ರವಿ ಅಶ್ಲೀಲ ಪದಬಳಕೆ ಮಾಡಿಲ್ಲ ಅಂದಿರುವ ಕಾರಣ ಪ್ರಕರಣ ಇಲ್ಲಿಗೆ ನಿಲ್ಲಿಸುವುದು ಉತ್ತಮ: ಸತೀಶ್ ಜಾರಕಿಹೊಳಿ
ಪ್ರಕರಣ ಈಗಾಗಲೇ ಹಕ್ಕು ಭಾಧ್ಯತಾ ಸಮಿತಿಗೆ ಹೋಗಿದೆ, ಸಮಿತಿಯು ಪರಿಶೀಲನೆ ನಡೆಸಿ ನಿರ್ಣಯ ತೆಗೆದುಕೊಳ್ಳಲಿದೆ, ರವಿ ಒಬ್ಬ ಜನಪ್ರತಿನಿಧಿ, ಎನ್ಕೌಂಟರ್ ಮಾಡುವ ಪ್ರಶ್ನೆ ಉದ್ಭವಿಸಲ್ಲ, ಪೊಲೀಸ್ ಠಾಣೆಗಳಿಗೆ ಬಿಜೆಪಿ ಶಾಸಕರು ನುಗ್ಗಲಾರಂಭಿಸಿದ ಕಾರಣ ರವಿಯನ್ನು ಬೇರೆ ಬೇರೆ ಸ್ಥಳಗಳಿಗೆ ಕರೆದೊಯ್ಯಲಾಯಿತು ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಬೆಳಗಾವಿ: ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಸಿಟಿ ರವಿಯವರ ಬಂಧನದ ಬಗ್ಗೆ ಹೆಚ್ಚು ಮಾತಾಡಲು ಇಷ್ಟಪಡಲಿಲ್ಲ. ಪರಿಷತ್ ಸದಸ್ಯರು ಅಶ್ಲೀಲ ಪದಬಳಕೆ ಮಾಡಿಲ್ಲ ಅಂತಿದ್ದಾರೆ, ಹಾಗಾಗಿ ಇದನ್ನು ಇಷ್ಟಕ್ಕೆ ನಿಲ್ಲಿಸೋದು ಒಳ್ಳೆಯದು, ಹೀಗೆ ನಡೆಯುತ್ತಿರೋದು ಇದು ಮೊದಲ ಸಲವೇನಲ್ಲ, ಲೋಕಸಭೆಯಲ್ಲೂ ಇಂಥ ಘಟನೆಗಳು ನಡೆದಿವೆ, ಪದ ಬಳಸಿದ ಸದಸ್ಯರು ಸಾರಿ ಅಂದಾಗ ಪ್ರಕರಣಕ್ಕೆ ಇತಿಶ್ರೀ ಹಾಡಲಾಗಿದೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮತ್ತೊಮ್ಮೆ ಮುನ್ನೆಲೆಗೆ ಬಂದ ದಲಿತ ಸಿಎಂ ಕೂಗು; ಮುಖ್ಯಮಂತ್ರಿ ರೇಸ್ನಲ್ಲಿ ಸತೀಶ್ ಜಾರಕಿಹೊಳಿ ಹೆಸರು!
Latest Videos