AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಮತ್ತೊಂದು ಬಲಿ; FIR ದಾಖಲು

ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೆಂಗಳೂರು ದಕ್ಷಿಣ ತಾಲೂಕಿನ ಚಿಕ್ಕನಹಳ್ಳಿ ಗ್ರಾಮದಲ್ಲಿ ಮತ್ತೊಂದು ಬಲಿಯಾಗಿದ್ದು, ಮನೆ ಬಳಿ ನಿಂತಿದ್ದ ಮಹಿಳೆ ಮೇಲೆ  ಏಕಾಏಕಿ ವಿದ್ಯುತ್ ತಂತಿ ತುಂಡಾಗಿ ಬಿದ್ದು ದುರ್ಘಟನೆ ನಡೆದಿದೆ. ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಇನ್ನೆಷ್ಟು ಮಂದಿ ಬಲಿಯಾಗಬೇಕು. ಈ ಮೂಲಕ ಬೆಂಗಳೂರು ಜನರ ಜೊತೆ ಬೆಸ್ಕಾಂ(Bescom) ಅಧಿಕಾರಿಗಳು ಚೆಲ್ಲಾಟ ಆಡುತ್ತಿದ್ದಾರಾ? ಎಂಬ ಪ್ರಶ್ನೆ ಶುರುವಾಗಿದೆ.

ಬೆಂಗಳೂರಿನಲ್ಲಿ ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಮತ್ತೊಂದು ಬಲಿ; FIR ದಾಖಲು
ಬೆಂಗಳೂರಿನಲ್ಲಿ ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಮತ್ತೊಂದು ಬಲಿ; FIR ದಾಖಲು
ಬಿ ಮೂರ್ತಿ, ನೆಲಮಂಗಲ
| Edited By: |

Updated on: Oct 07, 2024 | 4:29 PM

Share

ಬೆಂಗಳೂರು, ಅ.07: ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಇನ್ನೆಷ್ಟು ಮಂದಿ ಬಲಿಯಾಗಬೇಕು. ಬೆಂಗಳೂರು ಜನರ ಜೊತೆ ಬೆಸ್ಕಾಂ(Bescom) ಅಧಿಕಾರಿಗಳು ಚೆಲ್ಲಾಟ ಆಡುತ್ತಿದ್ದಾರಾ? ಎಂಬ ಪ್ರಶ್ನೆ ಶುರುವಾಗಿದೆ. ಹೌದು, ಬೆಂಗಳೂರು ದಕ್ಷಿಣ ತಾಲೂಕಿನ ಚಿಕ್ಕನಹಳ್ಳಿ ಗ್ರಾಮದಲ್ಲಿ ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಮತ್ತೊಂದು ಬಲಿಯಾಗಿದ್ದು, ಮನೆ ಬಳಿ ನಿಂತಿದ್ದ ಮಹಿಳೆ ಮೇಲೆ  ಏಕಾಏಕಿ ವಿದ್ಯುತ್ ತಂತಿ ತುಂಡಾಗಿ ಬಿದ್ದಿದೆ. ಈ ವೇಳೆ ಸ್ಥಳದಲ್ಲೇ ಮಂಜಮ್ಮ(50) ಕೊನೆಯುಸಿರೆಳೆದಿದ್ದಾರೆ. ಈ ಹಿನ್ನಲೆ ಕರ್ತವ್ಯ ನಿರ್ಲಕ್ಷ್ಯ ಆರೋಪದಡಿ ಬೆಸ್ಕಾಂ ಅಧಿಕಾರಿಗಳ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

ಬೆಸ್ಕಾಂ ಅಧಿಕಾರಿಗಳ ವಿರುದ್ಧ FIR ದಾಖಲು

ಇಂದು(ಸೋಮವಾರ) ಚಿಕ್ಕನಹಳ್ಳಿ ಗ್ರಾಮದಲ್ಲಿ ಬೆಳಗ್ಗೆ 10 ಗಂಟೆಯ ಸುಮಾರಿಗೆ ಮೃತ ಮಹಿಳೆ ಸೇರಿದಂತೆ ಇನ್ನಿಬರು  ಮಹಿಳೆಯರು ಮನೆ ಬಳಿ ನಿಂತು ಮಾತನಾಡುತ್ತಿದ್ದರು. ಈ ವೇಳೆ ಏಕಾಏಕಿ ವಿದ್ಯುತ್ ತಂತಿ ತುಂಡಾಗಿ ಬಿದ್ದಿದೆ. ಕೂಡಲೇ ಮತ್ತೊಬ್ಬ ಮಹಿಳೆ ಮೃತ ಮಂಜಮ್ಮನನ್ನು ಕಾಪಾಡಲು ನೋಡಿದರೂ ಆಗಿಲ್ಲ. ಆಗಲೇ ಮಂಜಮ್ಮನ ಪ್ರಾಣಪಕ್ಷಿ ಹಾರಿಹೋಗಿತ್ತು. ಸಧ್ಯ ಮರಣೋತ್ತರ ಪರೀಕ್ಷೆಗಾಗಿ ಮಹಿಳೆಯ ಮೃತದೇಹವನ್ನು ರಾಜರಾಜೇಶ್ವರಿ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಮೃತ ಮಂಜಮ್ಮ ಮೈದುನ ಶಿವರಾಮ ಅವರ ದೂರು ಆಧರಿಸಿ ಕರ್ತವ್ಯ ನಿರ್ಲಕ್ಷ್ಯ ಆರೋಪದಡಿ ಬೆಸ್ಕಾಂ ಅಧಿಕಾರಿಗಳ ವಿರುದ್ಧ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.

ಇದನ್ನೂ ಓದಿ:ಬೆಂಗಳೂರಿಗರೇ ಹುಷಾರ್, ನೀವು ಓಡಾಡ್ತಿರುವ ಜಾಗ ಎಷ್ಟು ಸೇಫ್? ಬೆಸ್ಕಾಂ ವ್ಯಾಪ್ತಿಯಲ್ಲಿವೇ 30,243 ಅಪಾಯಕಾರಿ ಸ್ಥಳಗಳು

ಇನ್ನು ಕಳೆದ ವರ್ಷ ನಡೆದ ಕಾಡುಗೋಡಿ ಬಳಿ ವಿದ್ಯುತ್ ತಂತಿ ತುಳಿದು ತಾಯಿ ಮಗು ಪತಿಯ ಕಣ್ಮುಂದೆಯೇ ಸುಟ್ಟು ಕರಕಲಾಗಿದ್ದರು. ಈ ವಿದ್ಯುತ್ ದುರಂತದ ಬಳಿಕವೂ ಅಧಿಕಾರಿಗಳು ಎಚ್ಚೇತ್ತುಕೊಂಡಿಲ್ಲ. ಅಪಾಯಕ್ಕೆ ಡೇಂಜರ್ ವಿದ್ಯುತ್ ಕಂಬಗಳು ಕಾಯುತ್ತಿದ್ದು, ಬೆಂಗಳೂರು ಜನರು ರಸ್ತೆಯಲ್ಲಿ ಓಡಾಡುವ ಮುನ್ನ ಎಚ್ಚರ ಇರಲಿ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ