ಹೊಸ ರೀತಿಯ ಕೊರೊನಾ ಟೆಸ್ಟ್ ನಡೆಸಲು ಒಪ್ಪಿಗೆ; ಭಾರತೀಯ ವಿಜ್ಞಾನ ಸಂಸ್ಥೆ ಸಹಯೋಗದ ಸ್ಟಾರ್ಟ್ಅಪ್ಗೆ ಅನುಮತಿ
ಸಂಸ್ಥೆಯ ಮುಖ್ಯಸ್ಥರು ಹೇಳುವಂತೆ ಇದು ಪ್ರತಿಕಾಯಗಳನ್ನು ಕಂಡುಹಿಡಿಯಲು ಸಹಕರಿಸುವ ಪರೀಕ್ಷೆಯಾಗಿರುವ ಕಾರಣ ಕೊರೊನಾ ಲಸಿಕೆ ವಿತರಣೆಗೂ ಮುಂಬರುವ ದಿನಗಳಲ್ಲಿ ಸಹಕಾರಿಯಾಗಲಿದೆ. ಈ ಪರೀಕ್ಷೆಯ ಫಲಿತಾಂಶವನ್ನು ಪುಟ್ಟ ಸಾಧನದ ಮೂಲಕವೇ ಕೈಯಲ್ಲಿ ಹಿಡಿದು ತಿಳಿದುಕೊಳ್ಳಬಹುದಾಗಿದ್ದು, ಬಳಸಿ ಎಸೆಯಬಹುದಾದ ಸ್ಟ್ರಿಪ್ಗಳನ್ನು ಅದು ಹೊಂದಿರಲಿದೆ.
ಕೊರೊನಾ ಎರಡನೇ ಅಲೆ ವೈದ್ಯಕೀಯ ಲೋಕಕ್ಕೆ ಹೊಸ ಸವಾಲೊಡ್ಡಿ ನಿಂತಿದೆ. ಕಳೆದ ಬಾರಿ ಕೊರೊನಾ ವೈರಾಣು ಪತ್ತೆಗೆ ಬಳಸುತ್ತಿದ್ದ ವಿಧಾನಗಳಿಗೂ ಈ ವರ್ಷ ವೈರಾಣು ಪತ್ತೆಯಾಗದೇ ಸೋಂಕಿತರನ್ನು ಗುರುತಿಸುವುದೇ ಸವಾಲಾಗಿದೆ. ಇಂತಹ ಸಂದರ್ಭದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯ ಕೃಪಾಪೋಷಿತ ಸ್ಟಾರ್ಟ್ಅಪ್ ಒಂದು ನೂತನ ಮಾದರಿಯ ಕೊರೊನಾ ಪರೀಕ್ಷಾ ವಿಧಾನವನ್ನು ಪರಿಚಯಿಸಿದ್ದು ಅದು ದೇಹದಲ್ಲಿನ ರೋಗ ನಿರೋಧಕ ಶಕ್ತಿ ಹೇಗೆ ಕೆಲಸ ಮಾಡುತ್ತಿದೆ ಎಂದು ಪತ್ತೆಹಚ್ಚುವುದಕ್ಕೂ ಸಹಾಯ ಮಾಡುವ ನಿರೀಕ್ಷೆ ಇದೆ ಎಂದು ಪರೀಕ್ಷಾ ವಿಧಾನವನ್ನು ಅಭಿವೃದ್ಧಿಪಡಿಸಿದ ತಜ್ಞರು ಹೇಳಿದ್ದಾರೆ.
ಪಥ್ಶೋಧ್ ಹೆಲ್ತ್ಕೇರ್ ವತಿಯಿಂದ ಈ ಪರೀಕ್ಷಾ ವಿಧಾನವನ್ನು ಅಭಿವೃದ್ಧಿಪಡಿಸಲಾಗಿದ್ದು, ಭಾರತೀಯ ವಿಜ್ಞಾನ ಸಂಸ್ಥೆ ಹೇಳುವಂತೆ ಇದು ಕೊವಿಡ್ 19 IgM ಹಾಗೂ IgG ಪ್ರತಿಕಾಯಗಳನ್ನು ಪತ್ತೆಹಚ್ಚಲು ಸಹಕರಿಸಲಿದೆ. ಕೊವಿಡ್ 19 ವೈರಾಣುವಿನ ಗ್ಲೈಕೋಪ್ರೋಟೀನ್ಗೆ ಸಂಬಂಧಿಸಿದಂತೆ ಇದು ಪ್ರತಿಕಾಯಗಳನ್ನು ಪತ್ತೆ ಹಚ್ಚಲು ಎಲೆಕ್ಟ್ರೋಕೆಮಿಕಲ್ ರೆಡಾಕ್ಸ್ ಚಟುವಟಿಕೆಯ ಆಧಾರದ ಮೇಲೆ ಕಾರ್ಯ ನಿರ್ವಹಿಸಲಿದೆ.
Startup @PathShodh incubated @SiDIISc has developed a diagnostic test for COVID-19. It is based on measuring the electrochemical redox activity of IgM & IgG antibodies specific to SARS-CoV-2 spike glycoprotein.https://t.co/aG6i6vWWfP pic.twitter.com/GYh2V9mz7d
— IISc Bangalore (@iiscbangalore) May 19, 2021
ಸಂಸ್ಥೆಯ ಮುಖ್ಯಸ್ಥರು ಹೇಳುವಂತೆ ಇದು ಪ್ರತಿಕಾಯಗಳನ್ನು ಕಂಡುಹಿಡಿಯಲು ಸಹಕರಿಸುವ ಪರೀಕ್ಷೆಯಾಗಿರುವ ಕಾರಣ ಕೊರೊನಾ ಲಸಿಕೆ ವಿತರಣೆಗೂ ಮುಂಬರುವ ದಿನಗಳಲ್ಲಿ ಸಹಕಾರಿಯಾಗಲಿದೆ. ಈ ಪರೀಕ್ಷೆಯ ಫಲಿತಾಂಶವನ್ನು ಪುಟ್ಟ ಸಾಧನದ ಮೂಲಕವೇ ಕೈಯಲ್ಲಿ ಹಿಡಿದು ತಿಳಿದುಕೊಳ್ಳಬಹುದಾಗಿದ್ದು, ಬಳಸಿ ಎಸೆಯಬಹುದಾದ ಸ್ಟ್ರಿಪ್ಗಳನ್ನು ಅದು ಹೊಂದಿರಲಿದೆ ಎಂದಿದ್ದಾರೆ. ತಂತ್ರಜ್ಞಾನವನ್ನೇ ಹೆಚ್ಚು ಅವಲಂಬಿಸಿ ಅಭಿವೃದ್ಧಿಪಡಿಸಲಾಗಿರುವ ಈ ಪರೀಕ್ಷಾ ವಿಧಾನವು ಗೊಂದಲ ಮುಕ್ತವಾಗಿರಲಿದೆ. ಅಲ್ಲದೇ ಇದನ್ನು ಸ್ಮಾರ್ಟ್ಫೋನ್ಗೆ ಸಂಪರ್ಕಿಸುವ ರೀತಿಯಲ್ಲೂ ಅಭಿವೃದ್ಧಿಪಡಿಸಲಾಗುತ್ತಿದ್ದು, ಅತಿ ಕಡಿಮೆ ಸಮಯದಲ್ಲಿ ಹೆಚ್ಚಿನ ಪರೀಕ್ಷೆ ನಡೆಸಬಹುದಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಕೊವಿಡ್ ಪರೀಕ್ಷೆಯನ್ನು ಮನೆಯಲ್ಲಿ ನಾವೇ ಮಾಡಿಕೊಳ್ಳಬಹುದು; ಐಸಿಎಂಆರ್ನಿಂದ ಬಿಡುಗಡೆಯಾಯ್ತು ಹೊಸ ಕಿಟ್