ಯಡಿಯೂರಪ್ಪ ಬಗ್ಗೆ ಮಾತಾಡುವಾಗ ರಮೇಶ್ ಜಾರಕಿಹೊಳಿ ನಾಲಗೆಯನ್ನು ಹಿಡಿತದಲ್ಲಿಟ್ಟುಕೊಳ್ಳಲಿ: ವಿಜಯೇಂದ್ರ

ಯಡಿಯೂರಪ್ಪ ಬಗ್ಗೆ ಮಾತಾಡುವಾಗ ರಮೇಶ್ ಜಾರಕಿಹೊಳಿ ನಾಲಗೆಯನ್ನು ಹಿಡಿತದಲ್ಲಿಟ್ಟುಕೊಳ್ಳಲಿ: ವಿಜಯೇಂದ್ರ

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 15, 2025 | 7:17 PM

ರಮೇಶ್ ಜಾರಕಿಹೊಳಿ ವಿಷಯವನ್ನೆಲ್ಲ ತನ್ನ ಬಳಿ ಪ್ರಸ್ತಾಪ ಮಾಡೋದು ಬೇಡ ಎಂದ ವಿಜಯೇಂದ್ರ, ಅವರಿಗೆ ತನ್ನ ಬಗ್ಗೆ ದೂರುಗಳಿದ್ದರೆ ದೆಹಲಿಗೆ ಹೋಗಿ ವರಿಷ್ಠರ ಮುಂದೆ ಹೇಳಿಕೊಳ್ಳಲಿ ಅಂತ ಹೇಳಿದರು. ಇವತ್ತು ಬೆಳಗ್ಗೆ ಬೆಳಗಾವಿಯಲ್ಲಿ ಮಾತಾಡಿದ್ದ ಶಾಸಕ ಜಾರಕಿಹೊಳಿ ವಿಜಯೇಂದ್ರರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸ ಬೇಕಾಗಿದೆ ಎಂದು ಹೇಳಿದ್ದರು.

ಕೊಪ್ಪಳ: ಬಿಎಸ್ ಯಡಿಯೂರಪ್ಪ ಮತ್ತು ತಮ್ಮ ಬಗ್ಗೆ ಬೆಳಗಾವಿಯಲ್ಲಿ ಹಗುರವಾಗಿ ಮಾತಾಡಿರುವ ರಮೇಶ್ ಜಾರಕಿಹೊಳಿ ವಿರುದ್ಧ ಬೆಂಕಿ ಕಾರಿದ ಬೆಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಇತ್ತೀಗಷ್ಟೇ ಪಕ್ಷಕ್ಕೆ ಬಂದಿರುವ ಗೋಕಾಕ ಶಾಸಕ, ಯಡಿಯೂರಪ್ಪ ಅವರ ಬಗ್ಗೆ ಮಾತಾಡುವಾಗ ನಾಲಗೆ ಬಿಗಿಹಿಡಿಯಬೇಕು ಎಂದು ಎಚ್ಚರಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯೊಂದನ್ನು ನಡೆಸಿ ಮಾತಾಡಿದ ಅವರು, ಯಡಿಯೂರಪ್ಪ ಈ ನಾಡು ಕಂಡ ಅಪ್ರತಿಮ ಹೋರಾಟಗಾರ, ಕಾಲಿಗೆ ಚಕ್ರ ಕಟ್ಟಿಕೊಂಡು ಹಳ್ಳಿಹಳ್ಳಿ ಸುತ್ತುತ್ತ ಪಕ್ಷ ಸಂಘಟನೆ ಮಾಡಿದ್ದಾರೆ, ಅವರ ಬಗ್ಗೆ ಹಗುರವಾಗಿ ಮಾತಾಡಿದರೆ ಲಕ್ಷಾಂತರ ಕಾರ್ಯಕರ್ತರ ಮನಸ್ಸಿಗೆ ನೋವಾಗುತ್ತದೆ ಮತ್ತು ಜಾರಕಿಹೊಳಿ ಹೊರಗಡೆ ತಿರುಗಾಡುವುದು ಕಷ್ಟವಾದೀತು ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ವಿಜಯೇಂದ್ರ ಭ್ರಷ್ಟ, ಆತನ ನಾಯಕತ್ವಕ್ಕೆ ನನ್ನ ವಿರೋಧ; ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧವೇ ರಮೇಶ್ ಜಾರಕಿಹೊಳಿ ಕಿಡಿ