ಬಳೆತೊಟ್ಟ ಮಹಿಳೆಗೆ ಸದನದಲ್ಲಿ ಆಗಿರುವ ಅವಮಾನದ ಬಗ್ಗೆ ವಿಜಯೇಂದ್ರ ಮಾತಾಡಲಿ: ಪ್ರಿಯಾಂಕ್ ಖರ್ಗೆ

ಬಳೆತೊಟ್ಟ ಮಹಿಳೆಗೆ ಸದನದಲ್ಲಿ ಆಗಿರುವ ಅವಮಾನದ ಬಗ್ಗೆ ವಿಜಯೇಂದ್ರ ಮಾತಾಡಲಿ: ಪ್ರಿಯಾಂಕ್ ಖರ್ಗೆ

ಅರುಣ್​ ಕುಮಾರ್​ ಬೆಳ್ಳಿ
|

Updated on: Dec 21, 2024 | 12:58 PM

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ನಿಂದಿಸಿದ ಪ್ರಕರಣದಲ್ಲಿ ಸಿಟಿ ರವಿ ಅವರು ಆರೋಪಿಯಾಗಿದ್ದರು ಮತ್ತು ಪೊಲೀಸರು ಅವರನ್ನು ಬಂಧಿಸಿ ಠಾಣೆಗೆ ಕರೆದೊಯ್ದಿದ್ದರು, ಅದರೆ ಉಳಿದ ಬಿಜೆಪಿ ಶಾಸಕರದ್ದೇನು ಅಲ್ಲಿ ಕೆಲಸ? ಅವರು ಠಾಣೆಯಲ್ಲಿ ಕೂತಿರುವುದನ್ನು ತಾನು ಮಾಧ್ಯಮಗಳಲ್ಲಿ ನೋಡಿದ್ದಾಗಿ ಹೇಳಿದ ಖರ್ಗೆ, ರವಿಯವರಿಗೆ ರಾಯಲ್ ಟ್ರೀಟ್ಮೆಂಟ್ ನೀಡಿದ್ದರೂ ಸರ್ಕಾರ ಅಪವಾದಕ್ಕೊಳಗಾಗುತಿತ್ತು ಎಂದರು.

ಕಲಬುರಗಿ: ಸಿಟಿ ರವಿ ಪರವಾಗಿ ಮಾತಾಡುತ್ತಾ ಬಿವೈ ವಿಜಯೇಂದ್ರ ಅವರು ಬಳೆತೊಟ್ಟಿಲ್ಲ, ಸೀರೆ ಉಟ್ಟಿಲ್ಲ ಅಂತ ಹೇಳಿದ ಮಾತುಗಳನ್ನು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಖಂಡಿಸಿದರು. ಅವರ ಭಾಷೆ ಅರ್ಥವಾಗಲ್ಲ, ಪಕ್ಷವೊಂದರ ರಾಜ್ಯಾಧ್ಯಕ್ಷರಾಗಿರುವ ವಿಜಯೇಂದ್ರ ಮಾತಾಡುವಾಗ ನಾಲಗೆ ಮೇಲೆ ಹಿಡಿತ ಹೊಂದಿರಬೇಕು, ಪ್ರಾಯಶಃ ಅವರು ತನ್ನ ಮನೆಯ ಹುಳುಕನ್ನು ಮುಚ್ಚಿಕೊಳ್ಳಲು ಹೀಗೆ ಮಾತಾಡಿರುವಂತಿದೆ, ಬಳೆ ತೊಟ್ಟಿಲ್ಲ ಅಂದರೆ ಏನರ್ಥ? ಸದನದಲ್ಲಿ ಒಬ್ಬ ಬಳೆ ತೊಟ್ಟ ಮಹಿಳೆ ವಿರುದ್ಧ ಅಶ್ಲೀಲ ಪದಬಳಕೆಯಿಂದ ಅವಮಾನವಾಗಿದೆ, ಆ ಮಹಿಳೆ ಬಗ್ಗೆ ವಿಜಯೇಂದ್ರ ಮಾತಾಡಲಿ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಬಸವಣ್ಣನ ಹಾಗೆ ನದಿಗೆ ಹಾರಿ ಸಾಯಬೇಕಾಗುತ್ತದೆಂಬ ಯತ್ನಾಳ್ ಹೇಳಿಕೆಗೆ ಪ್ರಿಯಾಂಕ್ ಖರ್ಗೆ ತೀವ್ರ ಆಕ್ರೋಶ