ವಿಜಯಪುರ ನಗರದ ಜಿಕೆ ಪಾಟೀಲ್ ಸಭಾ ಭವನದಲ್ಲಿ ನಡೆದ ಮದುವೆ ಕಾರ್ಯಕ್ರಮಕ್ಕೆ ಬಂದ ಸಾವಿರಾರು ಜನರಿಗೆ ಸಾವಯವ ಕೃಷಿ, ಆಹಾರ ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಚಿಂತನಾ ಗೋಷ್ಠಿಗಳನ್ನು ನಡೆಸಲಾಯಿತು. ಇಂಡಿಯ ಪರಮ ಪೂಜ್ಯ ಡಾ. ಸ್ವರೂಪಾನಾಂದ ಸ್ವಾಮೀಜಿ, ಹೈದರಾಬಾದ್ನ ಭಾರತೀಯ ಸಿರಿಧಾನ್ಯ ಸಂಶೋಧನಾ ಕೇಂದ್ರ ಸಂಶೋಧಕ ಡಾ. ಬಿ ಸಿ ಸಂಗಪ್ಪ, ಕೃಷಿ ಮಹಾವಿದ್ಯಾಲಯ ವಿಜಯಪುರದ ಸಹ ವಿಸ್ತರಣಾ ನಿರ್ದೇಶಕರಾದ ಡಾ. ರವೀಂದ್ರ ಬೆಳ್ಳಿ ಅವರು ಕೃಷಿ, ಸಾವಯವ ಕೃಷಿ ಹಾಗೂ ಸಿರಿಧಾನ್ಯಗಳ ಬಳಕೆ ಆಹಾರ ಕುರಿತು ವಿಶೇಷ ಉಪನ್ಯಾಸ ನೀಡಿದರು.