ಬೆಂಗಳೂರು: ಹೊಸ ವರ್ಷಾಚರಣೆಗೆ ಬಿಬಿಎಂಪಿ-ಪೊಲೀಸ್ ಇಲಾಖೆಯಿಂದ ಹೊಸ ರೂಲ್ಸ್​​

ಡಿಸೆಂಬರ್ ತಿಂಗಳು ಮುಗಿಯುತ್ತ ಬರುತ್ತಿದ್ದಂತೆ ಇತ್ತ ಹೊಸ ವರ್ಷದ ತಯಾರಿ ಕೂಡ ಸದ್ದಿಲ್ಲದೆ ನಡೆಯುತ್ತಿದೆ. ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸರು ಹಾಗೂ ಬಿಬಿಎಂಪಿ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ. ಪೊಲೀಸ್ ಇಲಾಖೆ ಮತ್ತು ಬಿಬಿಎಂಪಿ ಅಧಿಕಾರಿಗಳು ಈಗಾಗಲೆ ಸಭೆ ಮಾಡಿದ್ದು, ಹೊಸ ನಿಯಮಗಳನ್ನು ಜಾರಿಗೆ ತರಲು ಸಜ್ಜಾಗಿದ್ದಾರೆ.

ಬೆಂಗಳೂರು: ಹೊಸ ವರ್ಷಾಚರಣೆಗೆ ಬಿಬಿಎಂಪಿ-ಪೊಲೀಸ್ ಇಲಾಖೆಯಿಂದ ಹೊಸ ರೂಲ್ಸ್​​
ಹೊಸ ವರ್ಷಾಚರಣೆಗೆ ಸಿದ್ದವಾಗಿರುವ ಬೆಂಗಳೂರು (ಬ್ರಿಗೇಡ್​ ರೋಡ್​)
Follow us
Vinayak Hanamant Gurav
| Updated By: ವಿವೇಕ ಬಿರಾದಾರ

Updated on:Dec 22, 2024 | 11:00 AM

ಬೆಂಗಳೂರು, ಡಿಸೆಂಬರ್​ 22: 2024ಕ್ಕೆ ಗುಡ್ ಬೈ ಹೇಳಲು ಕೌಂಟ್ ಡೌನ್ ಶುರುವಾಗಿದೆ. ಬೆಂಗಳೂರು ಜನರು 2025 ಹೊಸ ವರ್ಷವನ್ನು (New Year) ಸ್ವಾಗತಿಸಲು ಕಾತುರರಾಗಿದ್ದಾರೆ. ಇತ್ತ ಬಿಬಿಎಂಪಿ (BBMP) ಹಾಗೂ ಪೊಲೀಸ್ ಇಲಾಖೆ (Police Department) ಹೊಸ ವರ್ಷಾಚರಣೆಯಲ್ಲಿ ಯಾವುದೇ ಅವಘಡ ಸಂಭವಿಸಿದಂತೆ ತಡೆಯಲು ಪ್ಲಾನ್ ನಡೆಸಿದೆ. ಈಗಾಗಲೇ ಜಂಟಿ ಸಭೆ ನಡೆಸಿರುವ ಪಾಲಿಕೆ ಅಧಿಕಾರಿಗಳು ಹಾಗೂ ಪೊಲೀಸರು, ಹೊಸ ವರ್ಷಾಚರಣೆಗೆ ನಿಯಮಗಳನ್ನು ಸಿದ್ದಪಡಿಸಿದ್ದಾರೆ.

ಹೊಸ ವರ್ಷಾಚರಣೆಯ ಕೇಂದ್ರ ಬಿಂದುವಾಗಿರುವ ಬೆಂಗಳೂರಿನ ಎಂ.ಜಿ.ರೋಡ್, ಬ್ರಿಗೇಡ್ ರೋಡ್ ಗಳಲ್ಲಿ ಸಿಸಿಟಿವಿ ಕ್ಯಾಮರೆಗಳ ಸಂಖ್ಯೆಯನ್ನು ಹೆಚ್ಚಿಸಲು ಪೊಲೀಸ್ ಇಲಾಖೆ ಪಾಲಿಕೆಗೆ ಸೂಚನೆ ನೀಡಿದೆ. ಈ ಹಿಂದೆ ಕೇವಲ 200 ರಿಂದ 300 ಸಿಸಿಟಿವಿ ಕ್ಯಾಮೆರಾಗಳನ್ನು ಮಾತ್ರ ಅಳವಡಿಸಲಾಗಿತ್ತು. ಆದರೆ, ಈ ಬಾರೀ ಹೆಚ್ಚಿನ ಜನ ಸೇರುವ ನಿರೀಕ್ಷೆ ಇರುವುದರಿಂದ ಸುಮಾರು 800 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವಂತೆ ಪೊಲೀಸ್ ಇಲಾಖೆ ಬಿಬಿಎಂಪಿಗೆ ಸೂಚಿಸಿದೆ ಎಂದು ಮಾಹಿತಿ ಲಭ್ಯವಾಗಿದೆ. ಇದರ ಜೊತೆಗೆ ಇನ್ನೂ ಹಲವು ನಿಯಮಗಳನ್ನು ಜಾರಿ ಮಾಡಲು ತಯಾರಿ ನಡೆದಿದೆ.

ಇದನ್ನೂ ಓದಿ: New Year: ಕ್ರಿಸ್​ಮಸ್, ಹೊಸ ವರ್ಷ ಪ್ರಯುಕ್ತ ರಾಜ್ಯದ ಈ ನಗರಗಳಿಗೆ ವಿಶೇಷ ರೈಲು

ಹೊಸ ವರ್ಷಾಚರಣೆಗೆ ಏನೆಲ್ಲ ನಿಯಮ?

  1. ರಾತ್ರಿ 1 ಗಂಟೆಯೊಳಗೆ ಹೊಸ ವರ್ಷಾಚರಣೆ ಮುಗಿಸಬೇಕು.
  2. ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಇಂದಿರಾನಗರದಲ್ಲಿ ಆಚರಣೆಗೆ ಅನುಮತಿ.
  3. ರಾತ್ರಿ 10 ಗಂಟೆ ಬಳಿಕ ಪ್ರಮುಖ ಫ್ಲೈ ಓವರ್​ಗಳು ಬಂದ್.
  4. ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ 800ಕ್ಕೂ ಹೆಚ್ಚು ಸಿಸಿಟಿವಿ ಅಳವಡಿಕೆ.
  5. ರಾತ್ರಿ 8 ಗಂಟೆ ಬಳಿಕ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ವಾಹನ ಸಂಚಾರ ಬಂದ್.
  6. ಆಚರಣೆಗೆ ಬರುವವರಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ.
  7. ಮಹಿಳೆಯರ ಸುರಕ್ಷತೆಗಾಗಿ ಮಹಿಳಾ ಪೊಲೀಸರ ನಿಯೋಜನೆ.
  8. ಬಾರ್, ಪಬ್​ಗಳಿಗೂ ರಾತ್ರಿ 1 ಗಂಟೆ ಬಳಿಕ ಬಂದ್​ಗೆ ಸೂಚನೆ.
  9. ನಗರದ ವಿವಿಧ ಭಾಗಗಳಲ್ಲಿ ಆಚರಣೆಗೆ ಅನುಮತಿ ಕಡ್ಡಾಯ.
  10. ಲೌಡ್ ಸ್ಪೀಕರ್, ಪಟಾಕಿ ಸಿಡಿಸಲು ನಿರ್ಬಂಧ.

ನಗರದಲ್ಲಿನ ಕಸ ವಿಲೇವಾರಿ ಮಾಡುವುದು. ಬ್ಯಾರಿಕೇಟ್ ಅಳವಡಿಕೆಗೆ ಪೊಲೀಸ್ ಇಲಾಖೆ ಸೂಚಿಸಿದ ಜಾಗದಲ್ಲಿ ಲೈಟಿಂಗ್ ವ್ಯವಸ್ಥೆ ಮಾಡುವುದು. ಇನ್ನು, ಹೊಸ ವರ್ಷಾಚರಣೆಗೆ ಬಂದ ಜನರಲ್ಲಿ ಆರೋಗ್ಯ ಸಮಸ್ಯೆ ಕಂಡು ಬಂದರೇ, ಆರೋಗ್ಯ ತಪಾಸಣೆಗೆ ನಮ್ಮ ಸಿಬ್ಬಂದಿಗಳನ್ನು ನಿಯೋಜನೆ ಮಾಡುತ್ತೇವೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಒಟ್ಟಿನಲ್ಲಿ ಈ ಬಾರಿ ಹೊಸವರ್ಷ ಅಚರಣೆಗೆ ಯಾವುದೇ ಅಡೆತಡೆ ಅಗದಂತೆ ಪೊಲೀಸ್ ಇಲಾಖೆ ಹಾಗೂ ಬಿಬಿಎಂಪಿ ಸಹಭಾಗಿತ್ವದಲ್ಲಿ ಎಲ್ಲ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಮುಂದಾಗಿರುವುದು ಒಳ್ಳೆಯ ಬೆಳವಣಿಗೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:34 am, Sun, 22 December 24

ರವಿ ಮಕರ ರಾಶಿಯಲ್ಲಿ, ಚಂದ್ರ ತುಲಾ ರಾಶಿಯಲ್ಲಿ ಸಂಚಾರ: ದಿನ ಭವಿಷ್ಯ ಇಲ್ಲಿದೆ
ರವಿ ಮಕರ ರಾಶಿಯಲ್ಲಿ, ಚಂದ್ರ ತುಲಾ ರಾಶಿಯಲ್ಲಿ ಸಂಚಾರ: ದಿನ ಭವಿಷ್ಯ ಇಲ್ಲಿದೆ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ಸಂಜು; ವಿಡಿಯೋ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ಸಂಜು; ವಿಡಿಯೋ
ಅತಿ ಎತ್ತರದ ಮಾನವ ಪಿರಮಿಡ್ ನಿರ್ಮಿಸಿ ಭಾರತೀಯ ಸೇನೆಯಿಂದ ವಿಶ್ವ ದಾಖಲೆ
ಅತಿ ಎತ್ತರದ ಮಾನವ ಪಿರಮಿಡ್ ನಿರ್ಮಿಸಿ ಭಾರತೀಯ ಸೇನೆಯಿಂದ ವಿಶ್ವ ದಾಖಲೆ
ಯಾರು ಬಿಗ್ ಬಾಸ್ ಗೆಲ್ತಾರೆ ಅಂತ ನಾನು ಹೇಳಲ್ಲ: ಪ್ರಥಮ್ ಖಡಕ್ ಮಾತು
ಯಾರು ಬಿಗ್ ಬಾಸ್ ಗೆಲ್ತಾರೆ ಅಂತ ನಾನು ಹೇಳಲ್ಲ: ಪ್ರಥಮ್ ಖಡಕ್ ಮಾತು
ನಿಯೋಗ ಹೊತ್ತು ತಂದಿದ್ದ ಕಬ್ಬನ್ನು ಕಚೇರಿಯಲ್ಲೇ ಮುರಿದು ತಿಂದ ಸಿದ್ದರಾಮಯ್ಯ
ನಿಯೋಗ ಹೊತ್ತು ತಂದಿದ್ದ ಕಬ್ಬನ್ನು ಕಚೇರಿಯಲ್ಲೇ ಮುರಿದು ತಿಂದ ಸಿದ್ದರಾಮಯ್ಯ
ಕೆಡಿಪಿ ಸಭೆಗಳನ್ನು ಹಗುರವಾಗಿ ಪರಿಗಣಿಸುವ ಪ್ರವೃತ್ತಿ ನಿಲ್ಲಬೇಕು
ಕೆಡಿಪಿ ಸಭೆಗಳನ್ನು ಹಗುರವಾಗಿ ಪರಿಗಣಿಸುವ ಪ್ರವೃತ್ತಿ ನಿಲ್ಲಬೇಕು
ಸುದೀಪ್ ಬಿಗ್​ಬಾಸ್ ಬಿಡಲು ಅಸಲಿ ಕಾರಣ ಬಿಚ್ಚಿಟ್ಟ ಪ್ರಥಮ್
ಸುದೀಪ್ ಬಿಗ್​ಬಾಸ್ ಬಿಡಲು ಅಸಲಿ ಕಾರಣ ಬಿಚ್ಚಿಟ್ಟ ಪ್ರಥಮ್
ಬೆಂಗಳೂರಿನ ಈ ಮಾರ್ಗದಲ್ಲಿ ಫುಲ್ ಟ್ರಾಫಿಕ್ ಜಾಮ್..!
ಬೆಂಗಳೂರಿನ ಈ ಮಾರ್ಗದಲ್ಲಿ ಫುಲ್ ಟ್ರಾಫಿಕ್ ಜಾಮ್..!
ಮಂತ್ರಾಲಯ ಸಂಸ್ಕೃತ ಶಾಲೆ ವಿದ್ಯಾರ್ಥಿಗಳು ಸಾವು: ಅಪಘಾತಕ್ಕೆ ಕಾರಣವೇನು?
ಮಂತ್ರಾಲಯ ಸಂಸ್ಕೃತ ಶಾಲೆ ವಿದ್ಯಾರ್ಥಿಗಳು ಸಾವು: ಅಪಘಾತಕ್ಕೆ ಕಾರಣವೇನು?
ಒಬ್ಬನಿಗೆ ಮದುವೆಯಾಗಿ ಕೇವಲ 4 ತಿಂಗಳಾಗಿತ್ತು, ಮತ್ತೊಬ್ಬನ ಪತ್ನಿ ಗರ್ಭಿಣಿ!
ಒಬ್ಬನಿಗೆ ಮದುವೆಯಾಗಿ ಕೇವಲ 4 ತಿಂಗಳಾಗಿತ್ತು, ಮತ್ತೊಬ್ಬನ ಪತ್ನಿ ಗರ್ಭಿಣಿ!