ಹೆಂಡತಿ ಮುಖ ನೋಡುತ್ತಾ ಕೂರಬೇಡಿ ಎಂದಿರುವ ಎಲ್ ಅಂಡ್ ಟಿಯ ಸುಬ್ರಹ್ಮಣ್ಯನ್ ಮಹಿಳೆಯರ ಕ್ಷಮೆ ಕೇಳಬೇಕು: ವಾಟಾಳ್ ನಾಗರಾಜ್

ಹೆಂಡತಿ ಮುಖ ನೋಡುತ್ತಾ ಕೂರಬೇಡಿ ಎಂದಿರುವ ಎಲ್ ಅಂಡ್ ಟಿಯ ಸುಬ್ರಹ್ಮಣ್ಯನ್ ಮಹಿಳೆಯರ ಕ್ಷಮೆ ಕೇಳಬೇಕು: ವಾಟಾಳ್ ನಾಗರಾಜ್

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 18, 2025 | 7:16 PM

ವಾರಕ್ಕೆ 48 ತಾಸು ಕೆಲಸ ಮಾಡಬೇಕೆನ್ನುವುದು ಇಡೀ ಜಗತ್ತು ಒಪ್ಪಿಕೊಂಡಿರುವ ಸತ್ಯವಾಗಿದೆ, ಅದಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮನುಷ್ಯ ರೋಗಗ್ರಸ್ತನಾಗುತ್ತಾನೆ, ಸುಬ್ರಹ್ಮಣ್ಯನ್ ಅವರು ತಮ್ಮ ಹೇಳಿಕೆಗೆ ಮಹಿಳೆಯರ ಕ್ಷಮಾಪಣೆ ಕೇಳಬೇಕು; ಸುಬ್ರಹ್ಮಣ್ಯನ್, ನಾರಾಯಣ ಮೂರ್ತಿ, ಸುಧಾ ಮೂರ್ತಿ ಮೊದಲಾದವರು ಹೇಳೋದೆಲ್ಲ ವೇದವಾಕ್ಯವಲ್ಲ ಎಂದು ವಾಟಾಳ್ ನಾಗರಾಜ್ ಹೇಳಿದರು.

ಬೆಂಗಳೂರು: ವಾರಕ್ಕೆ 70 ತಾಸು ಮತ್ತು 90 ತಾಸು ಕೆಲಸ ಮಾಡಬೇಕೆಂದಿರುವ ಇನ್ಫೋಸಿಸ್ ಮುಖ್ಯಸ್ಥ ನಾರಾಯಣ ಮೂರ್ತಿ ಮತ್ತು ಎಲ್ ಅಂಡ್ ಟಿ ಚೇರ್ಮನ್ ಎಸ್ ಎನ್ ಸುಬ್ರಹ್ಮಣ್ಯನ್ ನೀಡಿರುವ ಹೇಳಿಕೆಗಳನ್ನು ಖ್ಯಾತ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಉಗ್ರವಾಗಿ ಖಂಡಿಸಿದ್ದಾರೆ. ಸುಬ್ರಹ್ಮಣ್ಯನ್ ರನ್ನು ವಿಶೇಷ ತರಾಟೆಗೆ ತೆಗೆದುಕೊಂಡಿರುವ ನಾಗರಾಜ್, ಹೆಂಡತಿಯ ಮುಖ ನೋಡುತ್ತ ಕೂರಬೇಡಿ ಅಂದರೆ ಏನರ್ಥ? ದಿನವಿಡೀ ದುಡಿದು ಮನೆಗೆ ಬರುವ ವ್ಯಕ್ತಿಯೊಬ್ಬ ಹೆಂಡತಿಯ ಮುಖ ನೋಡಿದ ಬಳಿಕವೇ ಉಲ್ಲಾಸಗೊಳ್ಳುತ್ತಾನೆ, ನಿದ್ರೆ, ವಿಶ್ರಾಂತಿ ಅವನಿಗೆ ಬೇಕಾಗುತ್ತದೆ, ಇಲ್ಲದಿದ್ದರೆ ಅವನು ಅನಾರೋಗ್ಯಕ್ಕೊಳಗಾಗುತ್ತಾನೆ, ಸುಬ್ರಹ್ಮಣ್ಯನ್ ಹೇಳಿಕೆ ಮಹಿಳೆಯರ ವಿರುದ್ಧ ಅಪಚಾರ ಮತ್ತು ದಬ್ಬಾಳಿಕೆ ಎಂದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Viral : ವಾರಕ್ಕೆ 90ಗಂಟೆ ಯಾಕೆ ಕೆಲಸ ಮಾಡ್ಬೇಕು? ಎಲ್ ಅಂಡ್ ಟಿ ಮುಖ್ಯಸ್ಥನಿಗೆ ಕೌಂಟರ್ ನೀಡಿದ ಆನಂದ್ ಮಹೀಂದ್ರಾ