ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರ ಆಶೀರ್ವಾದ ಪಡೆದ ವಿಜಯೇಂದ್ರ
ವಿಜಯೇಂದ್ರ ಸುತ್ತೂರು ಮಠದಲ್ಲೇ ಬೆಳಗಿನ ಉಪಹಾರ ಸೇವಿಸಿದರು. ಅಕ್ಕಿ ರೊಟ್ಟಿಯ ಮೇಲೆ ವಿಶೇಷ ಆಸಕ್ತಿ ತೋರಿದ ಅವರು ಇಡ್ಲಿ ಬಡಿಸಲು ಬಂದರೂ ನಿರಾಕರಿಸಿ ರೊಟ್ಟಿಯನ್ನು ಸವಿದರು. ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಮಾತಾಡಿದ ಅವರು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಹೇಳಿದರು.
ಮೈಸೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಇಂದು ಮೈಸೂರಿನ ನಂಜನಗೂಡು ತಾಲ್ಲೂಕು ಸುತ್ತೂರು ಗ್ರಾಮದಲ್ಲಿ ಹರಿಯುವ ಕಪಿಲಾ ನದಿತೀರದಲ್ಲಿರುವ ಸುತ್ತೂರು ಮಠಕ್ಕೆ ತೆರಳಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಯವರನ್ನು ಭೇಟಿ ಮಾಡಿದರು. ಸ್ವಾಮೀಜಿಯವರನ್ನು ಕಂಡಕೂಡಲೇ ವಿಜಯೇಂದ್ರ ಪಾದಗಳಿಗೆ ನಮಸ್ಕರಿಸಿದರು. ನಂತರ ಬಿಜೆಪಿ ನಾಯಕನ ಜೊತೆ ಬಂದಿದ್ದ ಸ್ಥಳೀಯ ಮುಖಂಡರು ಸಾಮೀಜಿಯವರ ಪಾದಮುಟ್ಟಿ ಅಶೀರ್ವಾದ ಪಡೆದರು. ಸ್ವಾಮೀಜಿಯವರೊಂದಿಗೆ ವಿಜಯೇಂದ್ರ ಮಾತಾಡುತ್ತ ಕೂತಿರುವುದನ್ನು ದೃಶ್ಯಗಳಲ್ಲಿ ಗಮನಿಸಬಹುದು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಯಡಿಯೂರಪ್ಪ ಬಗ್ಗೆ ಮಾತಾಡುವಾಗ ರಮೇಶ್ ಜಾರಕಿಹೊಳಿ ನಾಲಗೆಯನ್ನು ಹಿಡಿತದಲ್ಲಿಟ್ಟುಕೊಳ್ಳಲಿ: ವಿಜಯೇಂದ್ರ
Latest Videos