇ ಸಮಯದಲ್ಲಿಯೂ ನಿಮ್ಮ ಆರೋಗ್ಯದ ಕುರಿತಾಗಿ ನಿರ್ಲಕ್ಷ್ಯ ಬೇಡ.

ಇದನ್ನೂ ಓದಿ:

Health Tips: ಕೊರೊನಾ ಸೋಂಕಿನ ಮಧ್ಯೆ ಮತ್ತೆ ನೆನಪಾಯಿತು ಈ ಗಿಡ! ‘ನೆಲನೆಲ್ಲಿ’ ಸಸ್ಯದಲ್ಲಿ ಅಡಗಿದೆ ಔಷಧೀಯ ಗುಣ

Health Tips: ಕಿಡ್ನಿ ಸ್ಟೋನ್​ ಸಮಸ್ಯೆಯ ಲಕ್ಷಣಗಳೇನು? ಪರಿಹಾರಗಳಿವೆಯಾ?