ವಿಜಯೇಂದ್ರಗೆ ಜಾರಕಿಹೊಳಿ ಬಚ್ಚಾ ಅಂದಿದ್ದು ತಪ್ಪು, ಅವರ ಪದಬಳಕೆಯನ್ನು ಒಪ್ಪಲಾಗಲ್ಲ: ಪ್ರಲ್ಹಾದ್ ಜೋಶಿ

ವಿಜಯೇಂದ್ರಗೆ ಜಾರಕಿಹೊಳಿ ಬಚ್ಚಾ ಅಂದಿದ್ದು ತಪ್ಪು, ಅವರ ಪದಬಳಕೆಯನ್ನು ಒಪ್ಪಲಾಗಲ್ಲ: ಪ್ರಲ್ಹಾದ್ ಜೋಶಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 18, 2025 | 5:24 PM

ರಾಜ್ಯದಲ್ಲಿ ಚುನಾವಣಾ ಪ್ರಕ್ರಿಯೆ ಶುರುವಾಗಿದೆ ಹಾಗಂತ ಪಕ್ಷದ ರಾಜ್ಯಾಧ್ಯಕ್ಷರ ಬದಲಾವಣೆ ಆಗುತ್ತದೆ ಅಂತ ಭಾವಿಸುವುದು ತಪ್ಪು, ಎಲ್ಲ ರಾಜ್ಯಗಳಲ್ಲಿ ಪ್ರದೇಶ ಬಿಜೆಪಿ ಅಧ್ಯಕ್ಷನ ಆಯ್ಕೆಗೆ ಚುನಾವಣಾ ಪ್ರಕ್ರಿಯೆ ಶುರುವಾಗಿದೆ, ಪ್ರಸ್ತುತ ಅಧ್ಯಕ್ಷನನ್ನು ಬದಲಾಯಿಸುವುದು ಬಿಡೋದು ಪಕ್ಷದ ವರಿಷ್ಠರು ಮತ್ತು ರಾಜ್ಯದ ವೀಕ್ಷಕರಾಗಿರುವ ಶಿವರಾಜ್ ಸಿಂಗ್ ಅವರಿಗೆ ಬಿಟ್ಟ ವಿಚಾರವಾಗಿದೆ ಎಂದು ಜೋಶಿ ಹೇಳಿದರು.

ಬೆಂಗಳೂರು: ನಗರದಲ್ಲಿಂದು ನಮ್ಮ ಪ್ರತಿನಿಧಿಯೊಂದಿಗೆ ಮಾತಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರು ಕಾಂಗ್ರೆಸ್ ಪಕ್ಷ ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ನಿರಾಧಾರ ಆರೋಪಗಳನ್ನು ಮಾಡಿತ್ತು, ಆದರೆ ಸಿದ್ದರಾಮಯ್ಯ ಸರ್ಕಾರದಲ್ಲಿ ಕಮೀಶನ್ ಪ್ರಮಾಣ ಶೇಕಡ 50 ದಾಟಿದೆ ಎಂದರು. ರಮೇಶ್ ಜಾರಕಿಹೊಳಿ ಅವರು ಪಕ್ಷದ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರಗೆ ಬಚ್ಚಾ ಎಂಬ ಪದ ಬಳಸಿದ್ದು ತಪ್ಪು, ಶಾಸಕ ಹಾಗೆಲ್ಲ ಮಾತಾಡಬಾರದು, ವಿಜಯೇಂದ್ರರನ್ನು ರಾಜ್ಯಾಧ್ಯಕ್ಷನಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಆಯ್ಕೆ ಮಾಡಿದ್ದಾರೆ, ಅದನ್ನು ಯಾರೂ ಮರೆಯಬಾರದು ಎಂದು ಜೋಶಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಸಿಟಿ ರವಿಯನ್ನ ಫೇಕ್​ ಎನ್​ಕೌಂಟರ್ ಮಾಡುವ ವಿಚಾರ ಪೊಲೀಸರಿಗಿತ್ತು ಅನಿಸುತ್ತೆ: ಪ್ರಲ್ಹಾದ್ ಜೋಶಿ ಆರೋಪ