ಸದನದ ಚ್ಯಾನೆಲ್ಗಳಲ್ಲಿ ಅವಹೇಳನಕಾರಿ ಪದಬಳಕೆ ಸಿಕ್ಕಿಲ್ಲ, ಪರಿಶೀಲನೆ ಜಾರಿಯಲ್ಲಿದೆ: ಬಸವರಾಜ ಹೊರಟ್ಟಿ, ಪರಿಷತ್ ಚೇರ್ಮನ್
ಒಂದು ಪಕ್ಷ ಸಿಟಿ ರವಿಯವರು ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿದ್ದರೆ ಅದನ್ನು ಎಥಿಕ್ಸ್ ಕಮಿಟಿಗೆ ಕಳಿಸಲಾಗುವುದು, ವಿಧಾನಸಭೆ ಮತ್ತು ಪರಿಷತ್ ಗೆ ಅದೇ ದೊಡ್ಡ ಮತ್ತು ನಿರ್ಣಾಯಕ ಅಂಗ, ಸಮಿತಿಯ ಸದಸ್ಯರು ಫುಟೇಜನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಿ ವರದಿಯೊಂದನ್ನು ತಮಗೆ ಸಲ್ಲಿಸುತ್ತಾರೆ, ವರದಿ ಆಧಾರದ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಹೊರಟ್ಟಿ ಹೇಳಿದರು
ಮಂಡ್ಯ: ಮಂಡ್ಯದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ವಿಧಾನ ಪರಿಷತ್ ಚೇರ್ಮನ್ ಬಸವರಾಜ ಹೊರಟ್ಟಿ ಅವರು ಗುರುವಾರ ಸಿಟಿ ರವಿ ಪ್ರಕರಣಕ್ಕೆ ಸಂಬಂಧಿಸಿದಂತೆ ಏನು ನಡೆಯಿತು ಅನ್ನೋದನ್ನು ಸ್ಪಷ್ಟವಾಗಿ ಹೇಳಲಿಲ್ಲ. ಸದನವನ್ನು ಅನಿರ್ದಾಷ್ಟಾವಧಿಗೆ ಮುಂದೂಡಿದ ಕೂಡಲೇ ನಮ್ಮ ಚ್ಯಾನೆಲ್ ಗಳು ರಿಕಾರ್ಡಿಂಗ್ ಕೆಲಸವನ್ನು ನಿಲ್ಲಿಸಿಬಿಡುತ್ತವೆ, ಆದಾಗ್ಯೂ ಸದನದ ಕಾರ್ಯದರ್ಶಿ ಮತ್ತು ಅಧೀನ ಕಾರ್ಯದರ್ಶಿಗಳು ಫುಟೇಜನ್ನು ಪರಿಶೀಲನೆ ಮಾಡಿದಾಗ ಏನೂ ಸಿಕ್ಕಿಲ್ಲ ಆದರೆ, ಖಾಸಗಿ ಚ್ಯಾನೆಲ್ ಗಳಲ್ಲಿ ಆ ಅಂಶವಿದೆಯಂತೆ, ಅವರಿಂದ ಮಾಹಿತಿ ತರಿಸಿಕೊಂಡು ಮುಂದುವರಿಯುವುದಾಗಿ ಅವರು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸಿಟಿ ರವಿ ಬಂಧನ ವಿರೋಧಿಸಿ ಪ್ರತಿಭಟಿಸಿದ್ದ ಬಿಜೆಪಿಗರ ವಿರುದ್ಧ ಎಫ್ಐಆರ್
Published on: Dec 21, 2024 05:44 PM
Latest Videos