AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಿಎಪಿ ರಸಗೊಬ್ಬರ ಮೇಲಿನ ಸಬ್ಸಿಡಿಯನ್ನು 140% ಹೆಚ್ಚಿಸಿ ರೈತರಿಗೆ ದೊಡ್ಡ ಕೊಡುಗೆ ನೀಡಿದ ಕೇಂದ್ರ ಸರ್ಕಾರ

ನವದೆಹಲಿ:  ಡೈ ಅಮೋನಿಯಂ ಫಾಸ್ಫೇಟ್​ ಅಥವಾ ಡಿಎಪಿ ಎಂದೇ ಜನರಿಗೆ ಹೆಚ್ಚ್ಚು ಪರಿಚಿತವಿರುವ ರಸಗೊಬ್ಬರ ಮೇಲಿನ ಸಬ್ಸಿಡಿಯನ್ನು ಶೇಕಡಾ 140ರಷ್ಟು ಹೆಚ್ಚಿಸುವ ಐತಿಹಾಸಿಕ ಮತ್ತು ರೈತ-ಸ್ನೇಹಿ ನಿರ್ಧಾರವನ್ನು ಕೇಂದ್ರ ಸರ್ಕಾರ ಬುಧವಾರದಂದು ತೆಗೆದುಕೊಂಡಿದೆ. ಇನ್ನು ಮೇಲೆ ರೈತರು ಒಂದು ಮೂಟೆ ಡಿಎಪಿ ಮೇಲೆ ರೂ. 500 ರ ಬದಲಿಗೆ ರೂ 1,200 ಸಬ್ಸಿಡಿ ಪಡೆಯಲಿದ್ದಾರೆ. ಅಂದರೆ, ರೂ 2,400ಗಳಿಗೆ ಒಂದು ಮೂಟೆ ಸಿಗುತ್ತಿದ್ದ ಡಿಎಪಿ ಈಗ ರೂ 1,200 ಗಳಿಗೆ ಸಿಗಲಿದೆ. ಈ ನಿರ್ಣಯದಿಂದ ಸರ್ಕಾರದ ಮೇಲೆ […]

ಡಿಎಪಿ ರಸಗೊಬ್ಬರ ಮೇಲಿನ ಸಬ್ಸಿಡಿಯನ್ನು 140% ಹೆಚ್ಚಿಸಿ ರೈತರಿಗೆ ದೊಡ್ಡ ಕೊಡುಗೆ ನೀಡಿದ ಕೇಂದ್ರ ಸರ್ಕಾರ
ಪ್ರಧಾನಿ ನರೇಂದ್ರ ಮೋದಿ
ಅರುಣ್​ ಕುಮಾರ್​ ಬೆಳ್ಳಿ
|

Updated on: May 20, 2021 | 12:10 AM

Share

ನವದೆಹಲಿ:  ಡೈ ಅಮೋನಿಯಂ ಫಾಸ್ಫೇಟ್​ ಅಥವಾ ಡಿಎಪಿ ಎಂದೇ ಜನರಿಗೆ ಹೆಚ್ಚ್ಚು ಪರಿಚಿತವಿರುವ ರಸಗೊಬ್ಬರ ಮೇಲಿನ ಸಬ್ಸಿಡಿಯನ್ನು ಶೇಕಡಾ 140ರಷ್ಟು ಹೆಚ್ಚಿಸುವ ಐತಿಹಾಸಿಕ ಮತ್ತು ರೈತ-ಸ್ನೇಹಿ ನಿರ್ಧಾರವನ್ನು ಕೇಂದ್ರ ಸರ್ಕಾರ ಬುಧವಾರದಂದು ತೆಗೆದುಕೊಂಡಿದೆ. ಇನ್ನು ಮೇಲೆ ರೈತರು ಒಂದು ಮೂಟೆ ಡಿಎಪಿ ಮೇಲೆ ರೂ. 500 ರ ಬದಲಿಗೆ ರೂ 1,200 ಸಬ್ಸಿಡಿ ಪಡೆಯಲಿದ್ದಾರೆ. ಅಂದರೆ, ರೂ 2,400ಗಳಿಗೆ ಒಂದು ಮೂಟೆ ಸಿಗುತ್ತಿದ್ದ ಡಿಎಪಿ ಈಗ ರೂ 1,200 ಗಳಿಗೆ ಸಿಗಲಿದೆ. ಈ ನಿರ್ಣಯದಿಂದ ಸರ್ಕಾರದ ಮೇಲೆ ರೂ 14,775 ಕೋಟಿಗಳ ಹೆಚ್ಚುವರಿ ಹೊರೆ ಬೀಳಲಿದೆ

ರಸಗೊಬ್ಬರ ವಿಷಯಕ್ಕೆ ಸಂಬಂಧಿಸಿದಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಬುಧವಾರದಂದು ಒಂದು ಉನ್ನತಮಟ್ಟದ ಸಭೆಯಯನ್ನು ನಡೆಸಿದರು. ಸದರಿ ಸಭೆಯಲ್ಲಿ ರಸಗೊಬ್ಬರಗಳ ಬೆಲೆಯ ಸಮಗ್ರ ಮಾಹಿತಿಯನ್ನು ಪ್ರಧಾನಿಗಳಿಗೆ ವಿವರಿಸಲಾಯಿತು.

ಅಂತರರಾಷ್ಟ್ರೀಯ ಮಟ್ಟದಲ್ಲಿ ಫಾಸ್ಫಾರಿಕ್ ಆ್ಯಸಿಡ್ ಮತ್ತು ಅಮೋನಿಯಗಳ ಬೆಲೆ ಹೆಚ್ಚುತ್ತಿರುವುದರಿಂದ ರಸಗೊಬ್ಬರಗಳ ಬೆಲೆಯೂಈ ಜಾಸ್ತಿಯಾಗುತ್ತಿದೆ ಎಂಬ ಅಂಶವನ್ನು ಸಭೆಯಲ್ಲಿ ಚರ್ಚಿಸಲಾಯಿತು. ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದಲ್ಲಿ ರಸಗೊಬ್ಬರದ ಬೆಲೆ ಹೆಚ್ಚುತ್ತಿದ್ದರೂ ಭಾರತದಲ್ಲಿ ರೈತರು ಅದನ್ನು ಹಳೆಯ ಬೆಲೆಗೆ ಪಡೆದುಕೊಳ್ಳವಂತಾಗಬೇಕು ಎಂದು ಪ್ರಧಾನ ಮಂತ್ರಿಗಳು ಒತ್ತಿ ಹೇಳಿದರು.

ಆ ಹಂತದಲ್ಲೇ ಡಿಎಪಿ ರಸಗೊಬ್ಬರ ಮೇಲಿನ ಸಬ್ಸಿಡಿಯನ್ನು ಶೇಕಡಾ 140ರಷ್ಟು ಅಂದರೆ ಪ್ರತಿ ಮೂಟೆ ಮೇಲೆ ಅದನ್ನು ಪ್ರಸ್ತುತ ರೂ.500 ರಿಂದ ರೂ 1200 ಗಳಿಗೆ ಹೆಚ್ಚಿಸುವ ಐತಿಹಾಸಿಕ ನಿರ್ಣಯವನ್ನು ತೆಗೆದುಕೊಳ್ಳಲಾಯಿತು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಿಎಪಿ ರಸಗೊಬ್ಬರದ ಬೆಲೆ ಹೆಚ್ಚಿದ್ದಾಗ್ಯೂ ಭಾರತದಲ್ಲಿ ಅದರ ಹಳೆಯ ಬೆಲೆ ರೂ. 1200 ಪ್ರತಿ ಮೂಟೆಯಂತೆ ಮಾರಲು ಸಭೆಯಲ್ಲಿ ನಿರ್ಣಯಿಸಲಾಯಿತು. ಬೆಲೆಯೇರಿಕೆಯ ಎಲ್ಲ ಹೊರೆಯನ್ನು ಕೇಂದ್ರ ಸರ್ಕಾರ ವಹಿಸಿಕೊಳ್ಳುವುದಾಗಿ ಪ್ರಧಾನಿಗಳು ಹೇಳಿದರು.

ಹಿಂದೆ ಯಾವತ್ತೂ ಒಂದು ಚೀಲ ರಸಗೊಬ್ಬರದ ಮೇಲೆ ಇಷ್ಟೊಂದು ಸಬ್ಸಿಡಿಯನ್ನು ಏಕಕಾಲಕ್ಕೆ ಏರಿಸಿರಲಿಲ್ಲ.

ಕಳೆದ ವರ್ಷ ಒಂದು ಮೂಟೆ ಡಿಎಪಿಯ ಅಸಲು ಬೆಲೆ ರೂ. 1,700 ಅಗಿತ್ತು. ಅದರಲ್ಲಿ ಕೇಂದ್ರ ಸರ್ಕಾರ ಪ್ರತಿ ಮೂಟೆ ಮೇಲೆ ರೂ. 500ಗಳ ಸಬ್ಸಿಡಿಯನ್ನು ನೀಡುತ್ತಿತ್ತು. ಹಾಗಾಗಿ ರಸಗೊಬ್ಬರ ತಯಾರಿಸುವ ಕಂಪನಿಗಳು ಅದನ್ನು ಪ್ರತಿ ಚೀಲಕ್ಕೆ ರೂ. 1,200 ರಂತೆ ರೈತರಿಗೆ ಮಾರುತ್ತಿದ್ದವು.

ಅಂತರರಾಷ್ಟ್ರೀಯ ಮಟ್ಟದಲ್ಲಿ ಫಾಸ್ಫಾರಿಕ್ ಆ್ಯಸಿಡ್ ಮತ್ತು ಅಮೋನಿಯ ಬೆಲೆ ಇತ್ತೀಚಿನ ದಿನಗಳಲ್ಲಿ ಶೇಕಡಾ 60 ರಿಂದ ಶೇಕಡಾ 70 ರಷ್ಟು ಹೆಚ್ಚಾಗಿದೆ. ಹಾಗಾಗಿ, ಈಗಿನ ಡಿಎಪಿ ಬೆಲೆ ರೂ 2,400 ಇದೆ. ಸರ್ಕಾರ ನೀಡುತ್ತಿದ್ದ ರೂ 500 ಸಬ್ಸಿಡಿಯನ್ನು ಅದರಲ್ಲಿ ಕಳೆದರೆ ಒಂದು ಮೂಟೆ ಡಿಎಪಿಯ ಬೆಲೆ ರೂ 1,900 ಆಗಬೇಕಿತ್ತು. ಇವತ್ತಿನ ನಿರ್ಣಯದಿಂದಾಗಿ ರೈತರಿಗೆ ಅದು ರೂ 1,200ಗಳಿಗೆ ಲಭ್ಯವಾಗಲಿದೆ.

ರೈತರ ಅಭ್ಯುದಯಕ್ಕಾಗಿ ಸರ್ಕಾರ ಬದ್ಧವಾಗಿದೆ ಮತ್ತು ಅವರಿಗೆ ಬೇಲೆಯೇರಿಕೆಯ ಬಿಸಿ ತಾಕದಂತೆ ನೋಡಿಕೊಳ್ಳಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುವುದು ಎಂದು ಪ್ರಧಾನ ಮಂತ್ರಿಗಳು ಹೇಳಿದರು.

ಕೇಂದ್ರವು ಪ್ರತಿ ವರ್ಷ ರೂ 80,000 ಕೋಟಿಗಳನ್ನು ರಾಸಾಯನಿಕ ರಸಗೊಬ್ಬರಗಳ ಮೇಲೆ ವ್ಯಯಿಸುತ್ತದೆ. ಈಗ ಸಬ್ಸಿಡಿಯನ್ನು ಹೆಚ್ಚಿಸಿರುವುದರಿಂದ ಅದರ ಮೇಲೆ ಈ ಖಾರಿಫ್​ ಋತುವಿನಲ್ಲಿ ರೂ 14,775 ಕೋಟಿಗಳ ಹೆಚ್ಚುವರಿ ಹೊರೆ ಬೀಳಲಿದೆ.

ಅಕ್ಷಯ ತೃತೀಯದಂದು ಪ್ರಧಾನ ಮಂತ್ರಿ ಕಿಸಾನ ಯೋಜನೆಯಡಿ ರೈತರ ಖಾತೆಗಳಿಗೆ ನೇರವಾಗಿ 20,667 ಕೋಟಿ ರೂಪಾಯಿಗಳನ್ನು ವರ್ಗಾಯಿಸಿದ ನಂತರ ಕೇಂದ್ರ ಸರ್ಕಾರವು ರೈತರ ಹಿತಾಸಕ್ತಿಯ ದೃಷ್ಟಿಯಿಂದ ತೆಗೆದುಕೊಂಡಿರುವ ಎರಡನೇ ಪ್ರಮುಖ ನಿರ್ಧಾರ ಇದಾಗಿದೆ.

ಇದನ್ನೂ ಓದಿ: PM KISAN Scheme: ರೈತರ ಖಾತೆಗೆ ಬಂತು ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಹಣ, ಚೆಕ್ ಮಾಡುವುದು ಹೇಗೆ?

ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ