ಕೊರೊನಾಗೆ ತಾಯಿಯನ್ನು ಕಳೆದುಕೊಂಡ ಶಾಸಕ ಪಿ. ರಾಜೀವ್, ಫೇಸ್​ಬುಕ್​ನಲ್ಲಿ ಮನ ಮಿಡಿಯುವ ಸಂದೇಶ

ಜನ್ಮನೀಡಿ, ಎದೆ ಹಾಲುಣಿಸಿ, ಕೈತುತ್ತು ನೀಡಿ, ಸೆರಗಿನಿಂದ ಮೈ ಒರೆಸಿ, ಅಕ್ಕರೆಯಿಂದ ಬದುಕಿನ ಮೌಲ್ಯಗಳನ್ನು ತಿಳಿಸಿ ಬೆಳೆಸಿದ ನನ್ನವ್ವ ಕರೊನಾಗೆ ಬಲಿಯಾಗಿ ಇಂದು ನನ್ನನ್ನು ಅನಾಥವಾಗಿಸಿದಳು. ಆಕೆಯ ಅಗಲಿಕೆ ನನ್ನ ಹೃದಯವನ್ನು ಅಲುಗಾಡಿಸಿದೆ.

ಕೊರೊನಾಗೆ ತಾಯಿಯನ್ನು ಕಳೆದುಕೊಂಡ ಶಾಸಕ ಪಿ. ರಾಜೀವ್, ಫೇಸ್​ಬುಕ್​ನಲ್ಲಿ ಮನ ಮಿಡಿಯುವ ಸಂದೇಶ
ಕುಡಚ್ಚಿ ಶಾಸಕ ಪಿ.ರಾಜೀವ್ ತನ್ನ ತಾಯಿ ಜೊತೆಗಿನ ಕೊನೆ ಕ್ಷಣ
Follow us
ಆಯೇಷಾ ಬಾನು
|

Updated on: May 20, 2021 | 12:16 PM

ಬೆಳಗಾವಿ: ಕೊರೊನಾ ಮಹಾಮಾರಿ ಗುಪ್ತಗಾಮಿನಿಯಂತೆ ಕಣ್ಣಿಗೆ ಕಾಣಿಸದೆ ಜನರ ದೇಹ ಸೇರಿ ಹಿಂಸಿಸಿ ಬಲಿ ಪಡೆಯುತ್ತಿದೆ. ಇದೇ ಸೋಂಕಿಗೆ ಕುಡಚಿ ಬಿಜೆಪಿ ಶಾಸಕ ಪಿ. ರಾಜೀವ್ ತಮ್ಮ ತಾಯಿಯನ್ನು ಕಳೆದುಕೊಂಡಿದ್ದಾರೆ. ಈ ಬಗ್ಗೆ ಸ್ವತಃ ರಾಜೀವ್ ತಮ್ಮ ಫೇಸ್​ಬುಕ್ ಖಾತೆಯಲ್ಲಿ ನೋವನ್ನು ಹಂಚಿಕೊಂಡಿದ್ದು ನನ್ನ ಮನೆಯ ವಾತಾವರಣ ಸದ್ಯಕ್ಕೆ ಹೆಚ್ಚು ಸೋಂಕುಪೀಡಿತವಾಗಿರುವುದರಿಂದ ಸಾಂತ್ವನಕ್ಕೆ ಯಾರೂ ಮನೆಯ ಬಳಿ ಬರಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಬಿಜೆಪಿ ಶಾಸಕ ಪಿ. ರಾಜೀವ್  ಫೇಸ್​ಬುಕ್ ಸಂದೇಶ ಹೀಗಿದೆ: ಜನ್ಮನೀಡಿ, ಎದೆ ಹಾಲುಣಿಸಿ, ಕೈತುತ್ತು ನೀಡಿ, ಸೆರಗಿನಿಂದ ಮೈ ಒರೆಸಿ, ಅಕ್ಕರೆಯಿಂದ ಬದುಕಿನ ಮೌಲ್ಯಗಳನ್ನು ತಿಳಿಸಿ ಬೆಳೆಸಿದ ನನ್ನವ್ವ ಕೊರೊನಾಗೆ ಬಲಿಯಾಗಿ ಇಂದು ನನ್ನನ್ನು ಅನಾಥವಾಗಿಸಿದಳು. ಆಕೆಯ ಅಗಲಿಕೆ ನನ್ನ ಹೃದಯವನ್ನು ಅಲುಗಾಡಿಸಿದೆ.

ತಲೆಯ ಮೇಲೆ ಕೈಹೊತ್ತು ಕುಳಿತ ರಾಜೀವ ನಾನು, ನನ್ನ ಹೆಂಡತಿ, ಎರಡು ಮಕ್ಕಳು, ಇಬ್ಬರು ಆಪ್ತ ಸಹಾಯಕರು ಕರೊನಾದಿಂದ ಚೇತರಿಸಿಕೊಳ್ಳುವಷ್ಟರಲ್ಲಿ ತಾಯಿಯವರು ಸೋಂಕಿಗೆ ಒಳಗಾಗಿದ್ದರಿಂದ ಅವರ ಆರೈಕೆಯಲ್ಲಿ ನಾನೇ ತೊಡಗಿದ್ದರಿಂದ ಮತ್ತು ನನ್ನಕ್ಕ ಹಾಗೂ ಅಕ್ಕನ ಮಗ ಚಿಕಿತ್ಸೆಯನ್ನು ಮನೆಯಲ್ಲಿಯೇ ಪಡೆಯುತ್ತಿರುವುದರಿಂದ ಯಾರಿಗೂ ತಿಳಿಸದೆ ಮಾರ್ಗಸೂಚಿಯನ್ವಯ ಅಂತ್ಯಸಂಸ್ಕಾರವನ್ನು ನೆರವೇರಿಸಿರುತ್ತೇನೆ. ನನ್ನ ಮನೆಯ ವಾತಾವರಣ ಸದ್ಯಕ್ಕೆ ಹೆಚ್ಚು ಸೋಂಕುಪೀಡಿತವಾಗಿರುವುದರಿಂದ ಯಾರೂ ಸಹ ಸಾಂತ್ವನ ಹೇಳುವುದಕ್ಕಾಗಿ ಆಗಮಿಸ ಬಾರದೆಂದು ವಿನಂತಿಸುತ್ತೇನೆ.

ಆದಷ್ಟು ಬೇಗ ನನ್ನ ನನ್ನ ಸಾಮಾಜಿಕ ಕರ್ತವ್ಯಕ್ಕೆ ಹಾಜರಾಗುತ್ತೇನೆಂದು ತಮ್ಮಲ್ಲಿ ಕೋರಿಕೊಳ್ಳುತ್ತೇನೆ. ಪಿ.ರಾಜೀವ್.

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್