Viral : ವಾರಕ್ಕೆ 90ಗಂಟೆ ಯಾಕೆ ಕೆಲಸ ಮಾಡ್ಬೇಕು? ಎಲ್ ಅಂಡ್ ಟಿ ಮುಖ್ಯಸ್ಥನಿಗೆ ಕೌಂಟರ್ ನೀಡಿದ ಆನಂದ್ ಮಹೀಂದ್ರಾ

ಕೆಲಸ ಮಾಡುವ ಅವಧಿ ಹೆಚ್ಚಿಸುವ ಕುರಿತಾದ ಹೇಳಿಕೆಗಳು ಆಗಾಗ ಕೇಳಿಬರುತ್ತವೆ. ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಹಾಗೂ ಎಲ್ ಅಂಡ್ ಟಿ ಮುಖ್ಯಸ್ಥ ಎಸ್‌ಎನ್‌ ಸುಬ್ರಹ್ಮಣ್ಯನ್‌ ಅವರ ಹೇಳಿಕೆಗಳು ಚರ್ಚೆಗೆ ಕಾರಣವಾಗಿತ್ತು. ಇದೀಗ ಉದ್ಯಮಿ ಆನಂದ್ ಮಹಿಂದ್ರಾ ವರ್ಕ್ ಲೈಫ್ ಬ್ಯಾಲೆನ್ಸ್ ಸೇರಿದಂತೆ ಹೆಚ್ಚುವರಿ ಕೆಲಸ ಮಾಡುವುದನ್ನು ವಿರೋಧಿಸುವ ಮೂಲಕ ಎಲ್ ಅಂಡ್ ಟಿ ಮುಖ್ಯಸ್ಥನಿಗೆ ತಿರುಗೇಟು ನೀಡಿದ್ದಾರೆ.

Viral : ವಾರಕ್ಕೆ 90ಗಂಟೆ ಯಾಕೆ ಕೆಲಸ ಮಾಡ್ಬೇಕು? ಎಲ್ ಅಂಡ್ ಟಿ ಮುಖ್ಯಸ್ಥನಿಗೆ ಕೌಂಟರ್ ನೀಡಿದ ಆನಂದ್ ಮಹೀಂದ್ರಾ
Anand Mahindra
Follow us
ಸಾಯಿನಂದಾ
| Updated By: ಅಕ್ಷತಾ ವರ್ಕಾಡಿ

Updated on: Jan 12, 2025 | 12:16 PM

ಒಬ್ಬ ವ್ಯಕ್ತಿ ವಾರದಲ್ಲಿ ಎಷ್ಟು ಗಂಟೆಗಳ ಕೆಲಸ ಮಾಡಬೇಕು ಎನ್ನುವ ಬಗ್ಗೆ ಸಾಕಷ್ಟು ಚರ್ಚೆಗಳು ಕೇಳಿ ಬರುತ್ತಲೇ ಇರುತ್ತವೆ. ಈ ಹಿಂದೆ ಇನ್ಫೋಸಿಸ್‌ ಸಹ ಸಂಸ್ಥಾಪಕ ನಾರಾಯಣ ಮೂರ್ತಿ, ದೇಶದ ಯುವ ಜನರು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಅನ್ನೋದು ನನ್ನ ಅಭಿಪ್ರಾಯ ಎಂದಿದ್ದರು. ಅದಲ್ಲದೇ, ಕಂಪನಿ ಎಲ್‌ ಅಂಡ್ ಟಿ ಚೇರ್ಮನ್‌ ಎಸ್‌ಎನ್‌ ಸುಬ್ರಹ್ಮಣ್ಯನ್‌ ಇತ್ತೀಚೆಗಷ್ಟೇ ಕಂಪನಿಯ ಆಂತರಿಕ ಸಭೆಯಲ್ಲಿ ವಾರಕ್ಕೆ ಕನಿಷ್ಠ 90 ಗಂಟೆಗಳ ಕಾಲ ಕೆಲಸ ಮಾಡಬೇಕು ಅನ್ನೋದು ನನ್ನ ಅಭಿಪ್ರಾಯ ಎಂದಿದ್ದರು. ಕೆಲಸ ಅವಧಿಯ ಕುರಿತಾದ ಈ ಹೇಳಿಕೆಗಳು ಅಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಇದೇ ವಿಚಾರಕ್ಕೆ ಸಂಬಂಧ ಪಟ್ಟಂತೆ ಮಹೀಂದ್ರಾ ಕಂಪನಿಯ ಚೇರ್ಮನ್‌ ಆನಂದ್ ಮಹಿಂದ್ರಾ ಪ್ರತಿಕ್ರಿಯೆ ನೀಡಿದ್ದಾರೆ.

ನೀವು ವಾರದಲ್ಲಿ ಎಷ್ಟು ಗಂಟೆಗಳ ಕಾಲ ಕೆಲಸ ಮಾಡುತ್ತೀರಿ ಎನ್ನುವ ಪ್ರಶ್ನೆಗೆ, ‘ನಾನು ಈ ಪ್ರಶ್ನೆಯನ್ನು ಯಾವಾಗಲೂ ಅವಾಯ್ಡ್‌ ಮಾಡಲು ಬಯಸುತ್ತೇನೆ. ಎಷ್ಟು ಸಮಯ ಕೆಲಸ ಮಾಡುತ್ತೀರಿ ಅನ್ನೋದು ನನಗೆ ಯಾವತ್ತಿಗೂ ಪ್ರಶ್ನೆಯಲ್ಲ. ನನ್ನ ವರ್ಕ್‌ ಎಷ್ಟು ಕ್ವಾಲಿಟಿಯಲ್ಲಿತ್ತು ಅನ್ನೋದೇ ಮುಖ್ಯ. ನಾನು ಎಷ್ಟು ಗಂಟೆ ಕೆಲಸ ಮಾಡುತ್ತೀನಿ ಅನ್ನೋ ಪ್ರಶ್ನೆಗಳನ್ನ ಕೇಳಬೇಡಿ. 10 ಗಂಟೆಗಳಲ್ಲಿ ಪ್ರಪಂಚವನ್ನೇ ಬದಲಿಸಬಹುದು. ಎಷ್ಟೊತ್ತು ಕೆಲಸ ಮಾಡಿದ್ವಿ ಅನ್ನೋದು ಮುಖ್ಯವಲ್ಲ.. ಎಷ್ಟು ಗುಣಮಟ್ಟದ ಕೆಲಸ ಮಾಡಿದ್ವಿ ಅನ್ನೋದು ಮುಖ್ಯ ಎಂದು ಹೇಳಿದ್ದಾರೆ.

ವಿಡಿಯೋ ಇಲ್ಲಿದೆ ನೋಡಿ:

ಅಂತೆಯೇ ನೀವು ಸೋಶಿಯಲ್‌ ಮೀಡಿಯಾದಲ್ಲಿ ದಿನಕ್ಕೆ ಎಷ್ಟು ಗಂಟೆಯನ್ನು ಕಳೆಯುತ್ತೀರಿ ಎನ್ನುವ ಪ್ರಶ್ನೆಗೆ, ‘ನಾನು ಒಮ್ಮೊಮ್ಮೆ ನನ್ನಲ್ಲೇ ಈ ಪ್ರಶ್ನೆ ಕೇಳುತ್ತಿರುತ್ತೇನೆ. ನನ್ನ ಟ್ವೀಟ್‌ಅನ್ನು ನೋಡಿದವರಿಗೆ ಗೊತ್ತಿರುತ್ತದೆ. ನನಗೆ ಕಚೇರಿಯಲ್ಲಿ ಅದ್ಭುತವಾದ ಟೀಮ್‌ ಇದೆ. ಅವರು ನನ್ನ ತಲೆಯಲ್ಲೇ ಉಳಿದುಕೊಂಡು ಬಿಟ್ಟಿದ್ದಾರೆ. ನೀವ್ಯಾಕೆ ಟ್ವಿಟರ್‌ನಲ್ಲಿದ್ದೀರಿ, ಕೆಲಸ ಮಾಡಿ ಅನ್ನೋ ಕಾಮೆಂಟ್‌ಗಳು ಬರುತ್ತಲೇ ಇರುತ್ತದೆ. ಒಂದು ವಿಚಾರ ಇಲ್ಲಿ ತಿಳಿಸುತ್ತೇನೆ. ನನಗೆ ಏಕಾಂಗಿತನ ಕಾಡುತ್ತಿದ್ದೆ ಅನ್ನೋ ಕಾರಣಕ್ಕಾಗಿ ನಾನು ಎಕ್ಸ್‌ನಲ್ಲಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಬೇರೆ ಕೆಲಸದ ಆಫರ್‌ ಇಲ್ಲದೇನೇ ಇನ್ಫೋಸಿಸ್‌ ಉದ್ಯೋಗಕ್ಕೆ ರಾಜೀನಾಮೆ ನೀಡಿದ ಟೆಕ್ಕಿ, ಪೋಸ್ಟ್ ವೈರಲ್

ನನಗೆ ಸುಂದರವಾದ ಹೆಂಡತಿಯಿದ್ದಾಳೆ. ಆಕೆಯನ್ನು ದಿಟ್ಟಿಸಿ ನೋಡೋದು ನನಗೆ ಖುಷಿ ಕೊಡುತ್ತದೆ. ಆಕೆಯೊಂದಿಗೆ ಹೆಚ್ಚಿನ ಸಮಯ ಕಳೆಯುತ್ತೇನೆ. ನಾನು ಅಲ್ಲಿ ಸ್ನೇಹಿತರಲ್ಲಿ ಮಾಡಿಕೊಳ್ಳುವ ಸಲುವಾಗಿ ಇಲ್ಲ. ಆದರೆ, ಎಕ್ಸ್‌ ಒಂದು ಅಮೇಜಿಂಗ್‌ ಬ್ಯುಸಿನೆಸ್‌ ಟೂಲ್‌ ಅನ್ನೋದನ್ನ ಅರ್ಥ ಮಾಡಿಕೊಳ್ಳಬೇಕು. ಅದೊಂದೇ ಫ್ಲಾಟ್‌ಫಾರ್ಮ್‌ನಿಂದ ನನಗೆ 11 ಮಿಲಿಯನ್‌ ಜನರಿಂದ ಫೀಡ್‌ಬ್ಯಾಕ್‌ ಬರುತ್ತದೆ’ ಎಂದಿದ್ದಾರೆ ಆನಂದ್‌ ಮಹೀಂದ್ರಾ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Champions Trophy 2025: ಚಾಂಪಿಯನ್ಸ್ ಟ್ರೋಫಿಗೆ ನ್ಯೂಝಿಲೆಂಡ್ ತಂಡ ಪ್ರಕಟ
Champions Trophy 2025: ಚಾಂಪಿಯನ್ಸ್ ಟ್ರೋಫಿಗೆ ನ್ಯೂಝಿಲೆಂಡ್ ತಂಡ ಪ್ರಕಟ
ಮನೆ ಮಂದಿಗೆ ಶಾಕ್ ಕೊಟ್ಟ ಕಿಚ್ಚ ಸುದೀಪ್, ಬಚ್ಚಿಟ್ಟುಕೊಂಡ ಹನುಮಂತ
ಮನೆ ಮಂದಿಗೆ ಶಾಕ್ ಕೊಟ್ಟ ಕಿಚ್ಚ ಸುದೀಪ್, ಬಚ್ಚಿಟ್ಟುಕೊಂಡ ಹನುಮಂತ
ಜನವರಿ 13 ರಿಂದ 19ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 13 ರಿಂದ 19ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ದೃಷ್ಟಿ ಗಣಪತಿ ಕುರಿತಾಗಿ ಶಾಸ್ತ್ರಗಳಲ್ಲಿ ಉಲ್ಲೇಖವಿದೆಯೇ? ಇಲ್ಲಿದೆ ಉತ್ತರ
ದೃಷ್ಟಿ ಗಣಪತಿ ಕುರಿತಾಗಿ ಶಾಸ್ತ್ರಗಳಲ್ಲಿ ಉಲ್ಲೇಖವಿದೆಯೇ? ಇಲ್ಲಿದೆ ಉತ್ತರ
Daily Horoscope: ರವಿವಾರದಂದು ಗ್ರಹಗಳ ಸಂಚಾರ, ರಾಶಿ ಭವಿಷ್ಯ ತಿಳಿಯಿರಿ
Daily Horoscope: ರವಿವಾರದಂದು ಗ್ರಹಗಳ ಸಂಚಾರ, ರಾಶಿ ಭವಿಷ್ಯ ತಿಳಿಯಿರಿ
ಕನ್ನೌಜ್​ನಲ್ಲಿ ರೈಲ್ವೆ ನಿಲ್ದಾಣದ ಕಟ್ಟಡ ಕುಸಿದು 20 ಜನರಿಗೆ ಗಾಯ
ಕನ್ನೌಜ್​ನಲ್ಲಿ ರೈಲ್ವೆ ನಿಲ್ದಾಣದ ಕಟ್ಟಡ ಕುಸಿದು 20 ಜನರಿಗೆ ಗಾಯ
ಸಿಎಂ ಯಾರೇ ಆದರೂ ಅನುದಾನಕ್ಕಾಗಿ ಹೋರಾಟ ನಿಲ್ಲಲ್ಲ: ಸುನೀಲ ಕುಮಾರ್
ಸಿಎಂ ಯಾರೇ ಆದರೂ ಅನುದಾನಕ್ಕಾಗಿ ಹೋರಾಟ ನಿಲ್ಲಲ್ಲ: ಸುನೀಲ ಕುಮಾರ್
ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌