Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೈದ್ಯರು ಬರಬೇಡವೆಂದು ಕಳಕಳಿಯಿಂದ ಬೇಡಿಕೊಂಡರೂ ಲಕ್ಷ್ಮಿ ಹೆಬ್ಬಾಳ್ಕರ್ ನೋಡಲು ಜನಪ್ರತಿನಿಧಿಗಳ ದಂಡು!

ವೈದ್ಯರು ಬರಬೇಡವೆಂದು ಕಳಕಳಿಯಿಂದ ಬೇಡಿಕೊಂಡರೂ ಲಕ್ಷ್ಮಿ ಹೆಬ್ಬಾಳ್ಕರ್ ನೋಡಲು ಜನಪ್ರತಿನಿಧಿಗಳ ದಂಡು!

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 17, 2025 | 4:01 PM

ಈ ವಿಡಿಯೋದಲ್ಲಿ ಕಾಣುವ ನಾಯಕರಿಗಿಂತ ಶಾಸಕ ರಾಜು ಕಾಗೆ ಹೆಚ್ಚು ಪ್ರಜ್ಞಾವಂತರು ಅನಿಸುತ್ತೆ. ಆಸ್ಪತ್ರೆಗೆ ಬಂದಿದ್ದ ಅವರು ಸಚಿವೆ ವಿಶ್ರಾಂತಿಯಲ್ಲಿದ್ದಾರೆ ಅಂದಾಕ್ಷಣ ವಾಪಸ್ಸು ಹೊರಟುಹೋದರು. ಸವದಿ ಮತ್ತು ಉಳಿದವರ ಜೊತೆ ಎಷ್ಟು ಜನ ಬಂದಿದ್ದಾರೆ ಅಂತ ನೋಡಿ. ಇವರೆಲ್ಲರಿಂದ ಕೇವಲ ಲಕ್ಷ್ಮಿ ಹೆಬ್ಬಾಳ್ಕರ್ ಮಾತ್ರವಲ್ಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬೇರೆಯವರಿಗೂ ತೊಂದರೆ.

ಬೆಳಗಾವಿ: ನಗರದ ವಿಜಯ ಆರ್ಥೋ ಮತ್ತು ಟ್ರಾಮಾ ಸೆಂಟರ್ ಮುಖ್ಯಸ್ಥ ಡಾ ರವಿ ಪಾಟೀಲ್ ಮತ್ತು ಇತರ ವೈದ್ಯರ ಧರ್ಮಸಂಕಟವೆಂದರೆ ಇದೇ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚಿಕಿತ್ಸೆ ಪಡೆಯುತ್ತಿರುವ ಸಚಿಬೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಅರೋಗ್ಯ ವಿಚಾರಿಸಲು ಎರಡು ದಿನಗಳವರೆಗೆ ಯಾರೂ ಬರೋದು ಬೇಡ ಎಂದು ಡಾ ರವಿ ಮತ್ತು ಅವರ ಜೊತೆವೈದ್ಯರು ಮಾಧ್ಯಮಗಳ ಮೂಲಕ ಕೈ ಜೋಡಿಸಿ ವಿನಂತಿಸಿಕೊಂಡರೂ ಜನಪ್ರತಿನಿಧಿಗಳು ಭೇಟಿ ನೀಡೋದನ್ನು ನಿಲ್ಲಿಸಲ್ಲ. ಇಲ್ನೋಡಿ, ಸಚಿವ ಅರ್ ಬಿ ತಿಮ್ಮಾಪುರ, ಶಾಸಕರಾದ ಲಕ್ಷ್ಮಣ ಸವದಿ, ಆಸಿಫ್ ಸೇಠ್ ಮೊದಲಾದವರು ಆಸ್ಪತ್ರೆಗೆ ಬಂದಿದ್ದಾರೆ. ಗಾಬರಿ ಮತ್ತು ಅಚ್ಚರಿ ಹುಟ್ಟಿಸುವ ಸಂಗತಿಯೆಂದರೆ, ಈ ನಾಯಕರೊಂದಿಗೆ ಲಕ್ಷ್ಮಿ ಸಹೋದರ ಹಾಗೂ ಎಂಎಲ್​ಸಿ ಚನ್ನರಾಜ್ ಹಟ್ಟಿಹೊಳಿ ಕೂಡ ಇದ್ದಾರೆ, ಕನಿಷ್ಠ ಅವರಿಗಾದರೂ ಅಕ್ಕನ ಅರೋಗ್ಯ ಸ್ಥಿತಿಯ ಬಗ್ಗೆ ಕಾಳಜಿ ಬೇಡವೇ?

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ರಾಜಕಾರಣಿಗಳು ಮತ್ತು ಬೆಂಬಲಿಗರ ಎಡಬಿಡದ ಭೇಟಿಯಿಂದ ತೊಂದರೆಗೀಡಾಗುತ್ತಿರುವ ಲಕ್ಷ್ಮಿ ಹೆಬ್ಬಾಳ್ಕರ್