ಯಡಿಯೂರಪ್ಪರನ್ನು ಸಿಎಂ ಅಭ್ಯರ್ಥಿಯಾಗಿ ಪ್ರೊಜೆಕ್ಟ್ ಮಾಡಿದ್ದೇ ನಾನು: ಬಸನಗೌಡ ಪಾಟೀಲ್ ಯತ್ನಾಳ್
ವಿಜಯೇಂದ್ರ ಹೊಡೆಯುವ ಮತ್ತು ಹೊಡೆಸುವ ಮಾತಾಡಿದ್ದಾನೆ, ಅವನು ಹೊಡೆದಾಗ ಹೊಡಿಸಿಕೊಂಡು ಸುಮ್ಮನಿರಲು ನಾವೇನೂ ಗಾಂಧಿವಾದಿಗಳಲ್ಲ, ಸುಭಾಶ್ಚಂದ್ರ ಬೋಸ್ ಅನುಯಾಯಿಗಳು, ಅವನು ಒಮ್ಮೆ ಹೊಡೆದರೆ ನಾವು 4 ಬಾರಿ ಹೊಡೆಯುತ್ತೇವೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು. ಶಿವರಾಜ್ ಸಿಂಗ್ ಚೌಹಾನ್ ರಾಜ್ಯದಲ್ಲಿರುವಾಗಲೇ ಯತ್ನಾಳ್ ವಾಗ್ದಾಳಿ ಶುರುಮಾಡಿದ್ದು ಕುತೂಹಲಕಾರಿಯಾಗಿದೆ.
ವಿಜಯಪುರ: ಕೆಲ ದಿನಗಳ ಮಟ್ಟಿಗೆ ಸುಮ್ಮನಿದ್ದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೊಮ್ಮೆ ಬಿಎಸ್ ಯಡಿಯೂರಪ್ಪ ಮತ್ತು ಬಿವೈ ವಿಜಯೇಂದ್ರ ವಿರುದ್ಧ ವಾಗ್ದಾಳಿಯನ್ನು ಶುರುಮಾಡಿದ್ದಾರೆ. ಹಿಂದೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ದಿವಂಗತ ಅರುಣ್ ಜೇಟ್ಲಿ ಅವರೊಂದಿಗೆ ಮಾತಾಡಿ ಉಚ್ಚಾಟನೆಗೊಂಡಿದ ಯಡಿಯೂರಪ್ಪರನ್ನು ಪುನಃ ಪಕ್ಷಕ್ಕೆ ಕರೆತಂದು ಪಕ್ಷದ ರಾಜ್ಯಾಧ್ಯಕ್ಷ ಮಾಡಿದ್ದು ತಾನು, ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಪ್ರೊಜೆಕ್ಟ್ ಮಾಡಿದ್ದು ತಾನು, ಹಾಗಾಗಿ ಪಕ್ಷದಲ್ಲಿ ಯಡಿಯೂರಪ್ಪಗಿಂತ ತಾನೇ ಸೀನಿಯರ್ ಎಂದು ಯತ್ನಾಳ್ ಹೇಳಿದರು. ಆಗೆಲ್ಲ ವಿಜಯೇಂದ್ರ ಕಲೆಕ್ಷನ್ ಮಾಡಿಕೊಂಡು ತಿರುಗಾಡುತ್ತಿದ್ದ ಎಂದು ಯತ್ನಾಳ್ ಬಿಜೆಪಿ ರಾಜ್ಯಾಧ್ಯಕ್ಷನನ್ನು ಏಕವಚನದಲ್ಲೇ ಜರಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ರಮೇಶ್ ಜಾರಕಿಗೊಳಿಯನ್ನು ಎಚ್ಚರಿಸಿದಂತೆ ಬಸನಗೌಡ ಯತ್ನಾಳ್ಗೆ ತಾಕೀತು ಮಾಡದ ವಿಜಯೇಂದ್ರ
Latest Videos