ಕೊರೊನಾಗೆ ರಾಜಸ್ಥಾನ ಮಾಜಿ ಮುಖ್ಯಮಂತ್ರಿ ಜಗನ್ನಾಥ್ ಪಹಡಿಯಾ ನಿಧನ, ಗಣ್ಯರಿಂದ ಕಂಬನಿ
ಜಗನ್ನಾಥ ಪಹಡಿಯಾ 1980-81ರಲ್ಲಿ ರಾಜಸ್ಥಾನದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಹಾಗೂ ಪಹಡಿಯಾ ಹರಿಯಾಣ ಮತ್ತು ಬಿಹಾರದ ಮಾಜಿ ಗವರ್ನರ್ ಸಹ ಆಗಿದ್ದರು. ಆದರೆ ಕೊರೊನಾಗೆ ತಮ್ಮ 89ನೆ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ.
ಮಹಾಮಾರಿ ಕೊರೊನಾ ಸೋಂಕಿಗೆ ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಜಗನ್ನಾಥ್ ಪಹಡಿಯಾ(89) ನಿಧನರಾಗಿದ್ದಾರೆ.
ಜಗನ್ನಾಥ ಪಹಡಿಯಾ 1980-81ರಲ್ಲಿ ರಾಜಸ್ಥಾನದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಹಾಗೂ ಪಹಡಿಯಾ ಹರಿಯಾಣ ಮತ್ತು ಬಿಹಾರದ ಮಾಜಿ ಗವರ್ನರ್ ಸಹ ಆಗಿದ್ದರು. ಆದರೆ ಕೊರೊನಾಗೆ ತಮ್ಮ 89ನೆ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ.
ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಜಗನ್ನಾಥ ಪಹಡಿಯಾ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. ಪಹಡಿಯಾ ನಿಧನ ತುಂಬಾ ಆಘಾತ ತಂದಿದೆ. ಕೊರೊನಾ ಕಾರಣದಿಂದಾಗಿ ಪಹಡಿಯಾ ನಮ್ಮನ್ನು ತೊರೆದಿದ್ದಾರೆ. ಅವರ ನಿಧನದಿಂದ ನಾನು ತುಂಬಾ ಆಘಾತಕ್ಕೊಳಗಾಗಿದ್ದೇನೆ. ಮೊದಲಿನಿಂದಲೂ ಅವರಿಗೆ ನನ್ನ ಬಗ್ಗೆ ತುಂಬಾ ಪ್ರೀತಿ ಇತ್ತು” ಎಂದು ಗೆಹ್ಲೋಟ್ ಟ್ವೀಟ್ ಮಾಡಿದ್ದಾರೆ. ಪಹಡಿಯಾ ಅವರ ಸಾವು ಅವರಿಗೆ ವೈಯಕ್ತಿಕ ನಷ್ಟವಾಗಿದೆ ಎಂದು ಅವರು ತಿಳಿಸಿದ್ದಾರೆ.
20 मई (गुरूवार) को राज्य मंत्रिपरिषद की बैठक होगी, जिसमें पूर्व मुख्यमंत्री स्व. श्री जगन्नाथ पहाड़िया जी के निधन पर शोकाभिव्यक्ति होगी। स्व. श्री पहाड़िया के सम्मान में एक दिन का राजकीय शोक रहेगा एवं राष्ट्रीय ध्वज आधा झुका रहेगा, सभी सरकारी कार्यालयों में 20 मई का अवकाश रहेगा।
— Ashok Gehlot (@ashokgehlot51) May 19, 2021
ಮೋದಿ ಸಂತಾಪ ಜಗನ್ನಾಥ್ ಪಹಡಿಯಾ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ. ರಾಜಕೀಯ ಹಾಗೂ ಆಡಳಿತಕ್ಕೆ ಜಗನ್ನಾಥ ಅವರ ಅಮೋಘ ಕಾಣಿಕೆಯನ್ನು ಪ್ರಧಾನಿ ನೆನಪಿಸಿಕೊಂಡಿದ್ದು ಅವರ ಆತ್ಮಕ್ಕೆ ಶಾಂತಿ ಸಿಗಲಿ, ಕುಟುಂಬಸ್ಥರಿಗೆ ನೋವನ್ನು ಭರಿಸೋ ಶಕ್ತಿ ನೀಡಲೆಂದು ಕೋರಿಕೊಂಡಿದ್ದಾರೆ.
Saddened by the demise of former Rajasthan CM, Shri Jagannath Pahadia Ji. In his long political and administrative career, he made noteworthy contributions to further social empowerment. Condolences to his family and supporters. Om Shanti.
— Narendra Modi (@narendramodi) May 20, 2021
ಸರ್ಕಾರ ಗುರುವಾರ ಒಂದು ದಿನದ ಶೋಕಾಚರಣೆಯನ್ನು ಘೋಷಿಸಿದ್ದು, ಈ ಸಂದರ್ಭದಲ್ಲಿ ಸರ್ಕಾರಿ ಕಚೇರಿಗಳನ್ನು ಮುಚ್ಚಲಾಗುವುದು ಮತ್ತು ರಾಷ್ಟ್ರಧ್ವಜ ಅರ್ಧದಷ್ಟು ಹಾರಾಟ ನಡೆಸಲಿದೆ.
ಇದನ್ನೂ ಓದಿ: ಬೇರೊಬ್ಬ ಆಟಗಾರನ ಸ್ಥಾನ ಕಸಿದುಕೊಳ್ಳಲು ನನಗೆ ಮನಸ್ಸಿಲ್ಲ; ತಂಡಕ್ಕೆ ಮರಳದಿರಲು ಕಾರಣ ನೀಡಿದ ಡಿವಿಲಿಯರ್ಸ್