ಗಣೇಶೋತ್ಸವ: ವಿದ್ಯುತ್ ಅವಘಡಗಳ ಬಗ್ಗೆ ಮಾರ್ಗಸೂಚಿ ಹೊರಡಿಸಿದ ಬೆಸ್ಕಾಂ, ಸಹಾಯವಾಣಿ ಬಿಡುಗಡೆ
ಸೆಪ್ಟೆಂಬರ್ 7ರಂದು ಗಣೇಶೋತ್ಸವವನ್ನು ಆಚರಿಸಲಾಗುತ್ತಿದೆ. ಹೀಗಾಗಿ ಬೆಸ್ಕಾಂ ಕೆಲ ಸುರಕ್ಷಿತ ಮಾರ್ಗಸೂಚಿಗಳನ್ನು ಹೊರಡಿಸಿದೆ. ಸಾರ್ವಜನಿಕರು ಗಣೇಶೋತ್ಸವ ಆಚರಣೆಗೆ ಸಕಲ ಸಿದ್ಧತೆ ನಡೆಸಿದ್ದು, ಮೂರ್ತಿ ಪ್ರತಿಷ್ಠಾಪನೆ, ವಿಸರ್ಜನೆ, ಮೆರವಣಿಗೆ ವೇಳೆ ವಿದ್ಯುತ್ ಅವಘಡಗಳು ಸಂಭವಿಸದಂತೆ ಸುರಕ್ಷತೆಗೆ ಆದ್ಯತೆವಂತೆ ಬೆಸ್ಕಾಂ ತಿಳಿಸಿದೆ. ಜೊತೆಗೆ 1912 ಸಹಾಯವಾಣಿ ಬಿಡುಗಡೆ ಮಾಡಲಾಗಿದೆ.
ಬೆಂಗಳೂರು, ಸೆಪ್ಟೆಂಬರ್ 05: ಗೌರಿ ಗಣೇಶ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ. ಶನಿವಾರ ಅಂದರೆ ಸೆ. 7ರಂದು ಕರ್ನಾಟಕದಾದ್ಯಂತ ಗೌರಿ ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಈಗಾಗಲೇ ಸಾರ್ವಜನಿಕರು ಗಣೇಶೋತ್ಸವ ಆಚರಣೆಗೆ ಸಿದ್ಧತೆ ನಡೆಸಿದ್ದು, ಮೂರ್ತಿ ಪ್ರತಿಷ್ಠಾಪನೆ, ವಿಸರ್ಜನೆ, ಮೆರವಣಿಗೆ ವೇಳೆ ವಿದ್ಯುತ್ ಅವಘಡಗಳ ಬಗ್ಗೆ ಎಚ್ಚರವಹಿಸುವಂತೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (BESCOM) ಕೆಲ ಮಾರ್ಗ ಸೂಚನೆಗಳನ್ನು ಬಿಡುಗಡೆ ಮಾಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬೆಸ್ಕಾಂ, ವಿದ್ಯುತ್ ಅವಘಡಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಮಾರ್ಗಸೂಚಿಗಳನ್ನು ಅನುಸರಿಸುವ ಮೂಲಕ ಸುರಕ್ಷತೆಗೆ ಆದ್ಯತೆ ನೀಡಿ. ಜಾಗರೂಕರಾಗಿರಿ, ಯಾವುದೇ ವಿದ್ಯುತ್ ಅವಘಡಗಳಿಗೆ ಕೂಡಲೇ 1912 ಸಹಾಯವಾಣಿಗೆ ಕರೆ ಮಾಡಿ. ಒಟ್ಟಾಗಿ, ನಾವು ಈ ಹಬ್ಬವನ್ನು ಸುರಕ್ಷಿತವಾಗಿ ಮತ್ತು ಸ್ಮರಣೀಯವಾಗಿಸೋಣ ಎಂದು ಬೆಸ್ಕಾಂ ತಿಳಿಸಿದೆ.
ಮಾರ್ಗಸೂಚಿಗಳು ಹೀಗಿವೆ
- ಹಬ್ಬಕ್ಕೆ ತೋರಣ, ಪೆಂಡಾಲ್, ಸೀರಿಯಲ್ ಲೈಟ್ ಹಾಕುವಾಗ ವಿದ್ಯುತ್ ತಂತಿಗಳ ಬಗ್ಗೆ ಎಚ್ಚರವಹಿಸಬೇಕು.
- ಸೀರಿಯಲ್ ಲೈಟ್ ತಂತಿ ಸಮರ್ಪಕ ಇನ್ಸುಲೇಟ್ ಆಗಿರಬೇಕು. ವಿದ್ಯುತ್ ಕಂಬದಿಂದ ಸಂಪರ್ಕ ಪಡೆಯಬಾರದು.
- ವಿದ್ಯುತ್ ತಂತಿ, ವಿದ್ಯುತ್ ಕಂಬ ಅಥವಾ ಪರಿವರ್ತಕ ಕೇಂದ್ರಗಳಿಗೆ ಚಪ್ಪರ, ಶಾಮಿಯಾನ ಕಟ್ಟಬಾರ್ದು.
ಇದನ್ನೂ ಓದಿ: ಪಿಒಪಿ ಗಣೇಶ ಮೂರ್ತಿಗಳಿಗೆ ಸೆಡ್ಡು ಹೊಡೆಯುತ್ತಿರೋ ಪೇಪರ್ ಗಣೇಶ ಮೂರ್ತಿಗಳು!
- ಮೆರವಣಿಗೆ ವೇಳೆ ರಸ್ತೆ ಬದಿ ವಿದ್ಯುತ್ ತಂತಿಗಳನ್ನು ಮೇಲಕ್ಕೆತ್ತಲು ಪ್ರಯತ್ನಿಸಬೇಡಿ. ಮೆರವಣಿಗೆ ಮಾರ್ಗವನ್ನ ಮುಂಚಿತ ಎಸಿ ಗಮನಕ್ಕೆ ತನ್ನಿ.
- ತುಂಡಾದ ವೈರ್, ವಿದ್ಯುತ್ ಕಿಡಿ ಗಮನಕ್ಕೆ ಬಂದರೆ, ಕೂಡಲೇ 1912 ಸಹಾಯವಾಣಿಗೆ ಕರೆ ಮಾಡಿ. ವಿದ್ಯುತ್ ಪರಿಕರಗಳಿರುವ ಸ್ಥಳಗಳಲ್ಲಿ ‘ಡೇಂಜರ್ ಜೋನ್’ ಎಂದು ಸೂಚಿಸಬೇಕು ಅಂತಾ ಬೆಸ್ಕಾಂ ಹೇಳಿದೆ.
ಬೆಸ್ಕಾಂ ಟ್ವೀಟ್
Let’s ensure a safe and joyous Ganeshotsav! Prioritize safety by following these essential guidelines to prevent electrical accidents. Stay vigilant, avoid power lines, and report any hazards to BESCOM (1912). Together, we can make this festival safe and memorable for all.… pic.twitter.com/vm4urMyiKx
— Namma BESCOM | ನಮ್ಮ ಬೆಸ್ಕಾಂ (@NammaBESCOM) September 4, 2024
ಇನ್ನು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಪಿಒಪಿ ಗಣೇಶ ಮೂರ್ತಿಗಳನ್ನ ಮಾರದಂತೆ ನಿಷೇಧ ಹೇರಿದೆ. ಹಾಗಾಗಿ ಮಣ್ಣೀನ ಗಣೇಶ ಮೂರ್ತಿಗಳ ಬೇಡಿಕೆ ಹೆಚ್ಚಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.