ಸಿಟಿ ರವಿಯನ್ನ ಫೇಕ್​ ಎನ್​ಕೌಂಟರ್ ಮಾಡುವ ವಿಚಾರ ಪೊಲೀಸರಿಗಿತ್ತು ಅನಿಸುತ್ತೆ: ಪ್ರಲ್ಹಾದ್ ಜೋಶಿ ಆರೋಪ

ಬಾಗಲಕೋಟೆಯಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ, ಪೊಲೀಸರು ಸಿಟಿ ರವಿ ಅವರನ್ನು ನಕಲಿ ಎನ್‌ಕೌಂಟರ್‌ ಮಾಡುವ ವಿಚಾರದಲ್ಲಿದ್ದರು ಎಂದು ಆರೋಪಿಸಿದ್ದಾರೆ. ಬೆಳಗಾವಿ ಪೊಲೀಸ್ ಕಮಿಷನರ್ ವಿರುದ್ಧವೂ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಟಿ ರವಿ ಅವರ ಬಂಧನ ಮತ್ತು ಪೊಲೀಸರ ದುರ್ವರ್ತನೆಯನ್ನು ಖಂಡಿಸಿ ಬಿಜೆಪಿ ಪ್ರತಿಭಟನೆ ಮಾಡಲಾಗಿದೆ.

ಸಿಟಿ ರವಿಯನ್ನ ಫೇಕ್​ ಎನ್​ಕೌಂಟರ್ ಮಾಡುವ ವಿಚಾರ ಪೊಲೀಸರಿಗಿತ್ತು ಅನಿಸುತ್ತೆ: ಪ್ರಲ್ಹಾದ್ ಜೋಶಿ ಆರೋಪ
ಸಿಟಿ ರವಿಯನ್ನ ಫೇಕ್​ ಎನ್​ಕೌಂಟರ್ ಮಾಡುವ ವಿಚಾರ ಪೊಲೀಸರಿಗಿತ್ತು ಅನಿಸುತ್ತೆ: ಪ್ರಹ್ಲಾದ್ ಜೋಶಿ ಆರೋಪ
Follow us
ರವಿ ಹೆಚ್ ಮೂಕಿ, ಕಲಘಟಗಿ
| Updated By: ಗಂಗಾಧರ​ ಬ. ಸಾಬೋಜಿ

Updated on:Dec 21, 2024 | 9:52 PM

ಬಾಗಲಕೋಟೆ, ಡಿಸೆಂಬರ್​ 21: ಸಿಟಿ ರವಿ ಅವರನ್ನ ಫೇಕ್​ಎನ್​ಕೌಂಟರ್​ ಮಾಡುವ ವಿಚಾರ ಪೊಲೀಸರಿಗೆ ಇತ್ತು ಅನಿಸುತ್ತೆ. ನಾವು ಏನು ಮಾಡಬೇಕು ಅದನ್ನ ನಾವು ಮಾಡುತ್ತೇವೆ. ಈ ಬಗ್ಗೆ ನಾವು ಸುಮ್ಮನೆ ಕೂರುವುದಿಲ್ಲ, ಹೋರಾಟ ಮಾಡುತ್ತೇವೆ ಎಂದು ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ (Pralhad Joshi) ಆರೋಪ ಮಾಡಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅವಕಾಶ ಸಿಕ್ಕರೆ ಸಿ.ಟಿ.ರವಿ ಮುಗಿಸಬೇಕೆಂಬ ಉದ್ದೇಶವಿತ್ತು ಅನಿಸುತ್ತೆ. ಆದರೆ, ಸರಿಯಾದ ಅವಕಾಶ ಸಿಕ್ಕಿಲ್ಲ. ನಮ್ಮ ಎಂಎಲ್​ಸಿ ಕೇಶವಪ್ರಸಾದ್ ಕೂಡ ಅವರ ಹಿಂದೆ ಇದ್ದರು. ನಮಗೆ ಸಿ.ಟಿ.ರವಿ ಅವರ ಲೈವ್ ಲೊಕೇಶನ್ ಸಿಗುತ್ತಿತ್ತು. ಕೆಲವು ಮಾಧ್ಯಮದವರು ಕೂಡ ಬೆನ್ನುಹತ್ತಿದ್ರು, ಧನ್ಯವಾದಗಳು ಎಂದಿದ್ದಾರೆ.

ಇದನ್ನೂ ಓದಿ: ಆ ರಾತ್ರಿ ಕಾಂತಾರದ ದೈವದ ರೀತಿ ವರ್ತಿಸಿದ್ದರಿಂದ ಪೊಲೀಸರಿಂದ ಬಚಾವ್​ ಆದೆ: ಸಿಟಿ ರವಿ ಸ್ಫೋಟಕ ಹೇಳಿಕೆ

ಅಂತಹ ರಾತ್ರಿಯೊಳಗೆ ಬೆಳಗಾವಿ ಮಾಧ್ಯಮದವರು ಬೆನ್ನು ಹತ್ತಿದ್ದರು. ವಿಡಿಯೋ ಮಾಡುತ್ತಿದ್ದರು ಲೊಕೇಶನ್ ಹಾಕುತ್ತಿದ್ದರು. ಇಲ್ಲದೆ ಹೋಗಿದ್ದರೆ ಸಿಟಿ ಅವರನ್ನ ಫೇಕ್​ಎನ್​ಕೌಂಟರ್ ಮಾಡುವಂತ ವಿಚಾರ ಅಲ್ಲಿನ ಪೊಲೀಸ್ ತಂಡಕ್ಕೆ ಇತ್ತು ಅಂತ ನನಗೆ ಅನಿಸುತ್ತದೆ ಎಂದು ಹೇಳಿದ್ದಾರೆ.

ಬೆಳಗಾವಿ ಕಮಿಷನರ್ ದುಷ್ಟ ಕೆಲಸ ಮಾಡಿದ್ದಾರೆ: ಜೋಶಿ ಗರಂ

ಕಾನೂನು ಸಮಾಲೋಚನೆ ತೆಗೆದುಕೊಳ್ಳಲಿಕ್ಕೆ ನಾನು ಸಿಟಿ ರವಿಗೆ ಹೇಳಿದ್ದೇನೆ. ಆ ಪ್ರಕಾರ ಅವರು ಕಾನೂನು ಹೋರಾಟ ಮಾಡುತ್ತಾರೆ. ಸಿಟಿ ರವಿ ಅವರನ್ನ ಬಂಧನ ಮಾಡಿದ ನಂತರ ಅದೇ ದಿನ ರಾತ್ರಿ ಮ್ಯಾಜಿಸ್ಟ್ರೇಟ್ ಮುಂದೆ ಹೋಗಿ ನಿಲ್ಲಿಸುತ್ತಾರೆ. ಇಡೀ ರಾತ್ರಿ ಎಲ್ಲಾ ಕರೆದುಕೊಂಡು ತಮಗೆ ಸಂಬಂಧವಿಲ್ಲದ ಖಾನಾಪುರ ಬಾಗಲಕೋಟೆ, ಧಾರವಾಡ, ಗದಗ ವ್ಯಾಪ್ತಿಯಲ್ಲಿ ಓಡಾಡಿದ್ದಾರೆ. ಬೆಳಗಾವಿ ಕಮಿಷನರ್ ದುಷ್ಟ ಕೆಲಸ ಮಾಡಿದ್ದಾರೆ. ತಮ ವ್ಯಾಪ್ತಿಯಲ್ಲಿ ಬರ ಜಾಗದಲ್ಲಿ ಓಡಾಡಿಸಿದ್ದಾರೆ ಎಂದು ಗರಂ ಆಗಿದ್ದಾರೆ.

ಬನಹಟ್ಟಿಯಲ್ಲಿ ಬಿಜೆಪಿಯಿಂದ ಪ್ರತಿಭಟನೆ 

ಇನ್ನು ಸಿಟಿ ರವಿ ಬಂಧನ ಮತ್ತು ಪೊಲೀಸರ ದುರ್ವರ್ತನೆ ಖಂಡಿಸಿ ಇಂದು ಜಿಲ್ಲೆಯ ಬನಹಟ್ಟಿ ನಗರದಲ್ಲಿ ಬಿಜೆಪಿಯಿಂದ ಪ್ರತಿಭಟನೆ ಮಾಡಲಾಗಿದೆ. ತೇರದಾಳ ಶಾಸಕ ಸಿದ್ದು ಸವದಿ ನೇತೃತ್ವದಲ್ಲಿ ಭದ್ರಣ್ಣವರ ಸರ್ಕಲ್‌ನಲ್ಲಿ ರಸ್ತೆ ತಡೆದು ಪ್ರತಿಭಟನೆ ಮಾಡಲಾಗಿದೆ. ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:51 pm, Sat, 21 December 24

ಬಿಗ್ ಬಾಸ್ ಮನೆಗೆ ನುಗ್ಗಿದ ಅಭಿಮಾನಿಗಳು; ಭಯಬಿದ್ದ ಸ್ಪರ್ಧಿಗಳು
ಬಿಗ್ ಬಾಸ್ ಮನೆಗೆ ನುಗ್ಗಿದ ಅಭಿಮಾನಿಗಳು; ಭಯಬಿದ್ದ ಸ್ಪರ್ಧಿಗಳು
Hanuman Chalisa: ಹನುಮಾನ್ ಚಾಲಿಸಾದ ವಿಶೇಷ ಹಾಗೂ ಮಹತ್ವ
Hanuman Chalisa: ಹನುಮಾನ್ ಚಾಲಿಸಾದ ವಿಶೇಷ ಹಾಗೂ ಮಹತ್ವ
ರವಿ ಮಕರ ರಾಶಿಯಲ್ಲಿ, ಚಂದ್ರ ತುಲಾ ರಾಶಿಯಲ್ಲಿ ಸಂಚಾರ: ದಿನ ಭವಿಷ್ಯ ಇಲ್ಲಿದೆ
ರವಿ ಮಕರ ರಾಶಿಯಲ್ಲಿ, ಚಂದ್ರ ತುಲಾ ರಾಶಿಯಲ್ಲಿ ಸಂಚಾರ: ದಿನ ಭವಿಷ್ಯ ಇಲ್ಲಿದೆ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ಸಂಜು; ವಿಡಿಯೋ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ಸಂಜು; ವಿಡಿಯೋ
ಅತಿ ಎತ್ತರದ ಮಾನವ ಪಿರಮಿಡ್ ನಿರ್ಮಿಸಿ ಭಾರತೀಯ ಸೇನೆಯಿಂದ ವಿಶ್ವ ದಾಖಲೆ
ಅತಿ ಎತ್ತರದ ಮಾನವ ಪಿರಮಿಡ್ ನಿರ್ಮಿಸಿ ಭಾರತೀಯ ಸೇನೆಯಿಂದ ವಿಶ್ವ ದಾಖಲೆ
ಕುಡಿದ ನಶೆಯಲ್ಲಿ ಏನೇನೋ ಮಾತನಾಡಿದ ಎನ್ನುವ ಕಾರಣಕ್ಕೆ ಹೊಡೆದು ಕೊಂದರು!
ಕುಡಿದ ನಶೆಯಲ್ಲಿ ಏನೇನೋ ಮಾತನಾಡಿದ ಎನ್ನುವ ಕಾರಣಕ್ಕೆ ಹೊಡೆದು ಕೊಂದರು!
ಶ್ರೀರಾಮುಲು-ಜನಾರ್ಧನ ರೆಡ್ಡಿ ಜಗಳದ ಹಿನ್ನೆಲೆಯಲ್ಲಿ ಹಿರಿಯರ ಸಭೆ?
ಶ್ರೀರಾಮುಲು-ಜನಾರ್ಧನ ರೆಡ್ಡಿ ಜಗಳದ ಹಿನ್ನೆಲೆಯಲ್ಲಿ ಹಿರಿಯರ ಸಭೆ?
ಯಾರು ಬಿಗ್ ಬಾಸ್ ಗೆಲ್ತಾರೆ ಅಂತ ನಾನು ಹೇಳಲ್ಲ: ಪ್ರಥಮ್ ಖಡಕ್ ಮಾತು
ಯಾರು ಬಿಗ್ ಬಾಸ್ ಗೆಲ್ತಾರೆ ಅಂತ ನಾನು ಹೇಳಲ್ಲ: ಪ್ರಥಮ್ ಖಡಕ್ ಮಾತು
ನಿಯೋಗ ಹೊತ್ತು ತಂದಿದ್ದ ಕಬ್ಬನ್ನು ಕಚೇರಿಯಲ್ಲೇ ಮುರಿದು ತಿಂದ ಸಿದ್ದರಾಮಯ್ಯ
ನಿಯೋಗ ಹೊತ್ತು ತಂದಿದ್ದ ಕಬ್ಬನ್ನು ಕಚೇರಿಯಲ್ಲೇ ಮುರಿದು ತಿಂದ ಸಿದ್ದರಾಮಯ್ಯ
ಕೆಡಿಪಿ ಸಭೆಗಳನ್ನು ಹಗುರವಾಗಿ ಪರಿಗಣಿಸುವ ಪ್ರವೃತ್ತಿ ನಿಲ್ಲಬೇಕು
ಕೆಡಿಪಿ ಸಭೆಗಳನ್ನು ಹಗುರವಾಗಿ ಪರಿಗಣಿಸುವ ಪ್ರವೃತ್ತಿ ನಿಲ್ಲಬೇಕು