AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೊಮ್ಮೆ ಮುನ್ನೆಲೆಗೆ ಬಂದ ದಲಿತ ಸಿಎಂ ಕೂಗು; ಮುಖ್ಯಮಂತ್ರಿ ರೇಸ್​ನಲ್ಲಿ ಸತೀಶ್ ಜಾರಕಿಹೊಳಿ ಹೆಸರು!

ಈ ಬಾರಿ ದಲಿತ ಸಿಎಂ ಕೂಗು ದಿಡೀರ್ ಮುನ್ನೆಲೆಗೆ ಬಂದಿದೆ. ಅಹಿಂದ ಸಮುದಾಯ ನಾಯಕರೇ ಮುಂದಿನ ಸಿಎಂ ಆಗಬೇಕೆಂಬ ಕೂಗು ಜೋರಾಗಿ ಕೇಳಿಬರ್ತಿದೆ. ಈ ಪೈಕಿ ಬೆಳಗಾವಿ ಸಾಹುಕಾರ, ಸಚಿವ ಸತೀಶ್ ಜಾರಕಿಹೊಳಿ ಹೆಸರು ಮುಂಚೂಣಿಯಲ್ಲಿದೆ. ದಲಿತ ಮುಖಂಡರೊಬ್ರು, ಮುಂದಿನ ಸಿಎಂ ಸತೀಶ್ ಜಾರಕಿಹೊಳಿ ಅಂತಾ ಘೋಷಣೆಯನ್ನೇ ಕೂಗಿದ್ದಾರೆ.

ಮತ್ತೊಮ್ಮೆ ಮುನ್ನೆಲೆಗೆ ಬಂದ ದಲಿತ ಸಿಎಂ ಕೂಗು; ಮುಖ್ಯಮಂತ್ರಿ ರೇಸ್​ನಲ್ಲಿ ಸತೀಶ್ ಜಾರಕಿಹೊಳಿ ಹೆಸರು!
ಸತೀಶ್ ಜಾರಕಿಹೊಳಿ
TV9 Web
| Edited By: |

Updated on: Oct 07, 2024 | 3:06 PM

Share

ಬೆಂಗಳೂರು, ಅ.07: ಸಿಎಂ ಬದಲಾವಣೆ ಕೂಗು ಕೈ ಪಾಳಯದಲ್ಲಿ ಹೊಸದೇನು ಅಲ್ಲ. ಮುಡಾ ಪ್ರಕರಣ ಹೊರಬಂದ ದಿನದಿಂದಲೂ ಇಂತಹದೊಂದು ಚರ್ಚೆ ಹುಟ್ಟಿಕೊಂಡಿದೆ. ಇದೀಗ ಮುಡಾ (MUDA) ಪ್ರಕರಣದ ತನಿಖೆ ತುಸು ವೇಗ ಪಡೆದುಕೊಂಡಿದೆ. ಈ ಮಧ್ಯೆ ರಾಜ್ಯ ಕಾಂಗ್ರೆಸ್ (Congress) ನಾಯಕರ ಸರಣಿ ಸಭೆಗಳು ಬದಲಾವಣೆಯ ಸುಳಿವು ಕೊಡ್ತಿವೆ. ಕೈ ಕಲಿಗಳು ಒಬ್ಬರಾದ ಮೇಲೊಬ್ಬರಂತೆ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ಕುತೂಹಲ ಹೆಚ್ಚಿಸ್ತಿದ್ದಾರೆ.

ಪ್ರತಿಸಲ ಸಿಎಂ ಬದಲಾವಣೆ ಚರ್ಚೆ ಬರ್ತಿತ್ತು. ಈ ಬಾರಿ ದಲಿತ ಸಿಎಂ ಕೂಗು ದಿಡೀರ್ ಮುನ್ನೆಲೆಗೆ ಬಂದಿದೆ. ಅಹಿಂದ ಸಮುದಾಯ ನಾಯಕರೇ ಮುಂದಿನ ಸಿಎಂ ಆಗಬೇಕೆಂಬ ಕೂಗು ಜೋರಾಗಿ ಕೇಳಿಬರ್ತಿದೆ. ಈ ಪೈಕಿ ಬೆಳಗಾವಿ ಸಾಹುಕಾರ, ಸಚಿವ ಸತೀಶ್ ಜಾರಕಿಹೊಳಿ ಹೆಸರು ಮುಂಚೂಣಿಯಲ್ಲಿದೆ.

ಕೆಲ ದಿನಗಳ ಹಿಂದಷ್ಟೇ ಸತೀಶ್ ಜಾರಕಿಹೊಳಿ ಪರ ಅಭಿಮಾನಿಗಳು ಅಭಿಯಾನ ನಡೆಸಿದ್ದರು. ಈ ಕ್ಯಾಂಪೇನ್ ಸದ್ಯ ಸಾಹುಕಾರನ ಎದುರಿಗೆ ಬಂದು ನಿಂತಿದೆ. ನಿನ್ನೆ ತುಮಕೂರಿನ ದಲಿತ ಸಂಘರ್ಷ ಸಮಿತಿ ಕಾರ್ಯಕ್ರಮದಲ್ಲಿ ಈ ಕೂಗು ಮತ್ತೊಮ್ಮೆ ಕೇಳಿಬಂದಿದೆ. ದಲಿತ ಮುಖಂಡರೊಬ್ರು, ಮುಂದಿನ ಸಿಎಂ ಸತೀಶ್ ಜಾರಕಿಹೊಳಿ ಅಂತಾ ಘೋಷಣೆಯನ್ನೇ ಕೂಗಿದ್ದಾರೆ.

ಇದನ್ನೂ ಓದಿ: ವಿಜಯೇಂದ್ರ-ಸತೀಶ್​ ಜಾರಕಿಹೊಳಿ ದಿಢೀರ್​ ಭೇಟಿ: ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ

ಸತೀಶ್ ಜಾರಕಿಹೊಳಿ ಮೊನ್ನೆಯಷ್ಟೇ ಮಲ್ಲಿಕಾರ್ಜುನ ಖರ್ಗೆ ಅವರನ್ನ ಭೇಟಿಯಾಗಿದ್ರು. ಒಂದು ಗಂಟೆಗಳ ಕಾಲ ರಾಜಕೀಯ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದರು. ಇಷ್ಟೆ ಅಲ್ಲದೇ, ಜಾರಕಿಹೊಳಿ ಸಿಎಂ ಸಿದ್ದರಾಮಯ್ಯರ ಆಪ್ತ ವಲಯದಲ್ಲಿ ಗುರುತಿಸಿಕೊಂಡ ನಾಯಕ. ಸಿದ್ದರಾಮಯ್ಯ ನಂತರ ಅಹಿಂದ ನಾಯಕ ಅಂತ್ಲೆ ಕರೆಸಿಕೊಳ್ತಾರೆ. ಹೀಗಾಗಿ ಜಾರಕಿಹೊಳಿ ಅವರೇ ಸಿಎಂ ಆಗ್ತಾರಾ ಅನ್ನೋ ಚರ್ಚೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ಬಗ್ಗೆ ಪ್ರಶ್ನೆ ಕೇಳಿದ್ರೆ, ಎಲ್ಲರಿಗೂ ಆಸೆ ಇರುತ್ತೆ ಅಂತಿದ್ದಾರೆ ಸತೀಶ್ ಜಾರಕಿಹೊಳಿ.

ಈ ಬೆನ್ನಲ್ಲೇ ಕಾಂಗ್ರೆಸ್​​​ ಪಾಳಯದಲ್ಲಿ ಸರಣಿ ಸಭೆಯ ಸಂಚಲನ ಮೂಡಿಸ್ತಿದೆ. ಸಚಿವ ಪರಮೇಶ್ವರ್ ಹಾಗೂ ಸತೀಶ್ ಜಾರಕಿಹೊಳಿ ಇವತ್ತು ಅರ್ಧ ಗಂಟೆ ಚರ್ಚೆ ಮಾಡಿದ್ದಾರೆ. ಊಟದ ನೆಪದಲ್ಲಿ ನಡೆಯಿತ್ತಾ ಬದಲಾವಣೆ ಚರ್ಚೆ ಮಾಡಿದ್ರಾ ಅನ್ನೋ ಕುತೂಹಲ ಸದ್ಯ ಗರಿಗೆದರಿದೆ. ಆದ್ರೆ ಉಭಯ ನಾಯಕರು ಮಾತ್ರ ಇಂಹತದೊಂದು ಚರ್ಚೆಯನ್ನ ತಳ್ಳಿಹಾಕಿದ್ದಾರೆ.

ಈ ಮಧ್ಯೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕೂಡ ಸತೀಶ್ ಜಾರಕಿಹೊಳಿ ಅವ್ರನ್ನ ಭೇಟಿಯಾಗಿದ್ದಾರೆ. ಬೆಂಗಳೂರಿನ ಶಿವಾನಂದ ಸರ್ಕಲ್ ಬಳಿಯ ಸರ್ಕಾರಿ ನಿವಾಸದಲ್ಲಿ ಚರ್ಚೆ ಮಾಡಿದ್ದಾರೆ. ಲೋಕೋಪಯೋಗಿ ಇಲಾಖೆ ಕಾರ್ಯದ ನಿಮಿತ್ತ ಭೇಟಿಯಾಗಿದ್ದೇನೆ ರಾಜಕೀಯ ಮಾಡಬೇಡ್ರಪ್ಪಾ ಅಂತಾ ಮಾಧ್ಯಮಗಳಿಗೆ ಹೇಳಿ ಹೋಗಿ ತಮ್ಮ ಇಲಾಖೆ ವಿಚಾರವಾಗಿ ಚರ್ಚಿಸಿದ್ರು. ಬಳಿಕ ನಿಮ್ಮ ಜೊತೆ ಮಾತನಾಡ್ಬೇಕು ಅಂತ ಸತೀಶ್ ಜಾರಕಿಹೊಳಿಯವರಿಗೆ ಹೇಳಿ ಪ್ರತ್ಯೇಕವಾಗಿ 5 ನಿಮಿಷ ಮಾತನಾಡಿದ್ದರೆ. ಇದೇ ವೇಳೆ ಮಾಧ್ಯಮಗಳ ಜತೆ ಮಾತನಾಡಿ ಸಿಎಂ ಬದಲಾಗಬೇಕು ಅಂತ್ಲೂ ಹೇಳಿದ್ದಾರೆ.

ಇದನ್ನೂ ಓದಿ: ಚನ್ನಪಟ್ಟಣ ಕ್ಷೇತ್ರದ ಎನ್​ಡಿಎ ಅಭ್ಯರ್ಥಿಯಾಗಿ ನಿಖಿಲ್ ಕಣಕ್ಕೆ? ಕುತೂಹಲ ಕೆರಳಿಸಿದ ಹೆಚ್​ಡಿ ಕುಮಾರಸ್ವಾಮಿ ನಡೆ

ಈ ಬೆಳವಣಿಗೆಗಳ ನಡುವೆ ನಿನ್ನೆ ರಾತ್ರಿ 10.30ರ ಸುಮಾರಿಗೆ ಡಿಸಿಎಂ ಡಿಕೆಶಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ. ಬೆಂಗಳೂರಿನ ಸದಾಶಿವನಗರದಲ್ಲಿರೋ ಖರ್ಗೆ ನಿವಾಸಕ್ಕೆ ತೆರಳಿದ ಡಿಕೆಶಿ ಕೆಲಹೊತ್ತು ಚರ್ಚೆ ನಡೆಸಿದ್ದು ಭಾರಿ ಕುತೂಹಲಕ್ಕೆ ಕಾರಣವಾಗಿದೆ.

ರಾಜ್ಯ ರಾಜಕಾರಣದ ಚರ್ಚೆ ಸಿಎಂ ಬದಲಾವಣೆಯ ಚರ್ಚೆಯ ಸುತ್ತ ಗಿರಕಿ ಹೊಡೆಯುತ್ತಿದೆ. ಈ ಹೊತ್ತಲ್ಲೇ ಡಿಸಿಎಂ ಡಿಕೆ ಶಿವಕುಮಾರ್ ದೇವರ ಮೊರೆ ಹೋಗಿದ್ದಾರೆ. ತಮಿಳುನಾಡಿನ ತಿರುವಣ್ಣಾಮಲೈಗೆ ಕುಟುಂಬ ಸಮೇತ ಹೋಗಿರೋದು ಕೂತುಹಲ ಮೂಡಿಸಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ