ಭಾರತದಲ್ಲಿ ಕೊರೊನಾ 2ನೇ ಅಲೆ ಕೊನೆ ಯಾವಾಗ? ಮೂರನೇ ಅಲೆಯ ಪ್ರಾರಂಭಕ್ಕೆ ಇನ್ನೆಷ್ಟು ತಿಂಗಳು ಬಾಕಿ?-ಇಲ್ಲಿದೆ ನೋಡಿ ತಜ್ಞರು ನೀಡಿದ ವರದಿ

ತಮಿಳುನಾಡಿನಲ್ಲಿ ಮೇ 29ರಿಂದ 31ರ ಮಧ್ಯದಲ್ಲಿ ಒಮ್ಮೆ ಕೊರೊನಾ ಸೋಂಕಿತರ ಸಂಖ್ಯೆ ಉಲ್ಬಣವಾಗುತ್ತದೆ ಎಂದು ಸಮಿತಿಯ ಸದಸ್ಯರಲ್ಲಿ ಒಬ್ಬರಾದ ಐಐಟಿ ಕಾನ್ಪುರದ ಪ್ರೊಫರೆಸರ್​ ಮನೀಂದ್ರಾ ಅಗರ್​ವಾಲ್​ ತಿಳಿಸಿದ್ದಾರೆ.

ಭಾರತದಲ್ಲಿ ಕೊರೊನಾ 2ನೇ ಅಲೆ ಕೊನೆ ಯಾವಾಗ? ಮೂರನೇ ಅಲೆಯ ಪ್ರಾರಂಭಕ್ಕೆ ಇನ್ನೆಷ್ಟು ತಿಂಗಳು ಬಾಕಿ?-ಇಲ್ಲಿದೆ ನೋಡಿ ತಜ್ಞರು ನೀಡಿದ ವರದಿ
ಪ್ರಾತಿನಿಧಿಕ ಚಿತ್ರ
Follow us
Lakshmi Hegde
|

Updated on: May 19, 2021 | 9:15 PM

ಭಾರತದಲ್ಲಿ ಸದ್ಯ ಕೊರೊನಾ ಎರಡನೇ ಅಲೆ ಸಿಕ್ಕಾಪಟೆ ಉಲ್ಬಣಕ್ಕೇರಿದ್ದು, ಇದು ಜುಲೈ ವೇಳೆಗೆ ತಗ್ಗಲಿದೆ. ಹಾಗೇ ಅದಾದ 6-8ತಿಂಗಳಲ್ಲಿ ಮತ್ತೆ ಮೂರನೇ ಅಲೆ ಶುರುವಾಗಲಿದೆ ಎಂದು ಕೇಂದ್ರ ವಿಜ್ಞಾನ ಸಚಿವಾಲಯದ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದಿಂದ ರಚಿಸಲ್ಪಟ್ಟ ಮೂವರು ವಿಜ್ಞಾನಿಗಳ ಸಮಿತಿ ವರದಿ ನೀಡಿದೆ. ಮೇ ಅಂತ್ಯದ ಹೊತ್ತಿಗೆ ದೇಶದಲ್ಲಿ ಒಂದು ದಿನಕ್ಕೆ 1.5 ಲಕ್ಷ ಕೊರೊನಾ ಪ್ರಕರಣಗಳು ದಾಖಲಾಗುತ್ತವೆ. ಜೂನ್​ ಅಂತ್ಯದ ಹೊತ್ತಿಗೆ ದಿನವೊಂದಕ್ಕೆ ದಾಖಲಾಗುವ ಕೊರೊನಾ ಕೇಸ್​ಗಳ ಸಂಖ್ಯೆ ಸುಮಾರು 20,000 ಕ್ಕೆ ಇಳಿಯುತ್ತದೆ ಎಂದೂ ಈ ತಜ್ಞರ ಸಮಿತಿ ತನ್ನ ವರದಿಯಲ್ಲಿ ತಿಳಿಸಿದೆ.

ಇನ್ನು ಮಹಾರಾಷ್ಟ್ರ, ಉತ್ತರಪ್ರದೇಶ, ಕರ್ನಾಟಕ, ಮಧ್ಯಪ್ರದೇಶ, ಜಾರ್ಖಂಡ, ರಾಜಸ್ಥಾನ, ಕೇರಳ, ಉತ್ತರಾಖಂಡ್​, ಗುಜರಾತ್​, ಹರ್ಯಾಣ, ದೆಹಲಿ, ಗೋವಾ ರಾಜ್ಯಗಳಲ್ಲಿ ಅದಾಗಲೇ ಕೊರೊನಾ ಉತ್ತುಂಗಕ್ಕೆ ತಲುಪಿದೆ. ಇದರ ಹೊರತಾಗಿ, ತಮಿಳುನಾಡಿನಲ್ಲಿ ಮೇ 29ರಿಂದ 31ರ ಮಧ್ಯದಲ್ಲಿ ಒಮ್ಮೆ ಕೊರೊನಾ ಸೋಂಕಿತರ ಸಂಖ್ಯೆ ಉಲ್ಬಣವಾಗುತ್ತದೆ ಎಂದು ಸಮಿತಿಯ ಸದಸ್ಯರಲ್ಲಿ ಒಬ್ಬರಾದ ಐಐಟಿ ಕಾನ್ಪುರದ ಪ್ರೊಫರೆಸರ್​ ಮನೀಂದ್ರಾ ಅಗರ್​ವಾಲ್​ ತಿಳಿಸಿದ್ದಾರೆ. ಇನ್ನು ಅಸ್ಸಾಂನಲ್ಲಿ 20-21ರಂದು, ಮೇಘಾಲಯದಲ್ಲಿ ಮೇ 30ರಹೊತ್ತಿಗೆ ಹಾಗೇ ತ್ರಿಪುರದಲ್ಲಿ ಮೇ 26-27ರ ಹೊತ್ತಿಗೆ ಕೊರೊನಾ ಉಲ್ಬಣಗೊಳ್ಳಲಿದೆ ಎಂದೂ ಹೇಳಿದ್ದಾರೆ.

ಕೊರೊನಾದ ಮೂರನೇ ಅಲೆ ಸುಮಾರು 6-8ತಿಂಗಳು ಬಿಟ್ಟು ಮತ್ತೊಮ್ಮೆ ಅಬ್ಬರಿಸಲಿದೆ. ಈಗೇನಾಗುತ್ತಿದೆಯೋ ಅದೇ ಮರುಕಳಿಸುತ್ತದೆ. ಅಕ್ಟೋಬರ್​ವರೆಗೆ ಖಂಡಿತ ಮೂರನೇ ಅಲೆಯ ಭಯ ಇಲ್ಲ ಎಂದೂ ತಜ್ಞರ ಸಮಿತಿ ಅಭಿಪ್ರಾಯ ಪಟ್ಟಿದೆ. ಹಾಗಾಗಿ ಕೊರೊನಾ ಎರಡನೇ ಅಲೆ ಮುಗಿದರೂ ಮುನ್ನೆಚ್ಚರಿಕೆ ವಹಿಸಬೇಕು ಎಂದೂ ಹೇಳಿದ್ದಾರೆ.

ಇದನ್ನೂ ಓದಿ: ರೆಮಿಡಿಸಿವಿರ್ ಆಯ್ತು, ಈಗ ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಅಂಫೋಟೆರಿಸಿನ್ ಬಿ ಇಂಜೆಕ್ಷನ್ ಸಹ ಸಿಗುತ್ತಿಲ್ಲ!

In India Covid 19 second wave to end in July third wave after 6 months report by Experts

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್