ಈ ಸೀಸನ್ನ ಕೊನೆಯ ನಾಮಿನೇಷನ್ನಲ್ಲಿ ಮಂಜಣ್ಣ ಟಾರ್ಗೆಟ್
Bigg Boss Kannada season 11: ಬಿಗ್ಬಾಸ್ ಫಿನಾಲೆಗೆ ಕೆಲವೇ ದಿನಗಳು ಬಾಕಿ ಇದೆ. ಈ ಸೀಸನ್ನ ಕಟ್ಟ ಕಡೆಯ ನಾಮಿನೇಷನ್ ನಡೆದಿದೆ. ಪ್ರತಿಯೊಬ್ಬರೂ ಸಹ ಈ ವಾರ ಹೇಗಾದರೂ ಉಳಿದುಕೊಳ್ಳೋಣ ಎಂಬ ಪ್ರಯತ್ನದಲ್ಲಿದ್ದಾರೆ. ನಾಮಿನೇಷನ್ ಪ್ರಕ್ರಿಯೆಯಲ್ಲಿ ಉಗ್ರಂ ಮಂಜು ಟಾರ್ಗೆಟ್ ಆದಂತಿದೆ.
ಬಿಗ್ಬಾಸ್ ಕನ್ನಡ ಸೀಸನ್ 11 ಮುಗಿಯಲು ಇನ್ನೊಂದು ವಾರವಷ್ಟೆ ಬಾಕಿ ಇದೆ. ಮುಂದಿನ ವಾರ ಫಿನಾಲೆ ವಾರ. ಇದೀಗ ಈ ಸೀಸನ್ನ ಕೊನೆಯ ನಾಮಿನೇಷನ್ಸ್ ನಡೆದಿದೆ. ಈ ನಾಮಿನೇಷನ್ಸ್ ಭಾರಿ ಕುತೂಹಲ ಕೆರಳಿಸಿದೆ. ಈ ನಾಮಿನೇಷನ್ನಲ್ಲಿ ಬಚಾವಾದವರು ಫಿನಾಲೆಗೆ ಪಕ್ಕಾ ಇರಲಿದ್ದಾರೆ. ಹಾಗಾಗಿ ಈ ನಾಮಿನೇಷನ್ ಅತ್ಯಂತ ಮಹತ್ವದ್ದಾಗಿದೆ. ಆದರೆ ಸೀಸನ್ನ ಕೊನೆಯ ನಾಮಿನೇಷನ್ನಲ್ಲಿ ಉಗ್ರಂ ಮಂಜು ಟಾರ್ಗೆಟ್ ಆದಂತಿದೆ. ಅದೂ ಗೌತಮಿಯ ಕಾರಣಕ್ಕೆ. ಧನರಾಜ್, ಭವ್ಯಾ ಇನ್ನಿತರರು ಮುಗಿಬಿದ್ದು ಮಂಜು ಅವರನ್ನು ನಾಮಿನೇಟ್ ಮಾಡಿದ್ದಾರೆ. ಈ ವಾರ ನಾಮಿನೇಟ್ ಆದವರು ಯಾರು? ಉಳಿದುಕೊಂಡವರು ಯಾರು? ಪ್ರೋಮೋ ಇಲ್ಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jan 17, 2025 05:26 PM
Latest Videos