ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?

ಮಂಜುನಾಥ ಸಿ.
|

Updated on: Jan 18, 2025 | 7:17 PM

Bigg Boss Kannada season 11: ಬಿಗ್​ಬಾಸ್ ಕನ್ನಡ ಸೀಸನ್ 11ರ ಕಟ್ಟ ಕಡೆಯ ವಾರದ ಪಂಚಾಯಿತಿ ನಡೆದಿದೆ. ಈ ಬಾರಿ ಶನಿವಾರವೇ ಒಬ್ಬ ಸ್ಪರ್ಧಿಯ ಎಲಿಮಿನೇಷನ್ ನಡೆಯಲಿದೆ. ಭಾನುವಾರವೂ ಒಬ್ಬ ಸ್ಪರ್ಧಿ ಮನೆಗೆ ಹೋಗಲಿದ್ದಾರೆ. ಶನಿವಾರದ ಎಲಿಮಿನೇಷನ್ ಭಿನ್ನಾಗಿರಲಿದೆ. ಸ್ಪರ್ಧಿಗಳ ಸೂಟ್​ಕೇಸ್​ ನಲ್ಲಿಯೇ ಅವರ ಎಲಿಮಿನೇಷನ್ ಟಿಕೆಟ್ ಇರಲಿದೆ.

ಬಿಗ್​ಬಾಸ್ ಕನ್ನಡ ಸೀಸನ್ 11ರ ಫಿನಾಲೆಗೆ ಕೆಲವೇ ದಿನಗಳು ಬಾಕಿ ಇದೆ. ಈ ಸೀಸನ್​ನ ಕೊನೆಯ ವಾರದ ಪಂಚಾಯಿತಿ ಇಂದು (ಜನವರಿ 18) ಶುರುವಾಗಿದೆ. ಈಗಾಗಲೇ ಮೂವರು ಸ್ಪರ್ಧಿಗಳು ಫಿನಾಲೆ ತಲುಪಿದ್ದಾರೆ. ಈ ವಾರ ಇಬ್ಬರು ಮನೆಗೆ ಹೋಗಲಿದ್ದಾರೆ. ಅದರಲ್ಲಿ ಒಬ್ಬರು ಶನಿವಾರ ಇನ್ನೊಬ್ಬರು ಭಾನುವಾರ ಮನೆಗೆ ಹೋಗಲಿದ್ದಾರೆ. ಸುದೀಪ್ ಈ ಬಾರಿ ಭಿನ್ನವಾಗಿ ಎಲಿಮಿನೇಷನ್ ಮಾಡಿಸಿದ್ದಾರೆ. ಎಲ್ಲರ ಸೂಟ್​ಕೇಸ್​ ಅನ್ನು ಅವರ ಮುಂದೆಯೇ ಇರಿಸಿ, ಆ ಸೂಟ್​ಕೇಸ್ ಒಳಗೆ ಅವರ ಭವಿಷ್ಯ ಇರಿಸಿದ್ದಾರೆ. ಯಾರ ಸೂಟ್​ಕೇಸ್​ನಲ್ಲಿ ಸಂದೇಶ ಇದೆಯೋ ಅವರು ಮನೆಗೆ ಹೋಗಲಿದ್ದಾರೆ. ರಜತ್, ಧನರಾಜ್, ಉಗ್ರಂ ಮಂಜು, ಗೌತಮಿ ಮತ್ತು ಭವ್ಯಾ ಇವರಲ್ಲಿ ಮನೆಗೆ ಹೋಗೋದು ಯಾರು?

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ