ಬೆಳಗಾವಿಯಲ್ಲಿ 20 ಮಕ್ಕಳ ಮೇಲೆ ಕೊವಿಡ್ ಲಸಿಕೆ ಪ್ರಯೋಗ! ಸದ್ಯ ಅಡ್ಡ ಪರಿಣಾಮ ಬೀರಿಲ್ಲ; ಮುಂದೇನು?
Zydus cadila Zycov d: 12 ತಿಂಗಳ ಕಾಲ ಮಕ್ಕಳ ಮೇಲೆ ನಿಗಾ ಇಡಲಾಗುತ್ತೆ. ಕೋವ್ಯಾಕ್ಸಿನ್, ಕೋವಿಶೀಲ್ಡ್ ಲಸಿಕೆ ಇಂಟ್ರಾ ಮಸ್ಕ್ಯೂಲರ್ ಕೊಡಲಾಗುತ್ತೆ. ಝೈಕೋವ ಡಿ ಲಸಿಕೆಯನ್ನು ಇಂಟ್ರಾ ಡರ್ಮಲ್ ರೂಟ್‌ನಲ್ಲಿ ನೀಡಲಾಗಿದೆ -ಬೆಳಗಾವಿ ಜೀವನ್ ರೇಖಾ ಆಸ್ಪತ್ರೆಯ ನಿರ್ದೇಶಕ ಡಾ. ಅಮಿತ್ ಭಾತೆ
ಬೆಳಗಾವಿ: ಸರ್ವಾಂತರ್ಯಾಮಿ ಕೊರೊನಾ ಸೋಂಕನ್ನು ಕಟ್ಟಿಹಾಕಲು ಸರ್ವರಿಗೂ ಕೊರೊನಾ ಲಸಿಕೆ ನೀಡುವ ಕಾರ್ಯ ಜಾರಿಯಲ್ಲಿದೆ. ಮಧ್ಯೆ ಮಧ್ಯೆ ಒಂದಷ್ಟು ಸಂಕಷ್ಟಗಳು ಎದುರಾಗಿವೆಯಾದರೂ ಎಲ್ಲರಿಗೂ ಕೊರೊನಾ ವ್ಯಾಕ್ಸಿನ್ ನೀಡಲು ಸರ್ಕಾರ ದೃಢ ನಿರ್ಧಾರ ಮಾಡಿದಂತಿದೆ. ಈ ನಿಟ್ಟಿನಲ್ಲಿ ಇತ್ತೀಚೆಗೆ 12 ರಿಂದ 18 ವರ್ಷದವರಿಗೂ ಲಸಿಕೆ ನೀಡಲು ಫರ್ಮಾನು ಹೊರಡಿಸಿದೆ. ಅದರ ಮುಂದುವರಿದ ಭಾಗವಾಗಿ ಇದೀಗ 18 ವರ್ಷ ವಯಸ್ಸಿನ ಮಕ್ಕಳಿಗೂ ಕೊರೊನಾ ಲಸಿಕೆ ನೀಡಲು ಯೋಜನೆ ಜಾರಿಯಲ್ಲಿದೆ.
ಸದ್ಯಕ್ಕೆ ಬೆಳಗಾವಿಯಲ್ಲಿ ಮಕ್ಕಳ ಮೇಲೆ ಕೊವಿಡ್ ಲಸಿಕೆ ಪ್ರಯೋಗ ನಡೆದಿದೆ. 12 ರಿಂದ 18 ವರ್ಷದೊಳಗಿನ ಮಕ್ಕಳ ಮೇಲೆ ಜೀವನ್ ರೇಖಾ ಆಸ್ಪತ್ರೆಯಲ್ಲಿ ಕೊವಿಡ್ ಲಸಿಕೆ ಪ್ರಯೋಗ ನಡೆದಿದೆ. ಝೈಕೋವ್ ಡಿ ಲಸಿಕೆಯ ಕ್ಲಿನಿಕಲ್ ಟ್ರಯಲ್ ಇದಾಗಿದೆ. ಜೈಡಸ್ ಕ್ಯಾಡಿಲಾ ಕಂಪನಿ ಅಭಿವೃದ್ಧಿ ಪಡಿಸಿರುವ ಝೈಕೋವ್ ಡಿ (ZyCoV-D) ಲಸಿಕೆ ಇದಾಗಿದೆ.
ಯಶಸ್ವಿಯಾದ್ರೆ ದೇಶದಲ್ಲಿ ಇದು 4ನೆಯ ಲಸಿಕೆ!
ಈಗಾಗಲೇ ಬೆಳಗಾವಿಯಲ್ಲಿ 20 ಮಕ್ಕಳ ಮೇಲೆ ಝೈಕೋವ್ ಡಿ ಲಸಿಕೆಯ ಕ್ಲಿನಿಕಲ್ ಟ್ರಯಲ್ ಮಾಡಿದ್ದೇವೆ. ಮೊದಲ ಲಸಿಕೆ ಪಡೆದ 28 ದಿನಕ್ಕೆ ಎರಡನೇ ಡೋಸ್, 56ನೇ ದಿನಕ್ಕೆ 3ನೇ ಡೋಸ್ ನೀಡಿದ್ದೇವೆ. ಯಾವ ಮಕ್ಕಳ ಮೇಲೂ ಸಹ ಅಡ್ಡ ಪರಿಣಾಮ ಬೀರಿಲ್ಲ. ಕಾಲಕಾಲಕ್ಕೆ ರಕ್ತದ ಮಾದರಿ ಪಡೆದು ರೋಗ ನಿರೋಧಕ ಶಕ್ತಿ ಪರೀಕ್ಷಿಸಲಾಗುತ್ತಿದೆ. ವಯಸ್ಕರಿಗಾಗಿ ನಾವು ಈಗಾಗಲೇ ಸೆಕೆಂಡ್ ಫೇಸ್ ಕ್ಲಿನಿಕಲ್ ಟ್ರಯಲ್ ನಡೆಸಿದ್ದೇವೆ. 12 ತಿಂಗಳ ಕಾಲ ಮಕ್ಕಳ ಮೇಲೆ ನಿಗಾ ಇಡಲಾಗುತ್ತೆ. ಕೋವ್ಯಾಕ್ಸಿನ್, ಕೋವಿಶೀಲ್ಡ್ ಲಸಿಕೆ ಇಂಟ್ರಾ ಮಸ್ಕ್ಯೂಲರ್ ಕೊಡಲಾಗುತ್ತೆ. ಝೈಕೋವ ಡಿ ಲಸಿಕೆಯನ್ನು ಇಂಟ್ರಾ ಡರ್ಮಲ್ ರೂಟ್‌ನಲ್ಲಿ ನೀಡಲಾಗಿದೆ ಎಂದು ಬೆಳಗಾವಿಯಲ್ಲಿ ಜೀವನ್ ರೇಖಾ ಆಸ್ಪತ್ರೆಯ ನಿರ್ದೇಶಕ ಡಾ. ಅಮಿತ್ ಭಾತೆ ಹೇಳಿದ್ದಾರೆ.
ಇನ್ನು, ಎರಡರಿಂದ 18 ವರ್ಷಗಳ ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆ ಅನೌನ್ಸ್ ಮಾಡಿದ್ದಾರೆ. ಜೀವನ್ ರೇಖಾ ಆಸ್ಪತ್ರೆ ಸೈಟ್ ಸೆಲೆಕ್ಷನ್ ಆದ್ರೆ ನಮ್ಮ ಆಸ್ಪತ್ರೆಯಲ್ಲೂ ಮಕ್ಕಳಿಗೆ ಕೋವ್ಯಾಕ್ಸಿನ್ ಕ್ಲಿನಿಕಲ್ ಟ್ರಯಲ್ ನಡೆಸಲಾಗುತ್ತೆ ಎಂದು ಡಾ.ಅಮಿತ್ ಭಾತೆ ತಿಳಿಸಿದ್ದಾರೆ. ಅಹಮದಾಬಾದ್ ಮೂಲದ ಝೈಡಸ್ ಕ್ಯಾಡಿಲಾ (Zydus cadila) ಔಷಧ ಉತ್ಪನ್ನ ಕಂಪನಿಯಿದಾಗಿದೆ. ಭಾರತದಲ್ಲಿ ತಯಾರಾಗುತ್ತಿರುವ 4ನೆಯ ಲಸಿಕೆ ಇದಾಗಿದೆ.
(Ahmedabad-based Zydus Cadila ZyCoV-D clinical trial in belagavi jeevan rekha hospital finds success)