3ನೇ ಅಲೆ ವೇಳೆ ಮಕ್ಕಳಿಗೆ ಕೊರೊನಾ ಲಸಿಕೆ ನೀಡಲು 2 ಕಂಪನಿಗಳ ಪ್ರಯೋಗ ಯಶಸ್ಸಿನತ್ತ ಸಾಗಿದೆ

ZyCoV D for children: ಭಾರತದಲ್ಲಿ ಇನ್ನೂ ಮಕ್ಕಳಿಗೆ ಕೊರೊನಾ ಲಸಿಕೆ ನೀಡುತ್ತಿಲ್ಲ. ಕೇಂದ್ರ ಸರ್ಕಾರಕ್ಕೂ ಮಕ್ಕಳಿಗೆ ಕೊರೊನಾ ವೈರಸ್ ಅಟ್ಯಾಕ್ ಮಾಡಬಹುದು ಎನ್ನುವುದು ಚೆನ್ನಾಗಿಯೇ ಅರಿವಿದೆ. ಹೀಗಾಗಿಯೇ ಮಕ್ಕಳಿಗೆ ಕೊರೊನಾ ಬಂದರೆ, ಹೇಗೆ ಚಿಕಿತ್ಸೆ ನೀಡಬೇಕು ಎನ್ನುವ ಬಗ್ಗೆ ಮಾರ್ಗಸೂಚಿಗಳನ್ನು ಸಿದ್ದಪಡಿಸಿ ಎಲ್ಲ ರಾಜ್ಯಗಳಿಗೂ ನೀಡಿದೆ.

3ನೇ ಅಲೆ ವೇಳೆ ಮಕ್ಕಳಿಗೆ ಕೊರೊನಾ ಲಸಿಕೆ ನೀಡಲು 2 ಕಂಪನಿಗಳ ಪ್ರಯೋಗ ಯಶಸ್ಸಿನತ್ತ ಸಾಗಿದೆ
3ನೇ ಅಲೆ ವೇಳೆ ಮಕ್ಕಳಿಗೆ ಕೊರೊನಾ ಲಸಿಕೆ ನೀಡಲು 2 ಕಂಪನಿಗಳ ಪ್ರಯೋಗ ಯಶಸ್ಸಿನತ್ತ ಸಾಗಿದೆ

ಭಾರತದಲ್ಲಿ ಈಗ 18 ವರ್ಷ ಮೇಲ್ಪಟ್ಟವರಿಗೆ ಮಾತ್ರ ಕೊರೊನಾ ಲಸಿಕೆ ನೀಡಲಾಗುತ್ತಿದೆ. ಆದರೆ, ಕೊರೊನಾದ ಮೂರನೇ ಅಲೆ ಬಂದರೆ ಮಕ್ಕಳ ಮೇಲೆ ದಾಳಿ ಮಾಡುವ ಭೀತಿ ಇದೆ. ಹೀಗಾಗಿ ಮಕ್ಕಳನ್ನು ಕೊರೊನಾದಿಂದ ರಕ್ಷಿಸಲು ಲಸಿಕೆ ಸೇರಿದಂತೆ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಮಕ್ಕಳಿಗೆ ನೀಡುವ ಲಸಿಕೆಯು ಯಾವಾಗ ಬರುತ್ತೆ ಎಂದು ಕಾಯುವಂತಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಏನೇನು ಸಿದ್ದತೆ ನಡೆಸಿದೆ ಎನ್ನುವುದರ ವಿವರ ಇಲ್ಲಿದೆ:

ದೇಶದಲ್ಲಿ ಕೊರೊನಾದ ಎರಡನೇ ಅಲೆ ಕ್ಷೀಣಿಸುತ್ತಿದೆ. ಶುಕ್ರವಾರ ದೇಶದಲ್ಲಿ 1.32 ಲಕ್ಷ ಹೊಸ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಸಾವಿನ ಸಂಖ್ಯೆಯೂ 2732ರಷ್ಟಿದೆ. ದೇಶದಲ್ಲಿ ಈಗಾಗಲೇ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲಾಗುತ್ತಿದೆ. ಈಗ ಕೊರೊನಾದ ಮೂರನೇ ಅಲೆ ಬಂದರೇ, ಮಕ್ಕಳ ಮೇಲೆ ಕೊರೊನಾ ವೈರಸ್ ದಾಳಿ ಮಾಡುವ ಭೀತಿ ಇದೆ. ಹೀಗಾಗಿ ಮಕ್ಕಳನ್ನು ಕೊರೊನಾ ವೈರಸ್ ನಿಂದ ರಕ್ಷಣೆ ಮಾಡಲು ಕೊರೊನಾ ಲಸಿಕೆ ನೀಡುವುದೊಂದೇ ಮಾರ್ಗ. ಆದರೆ, ಈಗಾಗಲೇ ಆಮೆರಿಕಾ, ಇಂಗ್ಲೆಂಡ್ ಸೇರಿದಂತೆ ವಿಶ್ವದ ಕೆಲ ರಾಷ್ಟ್ರಗಳಲ್ಲಿ ಮಕ್ಕಳಿಗೂ ಕೊರೊನಾ ಲಸಿಕೆಯನ್ನು ನೀಡಲಾಗುತ್ತಿದೆ.

ಇಂಗ್ಲೆಂಡ್ ನಲ್ಲಿ 12-15 ವರ್ಷದವರಿಗೆ ಫೈಜರ್ ಕಂಪನಿಯ ಲಸಿಕೆ ನೀಡಲು ಒಪ್ಪಿಗೆ ನೀಡಲಾಗಿದೆ. ಆಮೆರಿಕಾದಲ್ಲೂ ಈಗಾಗಲೇ ಮಕ್ಕಳಿಗೆ ಲಸಿಕೆ ನೀಡಿಕೆ ಅಭಿಯಾನ ನಡೆಯುತ್ತಿದೆ. ಆದರೇ, ನಮ್ಮ ದೇಶದಲ್ಲಿ ಇನ್ನೂ ಮಕ್ಕಳಿಗೆ ಕೊರೊನಾ ಲಸಿಕೆ ನೀಡುತ್ತಿಲ್ಲ. ಕೇಂದ್ರ ಸರ್ಕಾರಕ್ಕೂ ಮಕ್ಕಳಿಗೆ ಕೊರೊನಾ ವೈರಸ್ ಅಟ್ಯಾಕ್ ಮಾಡಬಹುದು ಎನ್ನುವುದು ಚೆನ್ನಾಗಿಯೇ ಅರಿವಿದೆ. ಹೀಗಾಗಿಯೇ ಮಕ್ಕಳಿಗೆ ಕೊರೊನಾ ಬಂದರೆ, ಹೇಗೆ ಚಿಕಿತ್ಸೆ ನೀಡಬೇಕು ಎನ್ನುವ ಬಗ್ಗೆ ಮಾರ್ಗಸೂಚಿಗಳನ್ನು ಸಿದ್ದಪಡಿಸಿ ಎಲ್ಲ ರಾಜ್ಯಗಳಿಗೂ ನೀಡಿದೆ.

ಮಕ್ಕಳ ಮೇಲೆ ಕೊರೊನಾ ಲಸಿಕೆ ಪ್ರಯೋಗ; ಮೈಸೂರಿನ ಚೆಲುವಾಂಬ ಆಸ್ಪತ್ರೆ ಆಯ್ಕೆ ಭಾರತದಲ್ಲಿ ಸದ್ಯ ಎರಡು ಕಂಪನಿಗಳು ಮಕ್ಕಳ ಮೇಲೆ ಲಸಿಕೆಯ ಪ್ರಯೋಗ ನಡೆಸುತ್ತಿವೆ. ಮೊದಲನೆಯದಾಗಿ ಅಹಮದಾಬಾದ್ ನ ಜೈಡಸ್ ಕ್ಯಾಡಿಲಾ ಹೆಲ್ತ್ ಕೇರ್ ಕಂಪನಿಯು 12 ರಿಂದ 18 ವರ್ಷದವರ ಮೇಲೆ ಈಗಾಗಲೇ ಲಸಿಕೆಯ ಪ್ರಯೋಗ ನಡೆಸಿದೆ. 3ನೇ ಹಂತದ ಪ್ರಯೋಗ ಕೂಡ ಮುಕ್ತಾಯವಾಗಿದೆ. ಮಕ್ಕಳ ಮೇಲೆ ಲಸಿಕೆಯ ಪ್ರಯೋಗದ ಒಳ್ಳೆಯ ಫಲಿತಾಂಶ ಬಂದಿದೆ. ಮಕ್ಕಳಿಗೆ ಲಸಿಕೆಯಿಂದ ಯಾವುದೇ ತೊಂದರೆ ಆಗಿಲ್ಲ ಎಂದು ಜೈಡಸ್ ಕ್ಯಾಡಿಲಾ ಕಂಪನಿಯ ಎಂಡಿ ಶೆರ್ವಿಲ್ ಪಟೇಲ್ ಹೇಳಿದ್ದಾರೆ. ಇನ್ನು ಜೈಡಸ್ ಕ್ಯಾಡಿಲಾ ಕಂಪನಿಯು ತನ್ನ ಲಸಿಕೆಯ ತುರ್ತು ಬಳಕೆಗೆ ಅನುಮತಿ ಕೋರಿ 2 ವಾರದಲ್ಲಿ ಡಿಸಿಜಿಐಗೆ ಅರ್ಜಿ ಸಲ್ಲಿಸುವ ನಿರೀಕ್ಷೆ ಇದೆ. ಹೀಗಾಗಿ ಭಾರತದಲ್ಲಿ 12 ರಿಂದ 18 ವರ್ಷದವರಿಗೆ ಜೈಡಸ್ ಕ್ಯಾಡಿಲಾ ಹೆಲ್ತ್ ಕೇರ್ ನ ಜೈಕೋವ್ ಡಿ (ZyCoV-D) ಲಸಿಕೆಯು ಮೊದಲು ಸಿಗುವ ನಿರೀಕ್ಷೆ ಇದೆ.

ಭಾರತದಲ್ಲಿ ಹೈದರಾಬಾದ್ ನ ಭಾರತ್ ಬಯೋಟೆಕ್ ಕಂಪನಿಯು ಕೂಡ 2 ರಿಂದ 18 ವರ್ಷದ ಮಕ್ಕಳ ಮೇಲೆ ಲಸಿಕೆಯ ಪ್ರಯೋಗ ಆರಂಭಿಸಿದೆ. ಮೊನ್ನೆಯಿಂದ ಬಿಹಾರದ ಪಾಟ್ನಾದ ಏಮ್ಸ್ ನಲ್ಲಿ ಮಕ್ಕಳ ಮೇಲೆ ಕೊವ್ಯಾಕ್ಸಿನ್ ಲಸಿಕೆಯ ಪ್ರಯೋಗ ಆರಂಭವಾಗಿದೆ. ಮಕ್ಕಳ ಮೇಲಿನ ಲಸಿಕೆಯ ಈ ಪ್ರಯೋಗ ಮುಗಿಯಲು 3 ತಿಂಗಳು ಬೇಕು ಎಂದು ಭಾರತ್ ಬಯೋಟೆಕ್ ಕಂಪನಿಯ ಸಿಎಂಡಿ ಸುಚಿತ್ರಾ ಎಲಾ ಇತ್ತೀಚಿಗೆ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಹೀಗೆ ಭಾರತದಲ್ಲೂ ಮಕ್ಕಳಿಗೆ ಕೊರೊನಾ ಲಸಿಕೆಯನ್ನು ನೀಡಲು ಸಂಶೋಧನೆ, ಅಭಿವೃದ್ದಿ, ಪ್ರಯೋಗಗಳು ನಡೆಯುತ್ತಿವೆ.

ಬೆಳಗಾವಿಯಲ್ಲಿ 20 ಮಕ್ಕಳ ಮೇಲೆ ಕೊವಿಡ್ ಲಸಿಕೆ ಪ್ರಯೋಗ! ಸದ್ಯ ಅಡ್ಡ ಪರಿಣಾಮ ಬೀರಿಲ್ಲ; ಮುಂದೇನು? ಭಾರತದಲ್ಲಿ 12 ರಿಂದ 18 ವರ್ಷದವರಿಗೆ ಸುಮಾರು 13 ರಿಂದ 14 ಕೋಟಿ ಇದ್ದಾರೆ. ಒಬ್ಬರಿಗೆ 2 ಡೋಸ್ ಲಸಿಕೆಯನ್ನು ನೀಡಲು ಕನಿಷ್ಠ 26 ಕೋಟಿ ಡೋಸ್ ಲಸಿಕೆ ಬೇಕಾಗುತ್ತೆ ಎಂದು ನೀತಿ ಆಯೋಗದ ಸದಸ್ಯ ವಿ.ಕೆ.ಪೌಲ್ ಹೇಳಿದ್ದಾರೆ. ಮೊದಲು ಯಾವ ಕಂಪನಿ ಲಸಿಕೆ ನೀಡಬೇಕೆಂದು ನಿರ್ಧರಿಸಬೇಕಾಗಿದೆ . ಈಗ ಲಸಿಕೆಯ ಇಮ್ಯೂನೋಜೆನಿಸಿಟಿ ಪ್ರಯೋಗ ನಡೆಯುತ್ತಿದೆ. ಇದಕ್ಕೆ ಹೆಚ್ಚಿನ ಸಮಯ ಬೇಕಾಗಲ್ಲ ಎಂದಿದ್ದಾರೆ.

ಚೀನಾದ ಸೈನೋವಾಕ್ಸ್ ಲಸಿಕೆಯನ್ನು ಮಕ್ಕಳಿಗೆ ನೀಡಲು ವಿಶ್ವ ಆರೋಗ್ಯ ಸಂಸ್ಥೆಯು ತುರ್ತು ಬಳಕೆಗೆ ಅನುಮೋದನೆ ನೀಡಿದೆ. ಭಾರತ್ ಬಯೋಟೆಕ್ ಕಂಪನಿಯ ಕೊವ್ಯಾಕ್ಸಿನ್ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆಯಿಂದ ತುರ್ತು ಬಳಕೆಗೆ ಅನುಮೋದನೆ ಪಡೆಯುವ ಪ್ರಕ್ರಿಯೆ ವೇಗವಾಗಿ ನಡೆಯುತ್ತಿದೆ ಎಂದು ವಿ.ಕೆ.ಪೌಲ್ ಹೇಳಿದ್ದಾರೆ.

ರಾಜ್ಯಗಳಿಗೆ 1.21 ಲಕ್ಷ, ಕರ್ನಾಟಕಕ್ಕೆ 9750 ವಯಲ್ ಅಂಪೋಟೆರಿಸಿನ್ ಬಿ ಡ್ರಗ್ಸ್ ಹಂಚಿಕೆ:

ಬ್ಲ್ಯಾಕ್ ಫಂಗಸ್ ನಿಂದ ಬಳಲುತ್ತಿರುವ ರೋಗಿಗಳ ಚಿಕಿತ್ಸೆಗೆ ಅಂಪೋಟೆರಿಸಿನ್ ಬಿ ಡ್ರಗ್ಸ್ ಬೇಕು. ಇದನ್ನು ಈಗ ಕೇಂದ್ರ ಸರ್ಕಾರವೇ ರಾಜ್ಯಗಳ ರೋಗಿಗಳ ಸಂಖ್ಯೆಗೆ ಅನುಗುಣನವಾಗಿ ಹಂಚಿಕೆ ಮಾಡುತ್ತಿದೆ. ಶುಕ್ರವಾರ ಎಲ್ಲ ರಾಜ್ಯಗಳಿಗೂ ಕೇಂದ್ರ ಸರ್ಕಾರವು 1 ಲಕ್ಷದ 21 ಸಾವಿರ ವಯಲ್ ಅಂಪೋಟೆರಿಸಿನ್ ಬಿ ಡ್ರಗ್ಸ್ ಹಂಚಿಕೆ ಮಾಡಿದೆ. ಕರ್ನಾಟಕಕ್ಕೆ 9,750 ಅಂಪೋಟೆರಿಸಿನ್ ಬಿ ಡ್ರಗ್ಸ್ ಹಂಚಿಕೆ ಮಾಡಿದೆ. ಈ ಹಂಚಿಕೆ ಪ್ರಕ್ರಿಯೆ ಮುಂದುವರಿಯಲಿದೆ. ಸ್ವದೇಶಿಯವಾಗಿ ಅಂಪೋಟೆರಿಸಿನ್ ಬಿ ಡ್ರಗ್ಸ್ ಉತ್ಪಾದನೆಯನ್ನು ಹೆಚ್ಚಿಸಲಾಗುತ್ತಿದೆ. ಸದ್ಯದಲ್ಲೇ ಬೇಡಿಕೆ ಮತ್ತು ಪೂರೈಕೆ ನಡುವೆ ಸಮತೋಲನ ಉಂಟಾಗಲಿದೆ. ಈಗ ವಿದೇಶದಿಂದ ಅಮದು ಕೂಡ ಹೆಚ್ಚಿಸಲಾಗಿದೆ ಎಂದು ಕೇಂದ್ರದ ಫಾರ್ಮಾಸೂಟಿಕಲ್ಸ್ ಖಾತೆ ಮಂತ್ರಿ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.

ಆದರೆ, ಕರ್ನಾಟಕ ಸೇರಿದಂತೆ ದೇಶದ ಎಲ್ಲ ರಾಜ್ಯಗಳಲ್ಲೂ ಈಗ ಬ್ಲ್ಯಾಕ್ ಫಂಗಸ್ ರೋಗಿಗಳ ಚಿಕಿತ್ಸೆಗೆ ಅಂಪೋಟೆರಿಸಿನ್ ಬಿ ಡ್ರಗ್ಸ್ ಸಿಗುತ್ತಿಲ್ಲ. ರೋಗಿಗಳು ಹಾಗೂ ಅವರ ಸಂಬಂಧಿಕರು ಈ ಡ್ರಗ್ಸ್ ಗಾಗಿ ಪರದಾಡುತ್ತಿದ್ದಾರೆ. ಒಬ್ಬ ರೋಗಿಗೆ ನಿತ್ಯ 6 ರಿಂದ 7 ವಯಲ್ ಅಂಪೋಟೆರಿಸಿನ್ ಬಿ ಡ್ರಗ್ಸ್ ಬೇಕು. ಆದರೇ, ಇಷ್ಟೊಂದು ಪ್ರಮಾಣದಲ್ಲಿ ಯಾವ ರೋಗಿಗೂ ಅಂಪೋಟೆರಿಸಿನ್ ಬಿ ಡ್ರಗ್ಸ್ ಸಿಗದೇ ರೋಗಿಗಳು ಅಂಗಾಂಗಗಳನ್ನೇ ಕಳೆದುಕೊಳ್ಳುತ್ತಿದ್ದಾರೆ. ಅನೇಕರು ಸಾವನ್ನಪ್ಪುತ್ತಿದ್ದಾರೆ.

(Covaxin and Zydus Cadila corona vaccine ZyCoV D tested on children says niti aayog Dr VK Paul)

Click on your DTH Provider to Add TV9 Kannada