Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆ ರಾತ್ರಿ ಕಾಂತಾರದ ದೈವದ ರೀತಿ ವರ್ತಿಸಿದ್ದರಿಂದ ಪೊಲೀಸರಿಂದ ಬಚಾವ್​ ಆದೆ: ಸಿಟಿ ರವಿ ಸ್ಫೋಟಕ ಹೇಳಿಕೆ

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಅವರ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿದ್ದಾರೆ ಎಂಬ ಆರೋಪದ ಮೇಲೆ ಮಾಜಿ ಸಚಿವ, ಬಿಜೆಪಿ ಎಂಎಲ್​ಸಿ ಅವರನ್ನು ಗುರುವಾರ ಬಂಧಿಸಲಾಗಿತ್ತು. ಸಿಟಿ ರವಿಯವರನ್ನು ಬಂಧಿಸಿದ ಪೊಲೀಸರು ಅವರನ್ನು ರಾತ್ರಿವಿಡೀ ವಿವಿಧಡೆ ಸುತ್ತಾಡಿಸಿದ್ದಾರೆ. ಹೀಗೆ ಸುತ್ತಾಡುವಾಗ ಏನೆಲ್ಲ ಘಟನೆಗಳು ನಡೆದವು? ಪೊಲೀಸರು ತಮ್ಮೊಂದಿಗೆ ಯಾವ ರೀತಿ ನಡೆದುಕೊಂಡರು ಎಂಬುವುದನ್ನು ಸಿಟಿ ರವಿಯವರು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಆ ರಾತ್ರಿ ಕಾಂತಾರದ ದೈವದ ರೀತಿ ವರ್ತಿಸಿದ್ದರಿಂದ ಪೊಲೀಸರಿಂದ ಬಚಾವ್​ ಆದೆ: ಸಿಟಿ ರವಿ ಸ್ಫೋಟಕ ಹೇಳಿಕೆ
ಸಿಟಿ ರವಿ
Follow us
ಕಿರಣ್​ ಹನಿಯಡ್ಕ
| Updated By: ವಿವೇಕ ಬಿರಾದಾರ

Updated on: Dec 21, 2024 | 2:57 PM

ಬೆಂಗಳೂರು, ಡಿಸೆಂಬರ್​ 21: ಪೊಲೀಸರು ನನ್ನ ಬಳಿಯ ಫೋನ್​ ಕಿತ್ತುಕೊಳ್ಳಲು ಯತ್ನಿಸಿದರು. ನಾನು ಕಾಂತಾರದ ದೈವದ ರೀತಿಯಲ್ಲಿ ಕೆಲವು ಸಲ ವರ್ತನೆ ಮಾಡಿದೆ. ಹೀಗಾಗಿ ನನ್ನ ಪೋನ್ ಕಿತ್ತುಕೊಳ್ಳಲು ಪೊಲೀಸರಿಗೆ ಆಗಲಿಲ್ಲ ಎಂದು ಮಾಜಿ ಸಚಿವ, ಎಂಎಲ್​ಸಿ ಸಿಟಿ ರವಿ (CT Ravi) ಹೇಳಿದರು. ಬೆಂಗಳೂರಿನಲ್ಲಿ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನ್ನ ಮೇಲೆ ಹಲ್ಲೆ ಆಗಿರುವುದಕ್ಕೆ ವಿಡಿಯೋ ಇದೆ. ನನ್ನ ಮೇಲೆ ಮಾಡಿದ ಆರೋಪ ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ ಇದ್ದಂತೆ. ನನ್ನ ಮೇಲಿನ ಆರೋಪಕ್ಕೆ ಯಾವುದೇ ದಾಖಲೆ ಇಲ್ಲ ಎಂದರು.

ರಾತ್ರಿ ಸುತ್ತಾಡುವಾಗ ಪೊಲೀಸರು ವಾಕಿ-ಟಾಕಿಯಲ್ಲಿ ಕಡಿಮೆ ಮಾತನಾಡುತ್ತಿದ್ದರು, ಪೋನ್​ನಲ್ಲಿ ಹೆಚ್ಚಾಗಿ ಮಾತನಾಡುತ್ತಿದ್ದರು. ಕೆಲವು ಕರೆ ಸೇವ್ ಆಗಿರುವ ನಂಬರಗಳಿಂದ, ಕೆಲವು ಕರೆ ನಂಬರ​ಗಳಿಂದ ಬರುತ್ತಿದ್ದವು. ನನ್ನ ಜೊತೆ ಸ್ಕಾರ್ಪಿಯೋದಲ್ಲಿ ರಾಮದುರ್ಗ ಡಿವೈಎಸ್ಪಿ ಚಿದಂಬರ್​, ಬೆಳಗಾವಿ ಮಾರ್ಕೆಟ್ ಠಾಣೆ ಎಸ್​ಐ ಗಂಗಾಧರ್, ಕಿತ್ತೂರು ಎಸ್​ಐ ಇದ್ದರು ಎಂದು ತಿಳಿಸಿದರು.

ಈಗಲೂ ನನಗೆ ಜೀವ ಬೆದರಿಕೆ ಇದೆ. ನನಗೆ ರಕ್ಷಣೆ ಕೊಡುವುದು ಸರ್ಕಾರದ ಜವಾಬ್ದಾರಿ. ಬೆಳಗಾವಿ ಆಯುಕ್ತ, ಎಸ್​ಪಿ ಮತ್ತು ಇನ್ನತರೆ ಅಧಿಕಾರಿಗಳು ನನ್ನ ಜೊತೆ ನಡೆದುಕೊಂಡ ರೀತಿ ನಿಗೂಢವಾಗಿತ್ತು. ಪೊಲೀಸರ ಅಧಿಕೃತ ಫೋನ್, ಖಾಸಗಿ ಫೋನ್​ ಕಾಲ್​ ಬಗ್ಗೆ ತನಿಖೆ ಆಗಲಿ. ನನ್ನ ಫೋನ್ ಟ್ಯಾಪಿಂಗ್ ಆಗುತ್ತಿದೆ. ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ: ಸಿಟಿ ರವಿಯನ್ನು ಸುತ್ತಾಡಿಸಿದ ಬೆಳಗಾವಿ ಪೊಲೀಸರಿಗೆ ಫೋನ್​ ಕರೆಗಳು: ವಿಡಿಯೋ ವೈರಲ್​

ರಾತ್ರಿ ನನ್ನ ಅಂಕಲಗಿ ಠಾಣೆಗೆ ಕರೆದುಕೊಂಡು ಹೋದರು. ಆಗ ಏನಾದರೂ ತಿನ್ನಿ ಸಾರ್ ನಮ್ಮದು ಕರ್ಮದ ಜೀವನ, ತಿನ್ನಿ ಸಾರ್ ಎಂದರು. ಅಲ್ಲಿಂದ ಆಸ್ಪತ್ರೆಗೆ ಕರೆದುಕೊಂಡು ಬಂದರು. ನಾನು ವೈದ್ಯರಿಗೆ ಪೆಟ್ಟು ಬಿದ್ದಿರುವ ಜಾಗ ತೋರಿಸಿದೆ. ಲಿವರ್​ಗೆ ಸ್ವಲ್ಪ ಪೆಟ್ಟು ಬಿದ್ದಿದೆ ಸ್ಕ್ಯಾನಿಂಗ್ ಮಾಡೋಕೆ ವೈದ್ಯರು ಹೇಳಿದರು. ನಂತರ ನನ್ನ ಹೊರಗೆ ಕೂರಿಸಿ ಪೊಲೀಸರು ಒಳಗೆ ಹೋಗಿ ವೈದ್ಯರ ಜೊತೆಗೆ ಮಾತನಾಡಿದರು ಎಂದು ತಿಳಿಸಿದರು.

ಕಬ್ಬಿನ ಗದ್ದೆಗೆ ಕರೆದುಕೊಂಡು ಹೋಗಿ ಗುಂಡು ಹೊಡೆದು ಸಾಯಿಸಲು ಪ್ಲಾನ್ ಮಾಡಿದ್ದರಾ ಅಂತ ನನಗೆ ಅನುಮಾನವಿದೆ. ಏನೋ ಸಂಚು ಮಾಡಿದ್ದರು ಎಂಬ ಬಗ್ಗೆ ನನಗೆ ಅನುಮಾನ ಇದೆ. ಗೃಹ ಸಚಿವರ ಹಿಡಿತದಲ್ಲೇ ಗೃಹ ಇಲಾಖೆ ಇದೆಯಾ ಎಂಬ ಅನುಮಾನ ಇದೆ. ಕರ್ತವ್ಯ ಲೋಪ‌ ಎಸಗಿದ ಅಧಿಕಾರಿಗಳನ್ನು ಅಮಾನತು ಮಾಡಿ ಎಂದು ಒತ್ತಾಯಿಸಿದರು.

ಯಾಕೆ ರಾತ್ರಿಯೆಲ್ಲ ಪೊಲೀಸರು ಸುತ್ತಾಡಿಸಿದರು ಅಂತ ನನಗೆ ಗೊತ್ತಿಲ್ಲ. ಯಾವನು ಡೈರೆಕ್ಷನ್ ಕೊಟ್ಟಿದಾನೋ ಗೊತ್ತಿಲ್ಲ. ಇದೆಲ್ಲ ರವಿ ಜನಪ್ರಿಯತೆ ಜಾಸ್ತಿಯಾಗಲು ನಾವೇ ಅವಕಾಶ ಕೊಟ್ಟಂತಾಯಿತು ಎಂದು ಸಚಿವ ಜಿ ಪರಮೇಶ್ವರ್ ನನ್ನ ಸ್ನೇಹಿತರ ಜೊತೆ ಮಾತಾಡುವಾಗ ಅಂದಿದ್ದಾರೆ ಎಂದು ತಿಳಿಸಿದರು.

ಚಿಕ್ಕಮಗಳೂರಿನ ಸಂಸ್ಕೃತಿ ಬಗ್ಗೆ ಮಾತಾಡಿದ್ದಾರೆ. ನಾನು ಬೆಳೆದ ಬಂದ ಹಾದಿ, ಅವರು ಬೆಳೆದು ಬಂದ ರೀತಿ ಏನು ಅಂತ ಚಿಕ್ಕಮಗಳೂರಿನ ಜನತೆಗೆ ಗೊತ್ತಿದೆ. ನಾನು ತಪ್ಪು ಮಾಡಿದ್ದರೇ ಕಾನೂನು ಪ್ರಕಾರ ಶಿಕ್ಷೆ ‌ಏನು ಬೇಕಾದರೂ ಆಗಲಿ ಅನುಭವಿಸುತ್ತೇನೆ. ರೇವಣ್ಣ, ಮುನಿರತ್ನ, ನನ್ನ ಮೇಲೆ ನಡೆದಿದ್ದನ್ನು ನೋಡಿದರೇ ಇದು ಷಡ್ಯಂತ್ರದ ಒಂದು ಭಾಗ. ಕಾಲ‌ ಎಲ್ಲದಕ್ಕೂ ಉತ್ತರ ಕೊಡುತ್ತದೆ. ಸತ್ಯ ಮೇಯ ಜಯತೆ ಎಂದು ಹೇಳಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ