AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದು ಡೋಸ್​ ಲಸಿಕೆಗೆ ಕೇವಲ 200 ರೂಪಾಯಿ; ಭರವಸೆ ಮೂಡಿಸಿದ ಕಾರ್ಬ್​ವ್ಯಾಕ್ಸ್​ ಲಸಿಕೆಯತ್ತ ಸರ್ಕಾರದ ಗಮನ

Corona Vaccine: ಈಗಿನ ಲೆಕ್ಕಾಚಾರದ ಪ್ರಕಾರ ಕಾರ್ಬ್​ವ್ಯಾಕ್ಸ್ ಲಸಿಕೆಯ ಒಂದು ಡೋಸ್​ಗೆ ಕೇವಲ 200 ರಿಂದ 250 ರೂಪಾಯಿ ತಗುಲಬಹುದು ಎಂದು ಅಂದಾಜಿಸಲಾಗಿದ್ದು, ಕಡಿಮೆ ಬೆಲೆಯೂ ಇದರ ಹೆಚ್ಚುಗಾರಿಕೆಯಾಗಲಿದೆ. 

ಒಂದು ಡೋಸ್​ ಲಸಿಕೆಗೆ ಕೇವಲ 200 ರೂಪಾಯಿ; ಭರವಸೆ ಮೂಡಿಸಿದ ಕಾರ್ಬ್​ವ್ಯಾಕ್ಸ್​ ಲಸಿಕೆಯತ್ತ ಸರ್ಕಾರದ ಗಮನ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Jun 05, 2021 | 11:20 AM

Share

ದೆಹಲಿ: ಭಾರತದಲ್ಲಿ ಕೊರೊನಾ ಸೋಂಕಿನಿಂದ ಜನರನ್ನು ರಕ್ಷಿಸಲು ಲಸಿಕೆ ವಿತರಣೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಆಗಿರುವ ಸಮಸ್ಯೆಗಳನ್ನು ಹಂತಹಂತವಾಗಿ ಸರಿಪಡಿಸಿಕೊಳ್ಳುತ್ತಾ ಈಗ ಮಾರುಕಟ್ಟೆಯಲ್ಲಿರುವ ಲಸಿಕೆಗಳ ಹೊರತಾಗಿ ಹೊಸ ಲಸಿಕೆಗಳಿಗೂ ಅನುಮತಿ ಕೊಡಲಾಗುತ್ತಿದೆ. ಸದ್ಯ ಬಯೋಲಾಜಿಕಲ್ ಇ ಸಂಸ್ಥೆ ಅಭಿವೃದ್ಧಿಪಡಿಸಿರುವ ಕಾರ್ಬ್​ವ್ಯಾಕ್ಸ್​ ಲಸಿಕೆಯ ಬಗ್ಗೆ ನಿರೀಕ್ಷೆ ಹೆಚ್ಚುತ್ತಿದ್ದು, ಭಾರತದಲ್ಲಿ ಇದರ ತುರ್ತು ಬಳಕೆಗೆ ಅನುಮೋದನೆ ಸಿಕ್ಕರೆ ಮಾರುಕಟ್ಟೆಯಲ್ಲಿನ ಅತಿ ಕಡಿಮೆ ಬೆಲೆಯ ಕೊರೊನಾ ಲಸಿಕೆ ಎಂದೆನಿಸಿಕೊಳ್ಳಲಿದೆ.

ನ್ಯಾಶನಲ್​ ಸ್ಕೂಲ್ ಆಫ್ ಟ್ರೋಪಿಕಲ್ ಮೆಡಿಸಿನ್ (ಎನ್​ಎಸ್​ಟಿಎಂ) ಸಂಸ್ಥೆಯ ಅಸೋಸಿಯೇಟ್ ಡೀನ್ ಡಾ.ಮೇರಿಯಾ ಎಲೆನಾ ತಿಳಿಸಿರುವಂತೆ ಕಾರ್ಬ್​ವ್ಯಾಕ್ಸ್​ ಲಸಿಕೆ ಪಾರಂಪರಿಕ ತಂತ್ರಜ್ಞಾನವನ್ನು ಬಳಸಿ ತಯಾರಿಸಿದ ಲಸಿಕೆಯಾಗಿದ್ದು, ಹೆಪಟೈಟಿಸ್ ಬಿ ಲಸಿಕೆ ನಂತರ ಇದು ಮಹತ್ವದ್ದೆನಿಸಿಕೊಳ್ಳಲಿದೆ. ಅಲ್ಲದೇ ಈಗಿನ ಲೆಕ್ಕಾಚಾರದ ಪ್ರಕಾರ ಇದರ ಒಂದು ಡೋಸ್​ಗೆ ಕೇವಲ 200 ರಿಂದ 250 ರೂಪಾಯಿ ತಗುಲಬಹುದು ಎಂದು ಅಂದಾಜಿಸಲಾಗಿದ್ದು, ಕಡಿಮೆ ಬೆಲೆಯೂ ಇದರ ಹೆಚ್ಚುಗಾರಿಕೆಯಾಗಲಿದೆ.

ಎರಡು ಡೋಸ್​ ಕಾರ್ಬ್​ವ್ಯಾಕ್ಸ್​ ಬೆಲೆ 400 ರೂ.ಗಿಂತ ಕಡಿಮೆ ಇರಲಿದೆ! ಸದ್ಯ ಮಾರುಕಟ್ಟೆಯಲ್ಲಿರುವ ಸೆರಮ್​ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾದ ಕೊವಿಶೀಲ್ಡ್ ಲಸಿಕೆ ಪ್ರತಿ ಡೋಸ್​ಗೆ 300ರೂ.ನಂತೆ ಸರ್ಕಾರಕ್ಕೆ ಸಿಗುತ್ತಿದ್ದರೂ, ಖಾಸಗಿ ಆಸ್ಪತ್ರೆಯಲ್ಲಿ ಕನಿಷ್ಠ 600 ರೂ.ಗೆ ಮಾರಾಟವಾಗುತ್ತಿದೆ. ಭಾರತ್ ಬಯೋಟೆಕ್ ಸಂಸ್ಥೆಯ ಕೊವ್ಯಾಕ್ಸಿನ್ ಲಸಿಕೆ ಒಂದು ಡೋಸ್​ಗೆ 400ರೂ.ನಿಂದ 1,200 ರೂ. ತನಕ ಬಿಕರಿಯಾಗುತ್ತಿದೆ. ರಷ್ಯಾ ಮೂಲದ ಸ್ಪುಟ್ನಿಕ್​ ವಿ ಲಸಿಕೆ ಬೆಲೆಯೂ ಒಂದು ಡೋಸ್​ಗೆ 995ರೂ. ಎಂದು ನಿಗದಿಪಡಿಸಲಾಗಿದೆ. ಆದರೆ, ಕಾರ್ಬ್​ವ್ಯಾಕ್ಸ್ ಬೆಲೆ ಇವುಗಳಿಗಿಂತ ಭಾರೀ ಕಡಿಮೆ ಇರಲಿದ್ದು ಎರಡು ಡೋಸ್ ಲಸಿಕೆ ಬೆಲೆ ಸೇರಿಸಿದರೂ 400 ರೂ. ದಾಟುವುದು ಅನುಮಾನ ಎನ್ನಲಾಗಿದೆ.

ಕೇಂದ್ರ ಆರೋಗ್ಯ ಸಚಿವಾಲಯವು ಈಗಾಗಲೇ 1,500ಕೋಟಿ ರೂ.ಗಳನ್ನು ಮುಂಗಡವಾಗಿ ನೀಡಿ 30 ಕೋಟಿ ಡೋಸ್ ಕಾರ್ಬ್​ವ್ಯಾಕ್ಸ್ ಲಸಿಕೆ ಕಾಯ್ದಿರಿಸುವಂತೆ ಬಯೋಲಾಜಿಕಲ್ ಇ ಸಂಸ್ಥೆಗೆ ತಿಳಿಸಿದೆ. ಈ ಲಸಿಕೆಯು ಆಗಸ್ಟ್​ನಿಂದ ಡಿಸೆಂಬರ್​ ವೇಳೆಯಲ್ಲಿ ಅಧಿಕ ಪ್ರಮಾಣದಲ್ಲಿ ಉತ್ಪಾದಿಸಲು ಸಿದ್ಧತೆಗಳಾಗುತ್ತಿವೆ.

ಮೊದಲ ಮತ್ತು ಎರಡನೇ ಹಂತದ ವೈದ್ಯಕೀಯ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಕೊರೊನಾ ಲಸಿಕೆ ಕಾರ್ಬ್​ವ್ಯಾಕ್ಸ್ ಪ್ರಸ್ತುತ ಮೂರನೇ ಹಂತದ ವೈದ್ಯಕೀಯ ಪರೀಕ್ಷೆಗೆ ಒಳಪಟ್ಟಿದೆ. ಮೊದಲ ಮತ್ತು ಎರಡನೇ ಹಂತದ ವೈದ್ಯಕೀಯ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ತೋರಿಸಿ ನಿರೀಕ್ಷೆ ಹೆಚ್ಚಿಸಿರುವ ಈ ಲಸಿಕೆ ಆರ್​ಬಿಡಿ ಪ್ರೋಟೀನ್​ ಸಬ್​-ಯುನಿಟ್ ಲಸಿಕೆಯಾಗಿದ್ದು, ಮುಂದಿನ ಕೆಲವೇ ತಿಂಗಳಲ್ಲಿ ಅಧಿಕೃತವಾಗಿ ಬಳಕೆಗೆ ಲಭ್ಯವಾಗುವ ಸಾಧ್ಯತೆಗಳಿವೆ. ಈ ಲಸಿಕೆ ಉತ್ಪಾದನೆಗೆ ಜೈವಿಕ ತಂತ್ರಜ್ಞಾನ ಇಲಾಖೆಯಿಂದ 100 ಕೋಟಿ ರೂಪಾಯಿಗಳ ಆರ್ಥಿಕ ನೆರವು ನೀಡುವುದರ ಜತೆಗೆ ವಿವಿಧ ಹಂತದ ಪರೀಕ್ಷೆಗೆ ಸಹಕಾರವನ್ನೂ ಒದಗಿಸಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಇದನ್ನೂ ಓದಿ: Sputnik Vaccine: ಸ್ಫುಟ್ನಿಕ್ ಲಸಿಕೆ ಉತ್ಪಾದನೆಗೆ ಸೆರಂ ಇನ್​ಸ್ಟಿಟ್ಯೂಟ್​ಗೆ ಕೇಂದ್ರ ಸರ್ಕಾರ ಅನುಮತಿ 

ಸೆರಮ್, ಭಾರತ್ ಬಯೋಟೆಕ್ ನಂತರ ಕೊವಿಡ್ ಲಸಿಕೆ ತಯಾರಿಸಲಿದೆ ಬಯೋಲಾಜಿಕಲ್ ಇ; ಹೇಗಿದೆ ಸಿದ್ಧತೆ?

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ