- Kannada News Photo gallery Sadhu Kokila gets honorary doctorate from Gangubai Hangal University Entertainment News in Kannada
ಗೌರವ ಡಾಕ್ಟರೇಟ್ ಪಡೆದ ಸಾಧು ಕೋಕಿಲ; ಸಾಧು ನಹೀ ಡಾಕ್ಟರ್ ಸಾಧು ಬೋಲೋ
ಹಾಸ್ಯ ನಟನಾಗಿ ಮಾತ್ರವಲ್ಲದೇ ಸಂಗೀತ ಕ್ಷೇತ್ರದಲ್ಲಿ ಕೂಡ ಸಾಧು ಕೋಕಿಲ ಅವರು ಗಮನ ಸೆಳೆದಿದ್ದಾರೆ. ಅವರ ಸಾಧನೆಯನ್ನು ಗುರುತಿಸಿ ಗೌರವ ಡಾಕ್ಟರೇಟ್ ನೀಡಲಾಗಿದೆ. ಈ ಗೌರವ ಸಿಕ್ಕಿರುವುದಕ್ಕೆ ಸೋಧು ಕೋಕಿಲ ಅವರಿಗೆ ಬಹಳ ಹೆಮ್ಮೆ ಮತ್ತು ಸಂತಸ ಆಗಿದೆ. ಅಭಿಮಾನಿಗಳಿಗೆ ಫೋಟೋಗಳ ಜೊತೆಯಲ್ಲಿ ಅವರು ಈ ಗುಡ್ ನ್ಯೂಸ್ ನೀಡಿದ್ದಾರೆ.
Updated on:Jan 24, 2025 | 1:23 PM

ಸಾಧು ಕೋಕಿಲ ಅವರು ಈಗ ಡಾಕ್ಟರ್ ಸಾಧು ಕೋಕಿಲ. ಗೌರವ ಡಾಕ್ಟರೇಟ್ ಪಡೆದಿರುವ ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ. ನಟನಾಗಿ, ಸಂಗೀತ ನಿರ್ದೇಶಕನಾಗಿ ಸಾಧು ಕೋಕಿಲ ಅವರು ಹಲವು ವರ್ಷಗಳ ಕಾಲ ಕಲಾ ಸೇವೆ ಮಾಡಿದ್ದಾರೆ.

‘ಸಂಗೀತ ಕ್ಷೇತ್ರದಲ್ಲಿನ ನನ್ನ ಸಾಧನೆ, ಸೇವೆಯನ್ನು ಗುರುತಿಸಿ ಗೌರವ ಡಾಕ್ಟರೇಟ್ ನೀಡಿ ಪುರಸ್ಕರಿಸಿದ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಕುಲಪತಿಗಳಿಗೆ ನನ್ನ ಧನ್ಯವಾದಗಳು’ ಎಂದು ಸಾಧು ಕೋಕಿಲ ಹೇಳಿದ್ದಾರೆ.

‘ಈ ನನ್ನ ಸಂಗೀತ ಪಯಣದಲ್ಲಿ ಬೆಂಬಲವಾಗಿ ನಿಂತ ಎಲ್ಲ ಸಂಗೀತ ಪ್ರೇಮಿಗಳು ಮತ್ತು ಹಿತೈಷಿಗಳಿಗೆ ನನ್ನ ಅನಂತಾನಂತ ವಂದನೆಗಳು’ ಎಂಬ ಕ್ಯಾಪ್ಷನ್ ಜೊತೆಗೆ ಸಾಧು ಕೋಕಿಲ ಅವರು ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಗೌರವ ಡಾಕ್ಟರೇಟ್ ಪಡೆದಿರುವ ಬಗ್ಗೆ ಸಾಧು ಕೋಕಿಲ ಅವರಿಗೆ ತುಂಬ ಹೆಮ್ಮೆ ಇದೆ. ಹಾಗಾಗಿ ಅವರು ‘ಸಾಧು ನಹಿ ಡಾಕ್ಟರ್ ಸಾಧು ಬೋಲೋ’ ಎಂದು ಇನ್ಸ್ಟಾಗ್ರಾಮ್ನಲ್ಲಿ ಫೋಟೋ ಪೋಸ್ಟ್ ಮಾಡಿದ್ದಾರೆ. ಅಭಿಮಾನಿಗಳು ಅಭಿನಂದನೆ ತಿಳಿಸಿದ್ದಾರೆ.

ಹಲವು ವರ್ಷಗಳಿಂದ ಸಾಧು ಕೋಕಿಲ ಅವರು ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ನಟನಾಗಿ, ಡೈರೆಕ್ಟರ್ ಆಗಿ, ಸಂಗೀತ ನಿರ್ದೇಶಕನಾಗಿ, ಗಾಯಕನಾಗಿ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಅವರಿಗೆ ಇರುವ ಅಭಿಮಾನಿ ಬಳಗ ಕೂಡ ತುಂಬ ದೊಡ್ಡದು.
Published On - 6:45 pm, Sun, 19 January 25



















