ಸದನ ಮುದೂಡಲ್ಪಟ್ಟ ಬಳಿಕ ಡಿಸಿಎಂ, ಸಚಿವೆ ಮತ್ತು ಕೆಲ ಶಾಸಕರು ನನ್ನನ್ನು ಮುಗಿಸುವ ಬೆದರಿಕೆ ಹಾಕಿದರು: ಸಿಟಿ ರವಿ

ಸದನ ಮುದೂಡಲ್ಪಟ್ಟ ಬಳಿಕ ಡಿಸಿಎಂ, ಸಚಿವೆ ಮತ್ತು ಕೆಲ ಶಾಸಕರು ನನ್ನನ್ನು ಮುಗಿಸುವ ಬೆದರಿಕೆ ಹಾಕಿದರು: ಸಿಟಿ ರವಿ

ಅರುಣ್​ ಕುಮಾರ್​ ಬೆಳ್ಳಿ
|

Updated on:Dec 21, 2024 | 1:54 PM

ಸಭಾಪತಿಗಳ ಕೊಠಡಿಯಲ್ಲಿ ನಡೆದ ವಿದ್ಯಮಾನಗಳ ಬಗ್ಗೆ ಪರಿಷತ್ ವಿರೋಧ ಪಕ್ಷದ ನಾಯಕ ಚಲವಾದಿ ದೂರು ಸಲ್ಲಿಸಿದರೂ ಯಾವುದೇ ಕ್ರಮ ಜರುಗಿಲ್ಲ, ಸಭಾಪತಿಯವರು ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿಯನ್ನು ಕರೆಸಿ ಸದನದಲ್ಲಾದರೆ ಸದಸ್ಯರು ತಮ್ಮ ಜವಾಬ್ದಾರಿ, ಅದರೆ ಸದನದ ಹೊರಗಡೆ ಅವರು ನಿಮ್ಮ ಜವಾಬ್ದಾರಿ, ರವಿ ಅವರನ್ನು ಸುರಕ್ಷಿತವಾಗಿ ಮನೆ ತಲುಪಿಸುವ ಜವಾಬ್ದಾರಿ ನಿಮ್ಮದು ಅಂತ ಮೌಖಿಕ ಆದೇಶ ನೀಡಿದರು ಎಂದು ರವಿ ಹೇಳಿದರು.

ಬೆಂಗಳೂರು: ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿಟಿ ರವಿ ತಮ್ಮ ಬಂಧನಕ್ಕೆ ಮೊದಲ ಮತ್ತು ನಂತರ ನಡೆದ ಎಲ್ಲ ವಿದ್ಯಮಾನಗಳನ್ನು ಸವಿಸ್ತಾರವಾಗಿ ಹೇಳಿದರು. ಸಭಾಪತಿಯವರು ಸದನವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಿ ರಾಷ್ಟ್ರಗೀತೆಯನ್ನು ಹಾಡಿ ಎಲ್ಲರೂ ಹೊರಬಂದಾಗ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ನಜೀರ್ ಅಹ್ಮದ್ ಮತ್ತು ಚನ್ನರಾಜ್ ಹಟ್ಟಿಹೊಳಿ ಮೊದಲಾದವರು ತನ್ನ ಮೇಲೆ ಮಾತಿನ ಪ್ರಹಾರ ನಡೆಸಿ, ನಿನ್ನ ಕತೆಯನ್ನು ಮುಗಿಸಿ ಬಿಡುತ್ತೇವೆ ಅಂತ ಏರಿಬಂದರು, ತಾನು ಮಾರ್ಷಲ್ ಗಳ ರಕ್ಷಣೆಯಲ್ಲಿ ಸಭಾಪತಿಗಳ ಕೊಠಡಿಗೆ ಹೋದೆ ಎಂದು ರವಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಸಿಟಿ ರವಿ ಮತ್ತು ಅವರ ಪಕ್ಷಕ್ಕೆ ಏನೇ ಆದರೂ ಅದಕ್ಕೆ ನಾನು ಕಾರಣವೇ? ಡಿಕೆ ಶಿವಕುಮಾರ್

Published on: Dec 21, 2024 01:53 PM