ಮುಡಾ ಹಗರಣ: ಸಿದ್ದರಾಮಯ್ಯ ರಾಜೀನಾಮೆ ನೀಡುವ ಅವಶ್ಯಕತೆಯಿಲ್ಲವೆಂದ ಡಿಕೆ ಶಿವಕುಮಾರ್

ಮುಡಾ ಹಗರಣ: ಸಿದ್ದರಾಮಯ್ಯ ರಾಜೀನಾಮೆ ನೀಡುವ ಅವಶ್ಯಕತೆಯಿಲ್ಲವೆಂದ ಡಿಕೆ ಶಿವಕುಮಾರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 18, 2025 | 6:29 PM

ಮುಡಾ ಹಗರಣದ ತನಿಖೆ ನಡೆಸಿದ ಜಾರಿ ನಿರ್ದೇಶನಾಲಯ ಬಹುಕೋಟಿ ಅವ್ಯವಹಾರ ನಡೆದಿರುವುದನ್ನು ದೃಢಪಡಿಸಿದೆ. ಪ್ರಕರಣದ ಹಿನ್ನೆಲೆಯಲ್ಲಿ ತಮ್ಮ ಕುಟುಂಬದ ವಿರುದ್ಧ ಅರೋಪ ಕೇಳಿ ಬಂದಾಗ ಸಿದ್ದರಾಮಯ್ಯ ತನಿಖೆ ನಡೆಯಲಿ, ಆರೋಪಗಳು ಸಾಬೀತಾದರೆ ರಾಜೀನಾಮೆ ನೀಡುವೆ ಎಂದಿದ್ದರು. ಇದೇ ಕಾರಣಕ್ಕೆ ಬಿಜೆಪಿ ನಾಯಕರು ಸಿಎಂ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ.

ಹುಬ್ಬಳ್ಳಿ: ಬೆಳಗಾವಿಯಲ್ಲಿ ಮಂಗಳವಾರದಂದು (ಜನವರಿ 21) ಎಐಸಿಸಿ ಅಧಿವೇಶನ ಶತಮಾನೋತ್ಸವ ಆಚರಣೆ ನಡೆಯಲಿದ್ದು ಕಾಂಗ್ರೆಸ್ ನಾಯಕರು ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಇಂದು ಹುಬ್ಬಳ್ಳಿಯಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ರಂದೀಪ್ ಸುರ್ಜೆವಾಲಾ ಸಭೆಗಳನ್ನು ನಡೆಸಿದರು. ಅದಕ್ಕೂ ಮೊದಲು ಮಾಧ್ಯಮಗಳ ಜತೆ ಮಾತಾಡಿದ ಶಿವಕುಮಾರ್ ಮುಡಾ ಹಗರಣದಲ್ಲಿ ಜಾರಿ ನಿರ್ದೇಶನಾಲಯ ₹300 ಕೋಟಿ ಹಗರಣ ನಡೆದ ಬಗ್ಗೆ ವರದಿ ನೀಡಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ರಾಜೀನಾಮೆ ನೀಡುತ್ತಾರಾ ಎಂದು ಬಿಜೆಪಿ ನಾಯಕರು ಕೇಳುತ್ತಿದ್ದಾರೆ ಎಂದು ನಮ್ಮ ಪ್ರತಿನಧಿ ಕೇಳಿದ್ದಕ್ಕೆ, ಯಾರೂ ರಾಜೀನಾಮೆ ನೀಡುವ ಅವಶ್ಯಕತೆಯಿಲ್ಲ, ಬಿಜೆಪಿ ನಾಯಕರು ಮೊದಲು ತಮ್ಮ ಹಗರಣಗಳ ಚರ್ಚೆ ಮಾಡಲಿ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಬೆಳಗಾವಿ ಎಐಸಿಸಿ ಅಧಿವೇಶನದಲ್ಲಿ ಪಾಲ್ಗೊಳ್ಳಲು ಶೆಟ್ಟರ್​​ರನ್ನು ಆಹ್ವಾನಿಸಿದ್ದಕ್ಕೆ ಸಮರ್ಥನೆ ನೀಡಿದ ಶಿವಕುಮಾರ್