ಕೊರೊನಾದಿಂದ ಗುಣಮುಖರಾದ ಮಕ್ಕಳಲ್ಲಿ ‘ಮಿಸ್ಸಿ’ ಸಮಸ್ಯೆ, ಬಾಗಲಕೋಟೆಯಲ್ಲಿ ಐವರಿಗೆ ಚಿಕಿತ್ಸೆ
ಬಾಗಲಕೋಟೆ ನಗರದಲ್ಲಿ ಸದ್ಯ ಐವರು ಮಕ್ಕಳಲ್ಲಿ MISC ಕಾಣಿಸಿಕೊಂಡಿದ್ದು ಕುಮಾರೇಶ್ವರ ಆಸ್ಪತ್ರೆಯ ಐಸಿಯು ವಾರ್ಡ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದವು. ಚಿಕಿತ್ಸೆ ಬಳಿಕ ಎರಡು ನವಜಾತ ಶಿಶುಗಳು ಡಿಸ್ಚಾರ್ಜ್ ಆಗಿದ್ದು ಮೂವರು ಮಕ್ಕಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಕೊರೊನಾದಿಂದ ಗುಣಮುಖರಾಗಿ 3 ವಾರದಿಂದ 3 ತಿಂಗಳು ಬಳಿಕ ಈ ರೋಗ ಕಾಣಿಸಿಕೊಳ್ಳುತ್ತದೆ.
ಬಾಗಲಕೋಟೆ: ಇನ್ನೇನು ಕೊರೊನಾ ಕಡಿಮೆಯಾಗುತ್ತಿದೆ ಎಂಬ ಹೊತ್ತಲ್ಲೇ ಮತ್ತೊಂದು ಆಘಾತ ಎದುರಾಗಿದೆ. ಮೂರನೇ ಅಲೆ ಮುಂಚೆಯೇ ಮಕ್ಕಳ ಆರೋಗ್ಯದಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಬ್ಲಾಕ್ ಫಂಗಸ್ ಆಯ್ತು ಈಗ ಕೊರೊನಾದಿಂದ ಗುಣಮುಖರಾದ ಮಕ್ಕಳಲ್ಲಿ ಮಲ್ಟಿ ಸಿಸ್ಟಮ್ ಇನ್ಫ್ಲಾಮೇಟರೈ ಸಿಸ್ಟಂ ‘ಮಿಸ್ಸಿ’ ಸಮಸ್ಯೆ ಕಾಣಿಸಿಕೊಂಡಿದೆ.
ಬಾಗಲಕೋಟೆ ನಗರದಲ್ಲಿ ಸದ್ಯ ಐವರು ಮಕ್ಕಳಲ್ಲಿ MISC ಕಾಣಿಸಿಕೊಂಡಿದ್ದು ಕುಮಾರೇಶ್ವರ ಆಸ್ಪತ್ರೆಯ ಐಸಿಯು ವಾರ್ಡ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದವು. ಚಿಕಿತ್ಸೆ ಬಳಿಕ ಎರಡು ನವಜಾತ ಶಿಶುಗಳು ಡಿಸ್ಚಾರ್ಜ್ ಆಗಿದ್ದು ಮೂವರು ಮಕ್ಕಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಕೊರೊನಾದಿಂದ ಗುಣಮುಖರಾಗಿ 3 ವಾರದಿಂದ 3 ತಿಂಗಳು ಬಳಿಕ ಈ ರೋಗ ಕಾಣಿಸಿಕೊಳ್ಳುತ್ತದೆ. ಮಕ್ಕಳಲ್ಲಿ ಎರಡಕ್ಕಿಂತ ಹೆಚ್ಚು ಗಂಭೀರ ಕಾಯಿಲೆ ಕಾಣಿಸುವ ಲಕ್ಷಣಗಳು ಇರುತ್ತವೆ. ಉಸಿರಾಟ, ಹೃದಯ, ಮಿದುಳು, ಲೀವರ್ ಸೇರಿದಂತೆ ಎರಡಕ್ಕಿಂತ ಹೆಚ್ಚು ಕಾಯಿಲೆ ಕಾಣಿಸುವ ಸಾಧ್ಯತೆ ಇರುತ್ತದೆ.
ಕೊರೊನಾದಿಂದ ಗುಣಮುಖರಾದ ಬಳಿಕ ಈ ಕಾಯಿಲೆ ಬರುವುದರಿಂದ ಪಾಲಕರು ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾವಹಿಸಬೇಕು. ಮಕ್ಕಳಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿದರೆ ಮಕ್ಕಳ ತಜ್ಞರನ್ನು ಭೇಟಿ ಮಾಡಿ ಸಲಹೆ, ಚಿಕಿತ್ಸೆ ಪಡೆಯಬೇಕು ಎಂದು ಎಸ್.ಎನ್ ಮೆಡಿಕಲ್ ಕಾಲೇಜಿನ ಕುಮಾರೇಶ್ವರ ಆಸ್ಪತ್ರೆಯ ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಅಶೋಕ ಬಡಕಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: 3ನೇ ಅಲೆ ವೇಳೆ ಮಕ್ಕಳಿಗೆ ಕೊರೊನಾ ಲಸಿಕೆ ನೀಡಲು 2 ಕಂಪನಿಗಳ ಪ್ರಯೋಗ ಯಶಸ್ಸಿನತ್ತ ಸಾಗಿದೆ