ಶಿಕಾರಿಪುರದಿಂದ ಒಬ್ಬಂಟಿಯಾಗಿ ಪ್ರವಾಸ ಶುರುಮಾಡುತ್ತೇನೆ ಎಂದು ವಿಜಯೇಂದ್ರಗೆ ಸವಾಲೆಸೆದ ರಮೇಶ್ ಜಾರಕಿಹೊಳಿ
ರಮೇಶ್ ಜಾರಕಿಹೊಳಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಬಗ್ಗೆ ಬಹಳ ಗೌರವದಿಂದ ಮಾತಾಡಿದರು. ಅವರು ಪಕ್ಷದ ಹಿರಿಯರು ಮತ್ತು ಯಾವತ್ತಿಗೂ ತನ್ನ ನಾಯಕರೇ, ಅವರ ಮಾರ್ಗದರ್ಶನದ ಅವಶ್ಯಕತೆ ನಮಗಿದೆ, ಆದರೆ ಪಕ್ಷದ ಸಂಘಟನೆ ಮಾಡಿದಕ್ಕೆ ತಕ್ಕನಾಗಿ ಅವರು ಅಧಿಕಾರವನ್ನೂ ಅನುಭವಿಸಿದ್ದಾರೆ, ನಾಲ್ಕು ಬಾರಿ ರಾಜ್ಯದ ಸಿಎಂ ಆಗೋದು ಚಿಕ್ಕ ವಿಷಯವಲ್ಲ ಎಂದು ಅವರು ಹೇಳಿದರು.
ಬೆಳಗಾವಿ: ಜಿಲ್ಲೆಯ ಅಂಕಲಗಿ ಗ್ರಾಮದಲ್ಲಿ ಸಾರ್ವಜನಿಕ ಸಭೆಯೊಂದನ್ನು ಉದ್ದೇಶಿಸಿ ಮಾತಾಡಿದ ಶಾಸಕ ರಮೇಶ್ ಜಾರಕಿಹೊಳಿ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಸವಾಲೆಸೆದರು. ಬಸನಗೌಡ ಪಾಟೀಲ್ ಮತ್ತು ಜಾರಕಿಹೊಳಿ ವಿಜಯೇಂದ್ರ ವಿರುದ್ಧ ಬೆಂಕಿಯುಗುಳುತ್ತಿದ್ದಾರೆ. ಓಡಾಡುವುದು ಕಷ್ಟವಾಗುತ್ತೆ ಅಂತ ವಿಜಯೇಂದ್ರ ಜಾರಕಿಹೊಳಿಗೆ ಹೇಳಿದ್ದು ಇಬ್ಬರಿಗೂ ಸಹ್ಯವಾಗುತ್ತಿಲ್ಲ. ತಾನು ಶಿಕಾರಿಪುರಕ್ಕೆ ಹೋಗಿ ವಿಜಯೇಂದ್ರ ಮನೆ ಮುಂದಿನಿಂದಲೇ ರಾಜ್ಯ ಪ್ರವಾಸ ಶುರುಮಾಡುತ್ತೇನೆ, ತಾನೊಬ್ಬನೇ ಅಲ್ಲಿಗೆ ಹೋಗುತ್ತೇನೆ, ದಿನಾಂಕವನ್ನು ವಿಜಯೇಂದ್ರನೇ ನಿಗದಿ ಮಾಡಲಿ ಎಂದು ಜಾರಕಿಹೊಳಿ ಸವಾಲೆಸೆದರು. ಪಕ್ಷದ ಅಧ್ಯಕ್ಷ ಸ್ಥಾನದ ಬಗ್ಗೆ ತನಗೆ ಗೌವವಿದೆಯೇ ಹೊರತು ವಿಜಯೇಂದ್ರ ಬಗ್ಗೆ ಇಲ್ಲ ಎಂದು ಗೋಕಾಕ ಶಾಸಕ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಯಡಿಯೂರಪ್ಪ ಬಗ್ಗೆ ಮಾತಾಡುವಾಗ ರಮೇಶ್ ಜಾರಕಿಹೊಳಿ ನಾಲಗೆಯನ್ನು ಹಿಡಿತದಲ್ಲಿಟ್ಟುಕೊಳ್ಳಲಿ: ವಿಜಯೇಂದ್ರ
Latest Videos