ಬಳ್ಳಾರಿ ಎಸ್ಸಿ ಮತ್ತು ಎಸ್ಟಿ ಹಾಸ್ಟೆಲ್ ದುರವಸ್ಥೆ ಕಂಡು ವಾರ್ಡನ್ನನ್ನು ಮಕ್ಕಳೆದುರೇ ಜರಿದ ಉಪಲೋಕಾಯುಕ್ತ ನ್ಯಾಯಮೂರ್ತಿ ವೀರಪ್ಪ
ಉಪಲೋಕಾಯುಕ್ತ ನ್ಯಾಯಮೂರ್ತಿ ವೀರಪ್ಪ ಅವರು ಭೇಟಿ ನೀಡಿರುವ ಈ ಹಾಸ್ಟೆಲ್ ಅನ್ನು ವಾರ್ಡನ್ ಲಾಡ್ಜ್ ಹಾಗೆ ಬಳಸುತ್ತಿದ್ದಾನಂತೆ, ಹೊರಗಿನವರು ಬಂದು ಇಲ್ಲಿ ಸ್ಟೇ ಮಾಡುತ್ತಾತೆ! ಮಕ್ಕಳಿಗೆ ನೀಡುವ ಆಹಾರದ ಗುಣಮಟ್ಟ ತೀರ ಕಳಪೆ, ಸ್ನಾನಕ್ಕೆ ಬಿಸಿನೀರಿಲ್ಲ, ನಡುಕ ಹುಟ್ಟಿಸುವಂತಿರುವ ಚಳಿಯಲ್ಲಿ ಮಕ್ಕಳು ತಣ್ಣೀರಲ್ಲೇ ಸ್ನಾನ ಮಾಡಬೇಕು. ವಾರ್ಡನ್ನನ್ನು ಸಸ್ಪೆಂಡ್ ಮಾಡುವಂತೆ ಅಧಿಕಾರಿಯೊಬ್ಬರಿಗೆ ನ್ಯಾಯಮೂರ್ತಿ ವೀರಪ್ಪ ಹೇಳುತ್ತಾರೆ.
ಬಳ್ಳಾರಿ: ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ ವೀರಪ್ಪ ಅವರು ಸರ್ಕಾರೀ ಕಚೇರಿ, ಹಾಸ್ಟೆಲ್, ಎಪಿಎಂಸಿ ಯಾರ್ಡ್ ಗಳಿಗೆ ಭೇಟಿ ನೀಡುವುದನ್ನು ಮುಂದುವರಿಸಿದ್ದಾರೆ. ನಗರದ ಎಸ್ಸಿ ಮತ್ತು ಎಸ್ಟಿ ಹಾಸ್ಟೆಲ್ಗೆ ಭೇಟಿ ನೀಡಿದ ಅವರು ಅಲ್ಲಿನ ದುರವಸ್ಥೆಗಳನ್ನು ಕಂಡು ಕೆಂಡಾಮಂಡಲರಾದರು. ಹಾಸ್ಟೆಲ್ ನಲ್ಲಿ ವಾಸವಾಗಿರುವ ವಿದ್ಯಾರ್ಥಿಗಳಿಂದ ಪರಿಸ್ಥಿತಿ ಕೇಳಿ ತಿಳಿದುಕೊಂಡ ನ್ಯಾಯಮೂರ್ತಿ ವೀರಪ್ಪ ಅವರು ವಿದ್ಯಾರ್ಥಿ ಮತ್ತು ಸಾರ್ವಜನಿಕರ ಎದುರು ವಾರ್ಡನ್ (ಹಾಸ್ಟೆಲ್ ಸೂಪರಿಂಟೆಂಡೆಂಟ್) ಅನ್ನು ತರಾಟೆಗೆ ತೆಗೆದುಕೊಂಡರು. ರಾಜ್ಯದ ಎಲ್ಲ ಎಸ್ಸಿ ಎಸ್ಟಿ, ಹಿಂದುಳಿದ ವರ್ಗ ವಿದ್ಯಾರ್ಥಿಗಳ ಹಾಸ್ಟೆಲ್ ಗಳ ಸ್ಥಿತಿ ಹೆಚ್ಚುಕಡಿಮೆ ಹೀಗೆಯೇ ಇದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಉಪ ಲೋಕಾಯುಕ್ತರಾಗಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ.ವೀರಪ್ಪ ನೇಮಕ
Latest Videos