ಮೋಹನ್ ಭಾಗವತ್ ಸೇರಿ ಆರ್ಎಸ್ಎಸ್ನ ಪ್ರಮುಖ ನಾಯಕರ ಟ್ವಿಟರ್ ಖಾತೆಯ ಬ್ಲ್ಯೂಟಿಕ್ ಕೂಡ ಮಾಯ..!
ಯಾವುದೇ ಅಕೌಂಟ್ಗೆ ಬ್ಲ್ಯೂಟಿಕ್ ಕೊಡುವಾಗ ಒಂದು ಹೆಸರಿದ್ದು, ಬಳಿಕ ಆ ಬಳಕೆದಾರರು ಹೆಸರನ್ನು ಬದಲಿಸಿಕೊಂಡರೆ ತಕ್ಷಣವೇ ಅವರಿಗೆ ನೀಡಲಾಗಿದ್ದ ದೃಢೀಕರಣ ಬ್ಯಾಡ್ಜ್ನ್ನು ತೆಗೆದುಹಾಕಲಾಗುವುದು ಎಂದು ಟ್ವಿಟರ್ ತನ್ನ ವೆರಿಫಿಕೇಶನ್ ನಿಯಮದಲ್ಲೇ ಉಲ್ಲೇಖಿಸಿದೆ.
ದೆಹಲಿ: ಇಂದು ಬೆಳಗ್ಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡುರವರ ವೈಯಕ್ತಿಕ ಖಾತೆಯ ಬ್ಲ್ಯೂಟಿಕ್ನ್ನು ತೆಗೆದುಹಾಕುವ ಮೂಲಕ ಟ್ವಿಟರ್ ವಿವಾದ ಸೃಷ್ಟಿಸಿತ್ತು. ಹಲವು ಗಣ್ಯರು ಟ್ವಿಟರ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು. ಆಕ್ಷೇಪಣೆಗಳು ಸಲ್ಲಿಕೆಯಾದ ಬೆನ್ನಲ್ಲೇ ಮತ್ತೆ ಆ ದೃಢೀಕರಣ ಬ್ಯಾಡ್ಜ್ನ್ನು ನೀಡಿತ್ತು. ವೆಂಕಯ್ಯ ನಾಯ್ಡು ಅವರ ವೈಯಕ್ತಿಕ ಖಾತೆ ಹಲವು ತಿಂಗಳುಗಳಿಂದಲೂ ನಿಷ್ಕ್ರಿಯವಾಗಿದ್ದ ಕಾರಣ ತೆಗೆದಿದ್ದಾಗಿ ಹೇಳಿತ್ತು. ಆದರೆ ಟ್ವಿಟರ್ ಕೇವಲ ವೆಂಕಯ್ಯ ನಾಯ್ಡು ಖಾತೆಯದ್ದಷ್ಟೇ ಅಲ್ಲದೆ, ಹಲವು ಆರ್ಎಸ್ಎಸ್ ನಾಯಕ ವೈಯಕ್ತಿಕ ಖಾತೆಯ ನೀಲಿ ಟಿಕ್ನ್ನು ತೆಗೆದಿದ್ದು ಬೆಳಕಿಗೆ ಬಂದಿದೆ.
ಆರ್ಎಸ್ಎಸ್ನ ಪ್ರಮುಖ ನಾಯಕರಾದ ಮೋಹನ್ ಭಾಗವತ್, ಸುರೇಶ್ ಜೋಶಿ, ಅರುಣ್ ಕುಮಾರ್, ಕೃಷ್ಣನ್ ಗೋಪಾಲ್ ಮತ್ತಿತರರ ವೈಯಕ್ತಿಕ ಟ್ವಿಟರ್ ಖಾತೆಗೆ ಇದ್ದ ಬ್ಲ್ಯೂಟಿಕ್ಗಳು ಇಂದು ಬೆಳಗ್ಗೆ ಮಾಯವಾಗಿವೆ. ಈ ಬಗ್ಗೆ ನಾವು ಟ್ವಿಟರ್ಗೆ ತಿಳಿಸಿದರೂ ಯಾವುದೇ ಪ್ರತಿಕ್ರಿಯೆ ಇಲ್ಲ ಎಂದು ರಾಜೀವ್ ತುಳಿ ಎಂಬುವರು ಟ್ವೀಟ್ ಮಾಡಿದ್ದಾರೆ. ಟ್ವಿಟರ್ನಲ್ಲಿ ಬ್ಲ್ಯೂಟಿಕ್ ಯಾವುದೇ ಗಣ್ಯರು ಈ ಬ್ಲ್ಯೂಟಿಕ್ ಪಡೆಯಬೇಕು ಎಂದರೆ ಅವರು ಅದರಲ್ಲಿ ಸಕ್ರಿಯರಾಗಿರಬೇಕು. ಅವರದ್ದೇ ಅಧಿಕೃತ ಖಾತೆ ಎಂದು ದೃಢೀಕರಿಸಬೇಕು. ಆದರೆ ಇತ್ತೀಚೆಗೆ ಟ್ವಿಟರ್ ಪರಿಶೀಲನೆ ನಡೆಸಿದಾಗ ಕೆಲವು ಖಾತೆಗಳು ತುಂಬದಿನಗಳಿಂದ ಬಳಕೆಯಾಗಿಲ್ಲ ಎಂಬುದು ಗೊತ್ತಾಗಿದೆ. ಹಾಗಾಗಿ ಅಂಥ ಟ್ವಿಟರ್ ಖಾತೆಗಳ ದೃಢೀಕರಣ ಬ್ಯಾಡ್ಜ್ಗಳನ್ನು ತೆಗೆದುಹಾಕಿದೆ.
ಇನ್ನು ಯಾವುದೇ ಅಕೌಂಟ್ಗೆ ಬ್ಲ್ಯೂಟಿಕ್ ಕೊಡುವಾಗ ಒಂದು ಹೆಸರಿದ್ದು, ಬಳಿಕ ಆ ಬಳಕೆದಾರರು ಹೆಸರನ್ನು ಬದಲಿಸಿಕೊಂಡರೆ ತಕ್ಷಣವೇ ಅವರಿಗೆ ನೀಡಲಾಗಿದ್ದ ದೃಢೀಕರಣ ಬ್ಯಾಡ್ಜ್ನ್ನು ತೆಗೆದುಹಾಕಲಾಗುವುದು ಎಂದು ಟ್ವಿಟರ್ ತನ್ನ ವೆರಿಫಿಕೇಶನ್ ನಿಯಮದಲ್ಲೇ ಉಲ್ಲೇಖಿಸಿದೆ. ಇಂದು ವೆಂಕಯ್ಯ ನಾಯ್ಡು ವೈಯಕ್ತಿಕ ಖಾತೆಯ ಬ್ಲ್ಯೂಟಿಕ್ ತೆಗೆದುಹಾಕಿದ್ದ ಟ್ವಿಟರ್, ಆಕ್ಷೇಪಣೆಗಳು ವ್ಯಕ್ತವಾದ ಬೆನ್ನಲ್ಲೇ ಅದನ್ನು ಮತ್ತೆ ನೀಡಿದೆ.
@TwitterIndia @verified removed blue ticks of these handles of @RSSorg office bearers. We are to get in touch but no one responds. Strange. So the vice-president @MVenkaiahNaidu is not the only one. @payalmehta100 @PayalKamat @misskaul @vikasbha @ravindrak2000 @nistula pic.twitter.com/ALOXvZ1yw0
— rajiv tuli (@rajivtuli69) June 5, 2021
ಇದನ್ನೂ ಓದಿ: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ವೈಯಕ್ತಿಕ ಖಾತೆಗೆ ನೀಡಿದ್ದ ಬ್ಲ್ಯೂಟಿಕ್ ತೆಗೆದುಹಾಕಿದ್ದ ಟ್ವಿಟರ್; ಕಾರಣವೇನು?
ಕಲಬುರಗಿ ಪೊಲೀಸ್ ಠಾಣೆಯಿಂದ ನೂತನ ಪ್ರಯೋಗ; ವಾಟ್ಸಾಪ್ ಮತ್ತು ಫೇಸ್ಬುಕ್ ಮೂಲಕ ದೂರು ದಾಖಲಿಸಲು ಅವಕಾಶ
Published On - 12:16 pm, Sat, 5 June 21