AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುಪಿಎಸ್​​ಸಿ ಪರೀಕ್ಷೆ ದಿನವೇ ಪಿಎಸ್​ಐ ನೇಮಕಾತಿ ಪರೀಕ್ಷೆ ನಿಗದಿ: ಕಾಂಗ್ರೆಸ್​ ವಿರುದ್ಧ ಬಿಜೆಪಿ ಕಿಡಿ

ಯುಪಿಎಸ್​ಸಿ ಮುಖ್ಯ ಪರೀಕ್ಷೆ ದಿನವೇ ಪಿಎಸ್​ಐ ನೇಮಕಾತಿ ಪರೀಕ್ಷೆ ನಿಗದಿ ಮಾಡಲಾಗಿದೆ. ಹೀಗಾಗಿ ಪಿಎಸ್​​​ಐ ನೇಮಕಾತಿ ಪರೀಕ್ಷೆ ಮುಂದೂಡುವಂತೆ ಬಿಜೆಪಿ ಆಗ್ರಹಿಸಿದೆ. ಸೆ.22ಕ್ಕೆ ನಿಗದಿಯಾಗಿರುವ 402 ಪಿಎಸ್​ಯ ಹುದ್ದೆಗೆ ನೇಮಕಾತಿ ಪರೀಕ್ಷೆ ನಡೆಯಲಿದೆ. ಆದರೆ ಯುವಕರ ಭವಿಷ್ಯದ ಬಗ್ಗೆ ಕಾಂಗ್ರೆಸ್ ಸರ್ಕಾರಕ್ಕೆ ಕಾಳಜಿ ಇಲ್ಲ ಎಂದು ಬಿಜೆಪಿ ವಾಗ್ದಾಳಿ ಮಾಡಿದೆ.

ಯುಪಿಎಸ್​​ಸಿ ಪರೀಕ್ಷೆ ದಿನವೇ ಪಿಎಸ್​ಐ ನೇಮಕಾತಿ ಪರೀಕ್ಷೆ ನಿಗದಿ: ಕಾಂಗ್ರೆಸ್​ ವಿರುದ್ಧ ಬಿಜೆಪಿ ಕಿಡಿ
ಯುಪಿಎಸ್​​ಸಿ ಪರೀಕ್ಷೆ ದಿನವೇ ಪಿಎಸ್​ಐ ನೇಮಕಾತಿ ಪರೀಕ್ಷೆ ನಿಗದಿ: ಕಾಂಗ್ರೆಸ್​ ವಿರುದ್ಧ ಬಿಜೆಪಿ ಕಿಡಿ
ಗಂಗಾಧರ​ ಬ. ಸಾಬೋಜಿ
|

Updated on: Sep 05, 2024 | 11:45 AM

Share

ಬೆಂಗಳೂರು, ಸೆಪ್ಟೆಂಬರ್​ 05: ಯುವಕರ ಭವಿಷ್ಯದ ಕುರಿತು ಎಳ್ಳಷ್ಟು ಕಾಳಜಿಯಿಲ್ಲದ ಭ್ರಷ್ಟ ಸರ್ಕಾರ, ಯುಪಿಎಸ್​​ಸಿ (UPSC) ಪರೀಕ್ಷೆ ನಡೆಯುವ ದಿನಾಂಕದಂದೇ ಪಿಎಸ್ಐ ಪರೀಕ್ಷೆ ದಿನಾಂಕ ನಿಗದಿ ಮಾಡುವ ಮೂಲಕ ಯುವಕರ ಭವಿಷ್ಯಕ್ಕೆ ಕಲ್ಲು ಹಾಕಲು ಹೊರಟಿದೆ ಎಂದು ಬಿಜೆಪಿ ವಾಗ್ದಾಳಿ ಮಾಡಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ, ಪಿಎಸ್​​​ಐ ನೇಮಕಾತಿ ಪರೀಕ್ಷೆ ಮುಂದೂಡುವಂತೆ ಆಗ್ರಹಿಸಿದೆ.

ಯುಪಿಎಸ್​​ಸಿ ಹಲವು ತಿಂಗಳುಗಳ ಮೊದಲೇ ಪರೀಕ್ಷೆ ದಿನಾಂಕ ಪ್ರಕಟಿಸುತ್ತಿದೆ. ಅದರಂತೆ, ಜೂನ್ 16ರಂದು ಯುಪಿಎಸ್​​ಸಿ ಪ್ರಿಲಿಮ್ಸ್ ಪರೀಕ್ಷೆ ನಡೆದಿದ್ದು, ಸೆಪ್ಟೆಂಬರ್ 22ಕ್ಕೆ ಮುಖ್ಯ ಪರೀಕ್ಷೆ ನಡೆಯಲಿದೆ. ವಿವೇಚನೆ, ಸಂವೇದನೆ ಇಲ್ಲದ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರ ಪಿಎಸ್ಐ ಪರೀಕ್ಷೆಯನ್ನು ಸೆ.22ರಂದೇ ನಡೆಸುವುದಾಗಿ ಜುಲೈ 31ರಂದು ಪ್ರಕಟಿಸಿದೆ. ಈ ಮೂಲಕ ಯುವಕರ ಉದ್ಯೋಗದ ಕನಸಿಗೆ ಕೊಳ್ಳಿಯಿಡುವ ಕೆಲಸ ಮಾಡಿದೆ. ಸೆ.22ರಂದು ನಿಗದಿಯಾಗಿರುವ ಯುಪಿಎಸ್ಸಿ ಮುಖ್ಯ ಪರೀಕ್ಷೆ, ಎಸ್ಎಸ್ಸಿ ಪರೀಕ್ಷೆ ಜೊತೆಗೆ ಪಿಎಸ್ಐ ಪರೀಕ್ಷೆಯೂ ನಡೆದರೆ ಮೂರೂ ಪರೀಕ್ಷಾರ್ಥಿಗಳಿಗೆ ತೊಂದರೆಯಾಗಲಿದೆ ಎಂದು ಕಿಡಿಕಾರಿದೆ.

ಬಿಜೆಪಿ ಟ್ವೀಟ್​ 

ಸ್ಪರ್ಧಾತ್ಮಕ ಪರೀಕ್ಷೆ ದಿನಾಂಕ ನಿಗದಿ ಗೊಂದಲದ ಕುರಿತು ವಿಧಾನ ಪರಿಷತ್ ಸದಸ್ಯ ಶಶಿಲ್ ನಮೋಶಿ ಅವರು ಈ ಹಿಂದೆ ಮೇಲ್ಮನೆಯಲ್ಲಿ ಕೇಳಿದ್ದ ಪ್ರಶ್ನೆಗೆ, ಯುಪಿಎಸ್​​ಸಿ, ಎಸ್ಎಸ್​ಸಿ ಹಾಗೂ ಎನ್ಟಿಎ ಮತ್ತು ಇತರ ನೇಮಕಾತಿ ಪ್ರಾಧಿಕಾರಗಳಿಂದ ಪ್ರಕಟಿತವಾಗುವ ವೇಳಾಪಟ್ಟಿ ಗಮನದಲ್ಲಿಟ್ಟುಕೊಂಡು ತಾತ್ಕಾಲಿಕ ಪರೀಕ್ಷಾ ದಿನಾಂಕ ನಿಗದಿಪಡಿಸಲಾಗುತ್ತಯೇ? ಎಂಬ ಪ್ರಶ್ನೆಗೆ ಇಲ್ಲ ಒಂದು ವೇಳೆ ಪರೀಕ್ಷೆಗೆ ತೊಂದರೆಯಾದರೇ ಪರೀಕ್ಷೆ ದಿನಾಂಕ ಮರು ನಿಗದಿಪಡಿಸಲಾಗುವುದು ಎಂಬುದಾಗಿ ಸ್ವತಃ ಮುಖ್ಯಮಂತ್ರಿಗಳೇ ವಿಧಾನ ಪರಿಷತ್ತಿನಲ್ಲಿ ಉತ್ತರಿಸಿದ್ದಾರೆ.

ಇದನ್ನೂ ಓದಿ: ಇಂಜಿನಿಯರಿಂಗ್, ವೈದ್ಯಕೀಯ ಕಾಲೇಜು ದಾಖಲಾತಿಗೆ ತಟ್ಟಿದ ಸರ್ವರ್ ಪ್ರಾಬ್ಲಂ: ಪೋಷಕರು ಪರದಾಟ

ಸದ್ಯ ಉಲ್ಟಾ ಹೊಡೆದಿರುವ ಕಾಂಗ್ರೆಸ್ ಸರ್ಕಾರ ಸೆ.22ರಂದು ಪಿಎಸ್ಐ ಪರೀಕ್ಷೆ ನಡೆಸಲು ಹೊರಟಿರುವುದು ಖಂಡನೀಯ, ಕೂಡಲೇ, ವಿದ್ಯಾರ್ಥಿ ವಿರೋಧಿ ನೀತಿ ಕೈಬಿಟ್ಟು, ಸಾವಿರಾರು ಉದ್ಯೋಗಾಕಾಂಕ್ಷಿ ಪರೀಕ್ಷಾರ್ಥಿಗಳ ಭವಿಷ್ಯವನ್ನು ಗಮನದಲ್ಲಿ ಇಟ್ಟುಕೊಂಡು ಪಿಎಸ್‌ಐ ಪರೀಕ್ಷೆಯ ದಿನಾಂಕವನ್ನು ಮರು ನಿಗದಿ ಮಾಡಲಿ ಎಂದು ರಾಜ್ಯ ಸರ್ಕಾರಕ್ಕೆ ರಾಜ್ಯ ಬಿಜೆಪಿ ಘಟಕ ಆಗ್ರಹಿಸಿದೆ.

ವರದಿ: ಈರಣ್ಣ ಬಸವ

ರಾಜ್ಯದ ಮತ್ತಷ್ಟು ಸುದ್ದಿಗನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ಕೊಪ್ಪಳ ಹಾಸ್ಟೆಲ್​​ಗೆ ಬಂದು ತಿಗಣಿಗೆ ಮದ್ದು ನೀಡಿದ ಚೆನ್ನೈ ತಜ್ಞರು
ಕೊಪ್ಪಳ ಹಾಸ್ಟೆಲ್​​ಗೆ ಬಂದು ತಿಗಣಿಗೆ ಮದ್ದು ನೀಡಿದ ಚೆನ್ನೈ ತಜ್ಞರು
ಬಿಗ್​​ಬಾಸ್​​ ಮನೆಯಿಂದ ಹೊರಬಂದಿದ್ದಕ್ಕೆ ಕಾರಣ ತಿಳಿಸಿದ ಓಂ ಪ್ರಕಾಶ್ ರಾವ್
ಬಿಗ್​​ಬಾಸ್​​ ಮನೆಯಿಂದ ಹೊರಬಂದಿದ್ದಕ್ಕೆ ಕಾರಣ ತಿಳಿಸಿದ ಓಂ ಪ್ರಕಾಶ್ ರಾವ್
ಅರಿಶಿನದ ಕೊಂಬುಗಳಿಂದಲೇ ಸಿದ್ಧವಾದ ಪರಿಸರಸ್ನೇಹಿ ಗಣೇಶನ ಮೂರ್ತಿ!
ಅರಿಶಿನದ ಕೊಂಬುಗಳಿಂದಲೇ ಸಿದ್ಧವಾದ ಪರಿಸರಸ್ನೇಹಿ ಗಣೇಶನ ಮೂರ್ತಿ!
ಕೆಡಿಪಿ ಸಭೆಗೆ ಪೊಲೀಸ್ ಆಯುಕ್ತ ಗೈರಾಗಿದ್ದಕ್ಕೆ ಸಚಿವ ಯು.ಟಿ.ಖಾದರ್ ಗರಂ
ಕೆಡಿಪಿ ಸಭೆಗೆ ಪೊಲೀಸ್ ಆಯುಕ್ತ ಗೈರಾಗಿದ್ದಕ್ಕೆ ಸಚಿವ ಯು.ಟಿ.ಖಾದರ್ ಗರಂ
ಗಂಭೀರ ಪಡೆದುಕೊಂಡ ಜಾರಕಿಹೊಳಿ ಕೇಸ್: ಇಡಿ ಸಭೆಯಲ್ಲಿ ಮಹತ್ವದ ಚರ್ಚೆ
ಗಂಭೀರ ಪಡೆದುಕೊಂಡ ಜಾರಕಿಹೊಳಿ ಕೇಸ್: ಇಡಿ ಸಭೆಯಲ್ಲಿ ಮಹತ್ವದ ಚರ್ಚೆ
LIVE: ಕೇಂದ್ರ ಸಚಿವ ಜೆ.ಪಿ‌.ನಡ್ಡಾ ಮಹತ್ವದ ಸುದ್ದಿಗೋಷ್ಠಿ
LIVE: ಕೇಂದ್ರ ಸಚಿವ ಜೆ.ಪಿ‌.ನಡ್ಡಾ ಮಹತ್ವದ ಸುದ್ದಿಗೋಷ್ಠಿ
ಕ್ಯಾರೆಕ್ಟರ್ ಲೆಸ್ ಎಂದ ಮಂಜ, ಗಂಡಸೇ ಅಲ್ಲ ಎಂದ ಕಾವ್ಯಾ: ವಿಡಿಯೋ
ಕ್ಯಾರೆಕ್ಟರ್ ಲೆಸ್ ಎಂದ ಮಂಜ, ಗಂಡಸೇ ಅಲ್ಲ ಎಂದ ಕಾವ್ಯಾ: ವಿಡಿಯೋ
ಟಿ.ನರಸೀಪುರ ಇನ್ಸ್​​​ಪೆಕ್ಟರ್ ಪರ ಡಿಕೆ ಶಿವಕುಮಾರ್ ಬ್ಯಾಟಿಂಗ್
ಟಿ.ನರಸೀಪುರ ಇನ್ಸ್​​​ಪೆಕ್ಟರ್ ಪರ ಡಿಕೆ ಶಿವಕುಮಾರ್ ಬ್ಯಾಟಿಂಗ್
ವೈಷ್ಣವಿ ಬಟ್ಟೆ ಬಗ್ಗೆ ಅವಿನಾಶ್ ಕಮೆಂಟ್; ಉತ್ತರಿಸಿದ ಪ್ರಥಮಾ
ವೈಷ್ಣವಿ ಬಟ್ಟೆ ಬಗ್ಗೆ ಅವಿನಾಶ್ ಕಮೆಂಟ್; ಉತ್ತರಿಸಿದ ಪ್ರಥಮಾ
ರಮೇಶ್​​ ಬಳಿಕ ಸತೀಶ್ ಜಾರಕಿಹೊಳಿ ಮುಗಿಸಲೂ ಯತ್ನ: ಕುಮಾರಸ್ವಾಮಿ
ರಮೇಶ್​​ ಬಳಿಕ ಸತೀಶ್ ಜಾರಕಿಹೊಳಿ ಮುಗಿಸಲೂ ಯತ್ನ: ಕುಮಾರಸ್ವಾಮಿ