ಬಜೆಟ್​ನಲ್ಲಿ ಚಿನ್ನದ ಮೇಲೆ ಆಮದು ಸುಂಕ ಹೆಚ್ಚಳ ಸಾಧ್ಯತೆ; ಚಿನ್ನ ಖರೀದಿಗೆ ಇದು ಸಮಯವಾ?

ನವದೆಹಲಿ, ಜನವರಿ 29: ಮುಂಬರುವ ಬಜೆಟ್ ಬಳಿಕ ಚಿನ್ನದ ಬೆಲೆ ಹೆಚ್ಚಳವಾಗುವ ಸಾಧ್ಯತೆ ಇದೆ. ಆಮದು ಸುಂಕ ಹೆಚ್ಚಳ ಮಾಡಬಹುದು ಎನ್ನುವ ಸುದ್ದಿ ದಟ್ಟವಾಗಿ ಹಬ್ಬುತ್ತಿದೆ. ಈ ತೆರಿಗೆ ಏರಿಕೆ ಆದರೆ ಭಾರತದಲ್ಲಿ ಚಿನ್ನದ ಬೆಲೆಯೂ ಏರಿಕೆ ಆಗುತ್ತದೆ. ಹೂಡಿಕೆದಾರರು ಚಿನ್ನದ ಮೇಲೆ ಹಣ ಹಾಕಲು ಇದು ಸಕಾಲವಾಗಿರಬಹುದು. ಫೆಬ್ರುವರಿ 1ರಂದು ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡಿಸಲಿದ್ದಾರೆ.

ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 19, 2025 | 8:14 PM

2024-25ರ ಬಜೆಟ್​ನಲ್ಲಿ ಕೇಂದ್ರ ಸರ್ಕಾರ ಚಿನ್ನದ ಮೇಲಿನ ಆಮದು ಸುಂಕವನ್ನು ಕಡಿಮೆ ಮಾಡಿತ್ತು. ಹಣದುಬ್ಬರ ಹೆಚ್ಚಳ ಇದ್ದರಿಂದ ಮತ್ತು ಚಿನ್ನದ ಕಳ್ಳ ಸಾಗಾಣಿಕೆ ತಪ್ಪಿಸಲು ಹಾಗೂ ಇತರ ಕಾರಣದಿಂದ ಸರ್ಕಾರ ಈ ಕ್ರಮ ತೆಗೆದುಕೊಂಡಿತ್ತು. ಚಿನ್ನ ಮತ್ತು ಬೆಳ್ಳಿ ಗಟ್ಟಿಗಳ ಮೇಲಿನ ಕಸ್ಟಮ್ಸ್ ಡ್ಯೂಟಿಯನ್ನು ಶೇ. 15ರಿಂದ ಶೇ. 6ಕ್ಕೆ ಇಳಿಸಲಾಯಿತು.2

Gold Items2

1 / 6
ಸರ್ಕಾರದ ಈ ಕ್ರಮದಿಂದ ಚಿನ್ನದ ಬೆಲೆ ಸಾಕಷ್ಟು ಕಡಿಮೆ ಆಯಿತು. ಆದರೆ, ಚಿನ್ನದ ಆಮದು ಪ್ರಮಾಣ ಗಣನೀಯವಾಗಿ ಹೆಚ್ಚಿದೆ. ಜುಲೈ ಕೊನೆಯ ವಾರದಲ್ಲಿ ಬಜೆಟ್ ಮಂಡನೆಯಾಗಿದ್ದು. ಆಗಸ್ಟ್ ತಿಂಗಳಲ್ಲಿ ಚಿನ್ನದ ಆಮದು ಶೇ. 104ರಷ್ಟು ಹೆಚ್ಚಾಯಿತು. ಅದೇ ವೇಳೆ, ಭಾರತದ ಆಭರಣ ಮತ್ತು ಹರಳುಗಳ ರಫ್ತು ಶೇ. 23ರಷ್ಟು ಕಡಿಮೆ ಆಗಿರುವುದು ಬೆಳಕಿಗೆ ಬಂದಿದೆ.

Gold Items 5

2 / 6
ಆಮದು ಸುಂಕ ಕಡಿಮೆ ಆದ ಬಳಿಕ ಭಾರತಕ್ಕೆ ಚಿನ್ನ ಇನ್ನೂ ದೊಡ್ಡ ಹೊರೆಯಾಗಿದೆ. ಆಮದು ಮೊತ್ತ ಹೆಚ್ಚಾಗಿದೆ. ಆಭರಣ ಇತ್ಯಾದಿಯ ರಫ್ತು ಕಡಿಮೆ ಆಗಿದೆ. ಇದರಿಂದ ಭಾರತದ ಒಟ್ಟಾರೆ ವ್ಯಾಪಾರ ಕೊರತೆ ಹೆಚ್ಚಾಗಲು ಇದರ ಕೊಡುಗೆಯೂ ಸಾಕಷ್ಟಿದೆ.

Gold Items 8

3 / 6
ಭಾರತದಲ್ಲಿ ಚಿನ್ನದ ಉತ್ಪಾದನೆ ತೀರಾ ನಗಣ್ಯ ಇದೆ. ಆದರೆ, ಆಭರಣಕ್ಕಾಗಿ ಚಿನ್ನಕ್ಕೆ ಭಾರೀ ಬೇಡಿಕೆ ಇದೆ. ಚಿನ್ನ ಬಳಕೆಯಲ್ಲಿ ಚೀನಾ ಬಿಟ್ಟರೆ ಭಾರತವೇ ಹೆಚ್ಚು. ಚಿನ್ನದ ಅಗತ್ಯಕ್ಕಾಗಿ ಭಾರತವು ಆಮದು ಮೇಲೆಯೇ ಹೆಚ್ಚಿನ ಅವಲಂಬನೆ ಹೊಂದಿದೆ. ಇದು ವಿದೇಶೀ ವಿನಿಮಯ ಕ್ಷೇತ್ರದಲ್ಲಿ ಭಾರತಕ್ಕೆ ಹಿನ್ನಡೆಯೂ ಆಗುತ್ತದೆ.

Gold Items 13

4 / 6
ಚಿನ್ನದ ಆಮದಿನ ಮೇಲೆ ನಿಯಂತ್ರಣ ತರಲು ಸರ್ಕಾರ ವಿವಿಧ ಮಾರ್ಗೋಪಾಯಗಳನ್ನು ಹುಡುಕಿದೆ. 2025ರ ಬಜೆಟ್​ನಲ್ಲಿ ಚಿನ್ನದ ಮೇಲೆ ಮೂಲಭೂತ ಆಮದು ಸುಂಕವನ್ನು ಸ್ವಲ್ಪ ಮಟ್ಟಿಗೆ ಹೆಚ್ಚಿಸುವ ಸಾಧ್ಯತೆ ದಟ್ಟವಾಗಿದೆ ಎನ್ನುವಂತಹ ಸುದ್ದಿಗಳಿವೆ. ಈ ಆಮದು ಸುಂಕ ಹೆಚ್ಚಾದಲ್ಲಿ ಭಾರತದಲ್ಲಿ ಚಿನ್ನ ಇನ್ನಷ್ಟು ದುಬಾರಿಯಾಗಲಿದೆ.

Gold Items 18

5 / 6
ಬಜೆಟ್​ನಲ್ಲಿ ಆಮದು ಸುಂಕ ಹೆಚ್ಚಿಸುವ ಸಾಧ್ಯತೆ ದಟ್ಟವಾಗಿದ್ದು, ಚಿನ್ನದ ಬೆಲೆ ಹೆಚ್ಚುವ ಸಾಧ್ಯತೆ ಇರುವುದರಿಂದ ಈ ಹಳದಿ ಲೋಹದ ಮೇಲೆ ಹೂಡಿಕೆ ಮಾಡಬೇಕೆನ್ನುವವರಿಗೆ ಇದು ಸಕಾಲವಾಗಿರಬಹುದು. ಆಭರಣ ಖರೀದಿಸಬೇಕೆನ್ನುವವರು ಕೂಡ ಮುಂದಿನ ಕೆಲ ದಿನಗಳಲ್ಲಿ ಚಿನ್ನಕ್ಕೆ ಮುಗಿಬೀಳಬೇಕಾಗಬಹುದು.

Gold Items 23

6 / 6
Follow us