World Brain Tumour Day 2021: ಕೊವಿಡ್​ ಸಮಯದಲ್ಲಿ ಬ್ರೈನ್​ ಟ್ಯೂಮರ್​ ಕುರಿತಾಗಿ ಜನರಲ್ಲಿ ಜಾಗೃತಿ ಮೂಡಿಸುವುದು ಅತ್ಯಗತ್ಯ

ಸಾಂಕ್ರಾಮಿಕದ ಸಮಯದಲ್ಲಿ ಬ್ರೈನ್​ ಟ್ಯೂಮರ್​ ಹೊಂದಿರುವ ರೋಗುಗಳು ಸೋಂಕು, ರಕ್ತದೊತ್ತಡದಂತಹ ಸಮಸ್ಯೆಗಳಿಂದ ದೂರವಿರುವುದು ಅತ್ಯಂತ ಮಹತ್ವದ್ದಾಗಿದೆ. ಇದಕ್ಕಾಗಿ ನಿಮ್ಮ ಆಹಾರ ವ್ಯವಸ್ಥೆಯನ್ನು ಮತ್ತು ಜೀವನದಲ್ಲಿ ಕೆಲವು ಬದಲಾವಣೆಗಳು ಮುಖ್ಯ.

World Brain Tumour Day 2021: ಕೊವಿಡ್​ ಸಮಯದಲ್ಲಿ ಬ್ರೈನ್​ ಟ್ಯೂಮರ್​ ಕುರಿತಾಗಿ ಜನರಲ್ಲಿ ಜಾಗೃತಿ ಮೂಡಿಸುವುದು ಅತ್ಯಗತ್ಯ
World Brain Tumour Day 2021
Follow us
TV9 Web
| Updated By: shruti hegde

Updated on: Jun 08, 2021 | 10:26 AM

ಮಾನಸಿಕ ನೆಮ್ಮದಿಯನ್ನು ಕಿತ್ತುಕೊಳ್ಳುವಂತಹ ರೋಗಗಳು ಬಾರದಂತೆ ಎಚ್ಚರವಹಿಸುವುದು ಪ್ರಸ್ತುತ ಸಮಯದಲ್ಲಿ ಅವಶ್ಯಕವಾಗಿದೆ. ಅದರಲ್ಲಿಯೂ ಮಿದುಳಿನಲ್ಲಿ ಬೆಳೆಯುವ ಕ್ಯಾನ್ಸರ್​ ಗೆಡ್ಡೆ ಕೇಳಿದರೆ ಭಯ ಬೀಳುವವರೇ ಹೆಚ್ಚು. ಹಾಗಾಗಿ ಈ ಕುರಿತಾಗಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜೂನ್​ 8ರಂದು ಪ್ರತಿ ವರ್ಷ ವಿಶ್ವ ಬ್ರೈನ್​ ಟ್ಯೂಮರ್​ ದಿನವನ್ನು ಆಚರಿಸಲಾಗುತ್ತದೆ. ಕ್ಯಾನ್ಸರ್​ನಲ್ಲಿ ಪ್ರತಿಯೊಂದು ಪ್ರಕರಣಗಳೂ ಕೂಡಾ ವಿಭಿನ್ನವಾಗಿರುವುದರಿಂದ ಚಿಕಿತ್ಸೆಯು ಒಂದು ಪ್ರಕರಣದಿಂದ ಮತ್ತೊಂದು ಪ್ರಕರಣಕ್ಕೆ ವಿಭಿನ್ನವಾಗಿರುತ್ತದೆ. ಹಾಗಾಗಿ ಜೀವಕ್ಕೆ ಅಪಾಯಕಾರಿಯಾದ ಮಿದುಳಿನ ಕ್ಯಾನ್ಸರ್​ಗೆ ಸಮಯೋಚಿತ ಚಿಕಿತ್ಸೆಗೆ ವ್ಯವಸ್ಥೆ ಮಾಡುವುದು ಬಹಳ ಮುಖ್ಯವಾಗಿದೆ.

ಕೀಮೋಥೆರಪಿ ಮತ್ತು ಆರೋಗ್ಯದ ಕುರಿತಾದ ಕಾಳಜಿ ಪ್ರಸ್ತುತ ಸಮಯದಲ್ಲಿ ಕೊರೊನಾ ಸೋಂಕು ಹರಡುವಿಕೆಯಿಂದ ಇತರ ರೋಗದಿಂದ ಬಳಲುತ್ತಿರುವವರು ಬಹಳ ಎಚ್ಚರಿಕೆಯಿಂದ ಇರುವುದು ಉತ್ತಮ. ಕ್ಯಾನ್ಸರ್​ ಚಿಕಿತ್ಸೆಯ ಒಂದು ಭಾಗವಾದ ಕೀಮೋಥೆರಪಿ ಮಾನವನಲ್ಲಿನ ರೋಗ ನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ. ಆದ್ದರಿಂದ ಕೊವಿಡ್​ 19 ಸೋಂಕಿಗೆ ಒಳಗಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಪ್ರಸ್ತುತ, ಕ್ಯಾನ್ಸರ್​​ ರೋಗಿಗಳಲ್ಲಿ ಕೀಮೋಥೆರಪಿಯನ್ನು ಬದಲಾಯಿಸುವ ಯಾವುದೇ ಪುರಾವೆಗಳು ಹೊರಬಂದಿಲ್ಲ. ಹಾಗಿರುವಾಗ ಆರೋಗ್ಯದ ಕುರಿತಾಗಿ ಹೆಚ್ಚು ಎಚ್ಚರಿಕೆಯಿಂದಿರಿ.

ಆರೋಗ್ಯದ ದೃಷ್ಟಿಯಿಂದ ಬದಲಾಯಿಕೊಳ್ಳಬೇಕಾದ ವಿಧಾನಗಳು ಸಾಂಕ್ರಾಮಿಕದ ಸಮಯದಲ್ಲಿ ಬ್ರೈನ್​ ಟ್ಯೂಮರ್​ ಹೊಂದಿರುವ ರೋಗಿಗಳು ಸೋಂಕು, ರಕ್ತದೊತ್ತಡದಂತಹ ಸಮಸ್ಯೆಗಳಿಂದ ದೂರವಿರುವುದು ಅತ್ಯಂತ ಮಹತ್ವದ್ದಾಗಿದೆ. ಇದಕ್ಕಾಗಿ ನಿಮ್ಮ ಆಹಾರ ವ್ಯವಸ್ಥೆಯನ್ನು ಮತ್ತು ಜೀವನದಲ್ಲಿ ಕೆಲವು ಬದಲಾವಣೆಗಳು ಮುಖ್ಯ.

* ಆರೋಗ್ಯಕರ ಸಮತೋತನ ಆಹಾರ ಪದ್ಧತಿಯನ್ನು ಅನುಸರಿಸಿ * ಮಾನಸಿಕ ಒತ್ತಡವಿಲ್ಲದೇ ಅನಗತ್ಯ ಚಿಂತೆಯನ್ನು ದೂರವಾಡಿಕೊಳ್ಳಲು ವ್ಯಾಯಾಮ, ಧ್ಯಾನದಲ್ಲಿ ತೊಡಗಿಕೊಳ್ಳಿ * ಸರಿಯಾಗಿ ನಿದ್ರೆ ಮಾಡಿ. ಉತ್ತಮ ನಿದ್ರೆಯು ಔಷಧಿಯಷ್ಟೇ ಮುಖ್ಯವಾಗಿದೆ.

ವಿಶೆಷವಾಗಿ ಕೆಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಶಸ್ತ್ರಚಿಕಿತ್ಸೆಯ ನಂತರ ಕಿಮೋಥೆರಪಿಯನ್ನು ಸೂಚಿಸಬಹುದು. ಹಾಗಿರುವಾಗ ರೋಗಿಗಳನ್ನು ಕೊವಿಡ್​ 19 ಸೋಂಕಿನಿಂದ ದೂರವಿಡುವುದರ ಕುರಿತಾಗಿಯೂ ಮನೆಯ ಸದಸ್ಯರಿಗೆ ತರಬೇತಿ ನೀಡುವುದು ಅಥವಾ ಜಾಗೃತಿ ಮೂಡಿಸುವುದು ಪ್ರಸ್ತುತ ಸಮಯದಲ್ಲಿ ಅತ್ಯವಶ್ಯಕವಾಗಿದೆ.

ಇದನ್ನೂ ಓದಿ:

ಕೊರೊನಾದಿಂದ ಗುಣಮುಖರಾದ ಮಕ್ಕಳಲ್ಲಿ ‘ಮಿಸ್ಸಿ’ ಸಮಸ್ಯೆ, ಬಾಗಲಕೋಟೆಯಲ್ಲಿ ಐವರಿಗೆ ಚಿಕಿತ್ಸೆ

ನಿಜವಾಯ್ತು ಬಬಲಾದಿ ಮಠದ ಕೊರೊನಾ ಭವಿಷ್ಯ, ದರ್ಶನಕ್ಕೆ ಮುಗಿಬಿದ್ದ ಭಕ್ತರು

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ