ರಮೇಶ್ ಜಾರಕಿಗೊಳಿಯನ್ನು ಎಚ್ಚರಿಸಿದಂತೆ ಬಸನಗೌಡ ಯತ್ನಾಳ್​ಗೆ ತಾಕೀತು ಮಾಡದ ವಿಜಯೇಂದ್ರ

ರಮೇಶ್ ಜಾರಕಿಗೊಳಿಯನ್ನು ಎಚ್ಚರಿಸಿದಂತೆ ಬಸನಗೌಡ ಯತ್ನಾಳ್​ಗೆ ತಾಕೀತು ಮಾಡದ ವಿಜಯೇಂದ್ರ

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 17, 2025 | 12:22 PM

ಬಿಜೆಪಿ ರಾಜ್ಯಧ್ಯಕ್ಷನಾಗಿ ಮುಂದುವರಿಯುವ ಬಗ್ಗೆ ವಿಜಯೇಂದ್ರ ಭರವಸೆಯನ್ನು ವ್ಯಕ್ತಪಡಿಸುತ್ತಾರೆ. ಜಬಾಬ್ದಾರಿ ವಹಿಸಿಕೊಂಡು ಒಂದು ವರ್ಷ ಕಳೆದಿದೆ, ಮೊದಲ ದಿನದಿಂದಲೇ ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತಿದ್ದೇನೆ, ಬೆಂಗಳೂರು-ಮೈಸೂರು ಪಾದಯಾತ್ರೆ ಸಿದ್ದಾರಾಮಯ್ಯರನ್ನು ಅಧೀರಗೊಳಿಸಿತ್ತು, ತನ್ನ ಕಾರ್ಯವೈಖರಿ ಬಗ್ಗೆ ಕಾರ್ಯಕರ್ತರು ಸಂತೃಪ್ತರಾಗಿದ್ದಾರೆ ಎಂದು ಹೇಳಿದರು.

ಮೈಸೂರು: ಸುತ್ತೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮತ್ತೊಮ್ಮೆ ಬಸನಗೌಡ ಪಾಟೀಲ್ ಯತ್ನಾಳ್ ವಿಷಯದಲ್ಲಿ ಸಾಫ್ಟ್ ಕಾರ್ನರ್ ಪ್ರದರ್ಶಿಸಿ, ದೇವರಿಗೆ ಅವರಿಗೆ ಒಳ್ಳೆಯದು ಮಾಡಲಿ ಎಂದಷ್ಟೇ ಹೇಳಿದರು. ಕೊಪ್ಪಳದಲ್ಲಿ ಮೊನ್ನೆ ವಿಜಯೇಂದ್ರ ಅವರು ರಮೇಶ್ ಜಾರಕಿಹೊಳಿ ವಿಷಯದಲ್ಲಿ ಮಾತಾಡಿದ ಹಾಗೆ ತನ್ನ ಬಗ್ಗೆ ಮಾತಾಡಿದರೆ ಪರಿಣಾಮ ನೆಟ್ಟಗಿರೋದಿಲ್ಲ ಎಂದು ಯತ್ನಾಳ್ ಹೇಳಿದ್ದಾರೆ . ಆ ಮಾತಿಗೆ ಪ್ರತಿಕ್ರಿಯಿಸುವ ವಿಜಯೇಂದ್ರ, ಬಹಳ ಸಂತೋಷ ದೇವರು ಅವರಿಗೆ ಒಳ್ಳೇದು ಮಾಡಲಿ ಅನ್ನುತ್ತಾರೆ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರ ಆಶೀರ್ವಾದ ಪಡೆದ ವಿಜಯೇಂದ್ರ