ರಾಜಕಾರಣಿಗಳು ಮತ್ತು ಬೆಂಬಲಿಗರ ಎಡಬಿಡದ ಭೇಟಿಯಿಂದ ತೊಂದರೆಗೀಡಾಗುತ್ತಿರುವ ಲಕ್ಷ್ಮಿ ಹೆಬ್ಬಾಳ್ಕರ್
ಗಮನಿಸಬೇಕಾದ ಅಂಶವೇನೆಂದರೆ, ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ವಿಶ್ರಾಂತಿ ಸಿಗಲಿ ಎಂಬ ಉದ್ದೇಶದಿಂದ ಅವರ ತಾಯಿ ಮತ್ತು ಸಹೋದರಿಯರು ಆಸ್ಪತ್ರೆಗೆ ಹೋಗುತ್ತಿಲ್ಲ. ಸಚಿವೆ ಚಿಕಿತ್ಸೆಗೆ ಚೆನ್ನಾಗಿ ಸ್ಪಂದಿಸಿ ಉತ್ತಮವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಡಾ ರವಿ ಪಾಟೀಲ್ ಹೇಳುವ ಪ್ರಕಾರ ರವಿವಾರ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಬಹುದು. ಅದರೆ ಅವರಿಗೆ ವಿಶ್ರಾಂತಿ ಬೇಕಿರುವುದನ್ನು ಜನ ಮನಗಾಣಬೇಕು.
ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಳರ್ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿ ಎರಡು ಬೆನ್ನುಮೂಳೆ ಮುರಿತದೊಂದಿಗೆ ಅವರು ನಗರದ ಖಾಸಗಿ ಆಸ್ಪತ್ರೆಯೊಂದನ್ನು ಸೇರಿ 4ದಿನ ಕಳೆದಿವೆ. ಲಕ್ಷ್ಮಿ ಅವರಿಗೆ ಸಂಪೂರ್ಣ ವಿಶ್ರಾಂತಿಯ ಅವಶ್ಯಕತೆಯಿದೆ. ಅದರೆ ರಾಜಕಾರಣಿಗಳಿಗಳು ಮತ್ತು ಅಭಿಮಾನಿಗಳು ಎಡೆಬಿಡದೆ ಆಸ್ಪತ್ರೆಗೆ ಭೇಟಿ ನೀಡಿ ಸಚಿವೆಯ ವಿಶ್ರಾಂತಿಗೆ ಭಂಗ ತರುತ್ತಿದ್ದಾರೆ. ಇದೇ ಕಾರಣಕ್ಕೆ ನಿನ್ನೆ ಅವರು ತಲೆನೋವಿನಿಂದ ಬಳಲಿದ್ದಾರೆ ಮತ್ತು ಸ್ಮೃತಿ ತಪ್ಪುವ ಸೆನ್ಸೇಷನ್ ಕಾಡಿದೆ. ನ್ಯೂರೋ ಸರ್ಜನ್ ಒಬ್ಬರು ಸಚಿವೆಯನ್ನು ಪರೀಕ್ಷಿಸಿ ವಿಶ್ರಾಂತಿಯಿಲ್ಲದ ಕಾರಣ ಹಾಗಾಗುತ್ತಿದೆ, ಅವರಿಗೆ 48 ತಾಸು ಕಂಪ್ಲೀಟ್ ರೆಸ್ಟ್ ಬೇಕು, ಮಾತಾಡಲೇಬಾರದು ಎಂದಿದ್ದಾರೆ. ಹಾಗಾಗಿ, ಅವರನ್ನು ನೋಡಲು, ಅರೋಗ್ಯ ವಿಚಾರಿಸಲು ಯಾರೂ ಬರಬಾರದು ಎಂದು ಡಾ ರವಿ ಪಾಟೀಲ್ ಮನವಿ ಮಾಡಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮೊದ್ಲೇ ಭವಿಷ್ಯ ಹೇಳಿದ್ರು: ಕಾರು ಅಪಘಾತದ ಸತ್ಯ ಬಿಚ್ಚಿಟ್ಟ ಸಹೋದರ ಚನ್ನರಾಜ