ಫೈಜರ್​ ಲಸಿಕೆಯ ಎರಡು ಡೋಸ್​ಗಳ ನಡುವಿನ ಹೆಚ್ಚು ಅಂತರ ಡೆಲ್ಟಾ ಮಾದರಿಯನ್ನು ನಿಯಂತ್ರಿಸಲಾರದು

ಭಾರತದಲ್ಲಿ ಕೊವಿಶೀಲ್ಡ್​ ಲಸಿಕೆ ಮೊದಲ ಹಾಗೂ ಎರಡನೇ ಡೋಸ್​ ನಡುವಿನ ಅಂತರ ಹೆಚ್ಚಿಸಿದ್ದಕ್ಕೆ ಈ ಹಿಂದೆ ಪ್ರತಿಕಾಯಗಳು ಅಭಿವೃದ್ಧಿಯಾಗಲು ಸಮಯ ಬೇಕು ಆದ್ದರಿಂದ ಅಂತರ ಹೆಚ್ಚಿಸುವುದು ಸಹಕಾರಿ ಎಂಬ ಕಾರಣ ನೀಡಲಾಗಿತ್ತು

ಫೈಜರ್​ ಲಸಿಕೆಯ ಎರಡು ಡೋಸ್​ಗಳ ನಡುವಿನ ಹೆಚ್ಚು ಅಂತರ ಡೆಲ್ಟಾ ಮಾದರಿಯನ್ನು ನಿಯಂತ್ರಿಸಲಾರದು
ಸಾಂದರ್ಭಿಕ ಚಿತ್ರ
Follow us
TV9 Web
| Updated By: Digi Tech Desk

Updated on:Jun 05, 2021 | 1:53 PM

ದೆಹಲಿ: ಭಾರತದಲ್ಲಿ ಕೊರೊನಾ ಎರಡನೇ ಅಲೆಗೆ ಕಾರಣವಾದ ಡೆಲ್ಟಾ ಮಾದರಿಯ ವೈರಾಣು ಮೊದಲಿನ ರೂಪಾಂತರಿಗಳಿಗಿಂತಲೂ ಪರಿಣಾಮಕಾರಿ ಆಗಿರುವುದರಿಂದ ಹಲವು ಸಮಸ್ಯೆಗಳನ್ನು ಉಂಟುಮಾಡಿದೆ. ಇದೀಗ ತಜ್ಞರು ನಡೆಸಿರುವ ಅಧ್ಯಯನದಲ್ಲಿ ಫೈಜರ್​ ಲಸಿಕೆಯ ಎರಡು ಡೋಸ್​ಗಳ ನಡುವಿನ ಅಂತರ ಹೆಚ್ಚಿದರೆ ಅದು ಡೆಲ್ಟಾ ಮಾದರಿಯನ್ನು ಬಗ್ಗುಬಡಿಯುವಲ್ಲಿ ವಿಫಲವಾಗುತ್ತದೆ ಎಂಬ ಅಂಶ ಬಯಲಾಗಿದ್ದು ಹೊಸದಾಗಿ ಒಂದಷ್ಟು ಚರ್ಚೆಗಳಿಗೆ ಕಾರಣವಾಗಿದೆ. ಲ್ಯಾನ್ಸೆಟ್​ ಜರ್ನಲ್​ನ ಹೊಸ ಅಧ್ಯಯನದಲ್ಲಿ ಈ ವಿಚಾರ ಬೆಳಕಿಗೆ ಬಂದಿದ್ದು, ಯಾರು ಫೈಜರ್​ ಲಸಿಕೆಯನ್ನು ಕೇವಲ ಒಂದು ಡೋಸ್ ಪಡೆದಿರುತ್ತಾರೋ ಅಥವಾ ಎರಡು ಡೋಸ್​ಗಳ ನಡುವೆ ಹೆಚ್ಚು ಅಂತರ ಕಾಯ್ದುಕೊಂಡಿರುತ್ತಾರೋ ಅವರ ದೇಹದಲ್ಲಿ ಡೆಲ್ಟಾ ಮಾದರಿಯ ಕೊರೊನಾ ವೈರಾಣು ವಿರುದ್ಧ ಹೋರಾಡುವ ರೋಗ ನಿರೋಧಕ ಶಕ್ತಿ ಕುಂಠಿತವಾಗುವ ಸಾಧ್ಯತೆ ಇರುತ್ತದೆ ಎಂದು ತಿಳಿಸಿದ್ದಾರೆ.

ಕೊರೊನಾ ಮೂಲ ವೈರಾಣುವಿನ ವಿರುದ್ಧ ಫೈಜರ್ ಲಸಿಕೆಯ ಮೊದಲ ಡೋಸ್ ಶೇ.79ರಷ್ಟು ಪರಿಣಾಮಕಾರಿ ಎನ್ನುವುದನ್ನು ಅಧ್ಯಯನಗಳು ತಿಳಿಸಿದ್ದವು. ಆದರೆ, ಇದರ ಪರಿಣಾಮವು B.1.1.7 ಅಥವಾ ಆಲ್ಫಾ ಮಾದರಿ ವಿರುದ್ಧ ಶೇ.50ಕ್ಕೆ ಕುಸಿದಿದ್ದು ನಂತರ ಡೆಲ್ಟಾ ಮಾದರಿ (B.1.617.2) ವಿರುದ್ಧ ಶೇ.32ಕ್ಕೆ ಹಾಗೂ ಬೀಟಾ ಮಾದರಿ (B.1.351) ವಿರುದ್ಧ ಶೇ.25ಕ್ಕೆ ಕುಸಿತ ಕಂಡಿದೆ. ಅಂದರೆ ಮೂಲ ವೈರಾಣುವಿನ ವಿರುದ್ಧ ಹೆಚ್ಚು ಪ್ರಭಾವ ಬೀರುತ್ತಿದ್ದ ಲಸಿಕೆಯು ಈಗಿನ ರೂಪಾಂತರಿಗಳ ವಿರುದ್ಧ ಅಷ್ಟೊಂದು ಪ್ರಭಾವಶಾಲಿಯಾಗಿಲ್ಲ.

ಹೀಗಾಗಿ, ಈ ಹಂತದಲ್ಲಿ ಹೆಚ್ಚಿನ ರಕ್ಷಣೆ ಪಡೆಯಬೇಕೆಂದರೆ ಮೊದಲ ಡೋಸ್ ಲಸಿಕೆ ಪಡೆದವರು ಹೆಚ್ಚು ದಿನಗಳ ಅಂತರ ನೀಡದೆ ಎರಡನೇ ಡೋಸ್ ಪಡೆಯಬೇಕು ಅಥವಾ ಯಾರಲ್ಲಿ ರೋಗ ನಿರೋಧಕ ಶಕ್ತಿ ಕಮ್ಮಿ ಇದ್ದಾಗ್ಯೂ ಹೆಚ್ಚು ಅಂತರ ಕೊಟ್ಟು ಎರಡನೇ ಡೋಸ್​ ಪಡೆದಿರುತ್ತಾರೋ ಅವರು ಬೂಸ್ಟರ್ ಡೋಸ್ ಮೊರೆ ಹೋಗಬೇಕು ಎಂದು ತಜ್ಞರು ಸಲಹೆ ವ್ಯಕ್ತಪಡಿಸಿದ್ದಾರೆ.

ಭಾರತದಲ್ಲಿ ಕೊವಿಶೀಲ್ಡ್​ ಲಸಿಕೆ ಮೊದಲ ಹಾಗೂ ಎರಡನೇ ಡೋಸ್​ ನಡುವಿನ ಅಂತರ ಹೆಚ್ಚಿಸಿದ್ದಕ್ಕೆ ಈ ಹಿಂದೆ ಪ್ರತಿಕಾಯಗಳು ಅಭಿವೃದ್ಧಿಯಾಗಲು ಸಮಯ ಬೇಕು ಆದ್ದರಿಂದ ಅಂತರ ಹೆಚ್ಚಿಸುವುದು ಸಹಕಾರಿ ಎಂಬ ಕಾರಣ ನೀಡಲಾಗಿತ್ತು. ಆದರೆ, ಇದು ಸರ್ಕಾರವು ಲಸಿಕೆ ಪೂರೈಕೆಯ ಒತ್ತಡದಿಂದ ಪಾರಾಗಲು ಅನುಸರಿಸುತ್ತಿರುವ ತಂತ್ರ ಎಂದು ಕೆಲವರು ಟೀಕಿಸಿದ್ದರು.

ಇದೀಗ ಫೈಜರ್​ ಲಸಿಕೆಯ ಕುರಿತಾಗಿ ಅಧ್ಯಯನಗಳು ಹೇಳಿರುವ ಅಂಶ ಕೊವಿಶೀಲ್ಡ್​ ಲಸಿಕೆಗೂ ಅನ್ವಯವಾಗಲಿದೆಯಾ? ಎಂಬ ಪ್ರಶ್ನೆಯನ್ನು ಹುಟ್ಟಿಸಿದೆ. ಅಲ್ಲದೇ, ಡೆಲ್ಟಾ ಮಾದರಿ ಉಳಿದೆಲ್ಲವಕ್ಕಿಂತಲೂ ಹೆಚ್ಚು ಪರಿಣಾಮ ಬೀರುತ್ತಿದೆ ಎಂದು ತಜ್ಞರು ಹೇಳಿರುವುದರಿಂದ ಲಸಿಕೆ ವಿಚಾರದಲ್ಲಿ ಆರೋಗ್ಯ ಇಲಾಖೆ ಮತ್ತೆ ಯಾವುದಾದರೂ ಬದಲಾವಣೆಯನ್ನು ತರಲಿದೆಯಾ ಎಂದು ಕಾದುನೋಡಬೇಕಿದೆ.

ಇದನ್ನೂ ಓದಿ: ಕೊರೊನಾ ಸೋಂಕಿತರ ಜೀವ ಉಳಿಸಿದ 2ಡಿಜಿ ಔಷಧ; ಬೆಂಗಳೂರಿನಲ್ಲಿ ಮೂರಕ್ಕೆ ಮೂರು ಪ್ರಯೋಗವೂ ಯಶಸ್ವಿ

Published On - 1:52 pm, Sat, 5 June 21

156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ