ಸಿಟಿ ರವಿ ಮತ್ತು ಅವರ ಪಕ್ಷಕ್ಕೆ ಏನೇ ಆದರೂ ಅದಕ್ಕೆ ನಾನು ಕಾರಣವೇ? ಡಿಕೆ ಶಿವಕುಮಾರ್
ಸದನದಲ್ಲಿ ನಡೆದಿದ್ದನ್ನು ಮುಚ್ಚಿಹಾಕಲು ರವಿ ಇದನ್ನೆಲ್ಲ ಮಾತಾಡುತ್ತಿದ್ದಾರೆ, ಎಲ್ಲಕ್ಕೂ ಆತ್ಮಸಾಕ್ಷಿನೇ ನ್ಯಾಯ ಒದಗಿಸುತ್ತದೆ, ಹಿಂದೆ ಅವರು ಅಧಿಕಾರದಲ್ಲಿದ್ದಾಗ ಪೊಲೀಸರನ್ನು ಹೇಗೆ ನಡೆಸಿಕೊಂಡರು, ಬಳಸಿಕೊಂಡರು ಅನ್ನೋದನ್ನು ಮರೆತ್ರಾ ಎಂದು ಶಿವಕುಮಾರ್ ಹೇಳಿದರು. ಅಂದರೆ, ಅಧಿಕಾರದಲ್ಲಿ ಯಾರೇ ಇದ್ದರೂ ಪೊಲೀಸರು ಬಲಿಪಶುಗಳು ಅಂತ ಡಿಸಿಎಂ ಮಾತಿನರ್ಥವಾ?
ಬೆಂಗಳೂರು: ಸಿಟಿ ರವಿಯವರನ್ನು ಬಿಡುಗಡೆ ಮಾಡುವಂತೆ ಕೋರ್ಟ್ ನೀಡಿದ ಆದೇಶ ಸರ್ಕಾರದ ಚಡಪಡಿಕೆಗೆ ಕಾರಣವಾಗಿದೆ. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಡಿಕೆ ಶಿವಕುಮಾರ್ ಅವರು ಸಿಟಿ ರವಿ ನೀಡಿರುವ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡುತ್ತಾ, ಅವರಿಗೇನೇ ಅದರೂ ತಾನು ಕಾರಣ, ಅವರ ಪಕ್ಷದಲ್ಲಿ ಏನಾದರೂ ನಡೆದರೆ ತಾನು ಕಾರಣ, ಸದನದಲ್ಲಿ ನಡೆದಿರುವುದಕ್ಕೂ ತಾನೇ ಕಾರಣ, ತನ್ನನ್ನು ನೆನಪಿಸಿಕೊಳ್ಳದಿದ್ದರೆ ಅವರಿಗೆ ನಿದ್ರೆ ಬಾರದು ಎಂದರು. ಲೆಕ್ಕ ಚುಕ್ತಾ ಮಾಡೋದಾದರೆ ಮಾಡಲಿ, ಅವರ ಸಾಮರ್ಥ್ಯಕ್ಕನುಗುಣವಾಗಿ ಹೋರಾಡಲಿ, ತಡೆದವರು ಯಾರು ಎಂದು ಶಿವಕುಮಾರ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ರವಿ ಬಂಧನದ ಬೆಳವಣಿಗೆಗಳು ಶಿವಕುಮಾರ್ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಚಿತಾವಣೆ ಮೇರೆಗೆ ನಡೆದಿವೆ: ಅಶೋಕ
Published on: Dec 21, 2024 12:08 PM
Latest Videos