Viral: ಮಾಲ್‌ನಲ್ಲಿ ಕೋತಿಯ ಕಾಟಕ್ಕೆ ಹೈರಾಣಾದ ಯುವತಿ; ವಿಡಿಯೋ ವೈರಲ್‌

ಚೇಷ್ಟೆ ಮಾಡುವುದರಲ್ಲಿ ಕೋತಿಗಳು ಎತ್ತಿದ ಕೈ. ಅದರಲ್ಲೂ ಅವುಗಳಲಿ ಕೋಪ ಬಂದ್ರೆ ಮನುಷ್ಯರ ಮೇಲೆಯೇ ಎಗರಿ ದಾಳಿ ನಡೆಸುತ್ತವೆ. ಇಲ್ಲೊಂದು ಅಂತಹದ್ದೇ ಘಟನೆ ನಡೆದಿದ್ದು, ಮಾಲ್‌ಗೆ ನುಗ್ಗಿದಂತಹ ಕೋತಿಯೊಂದು ಯುವತಿಯೊಬ್ಬಳ ಮೇಲೆ ಅಟ್ಯಾಕ್‌ ಮಾಡಿದೆ. ಅಲ್ಲಿ ಎಷ್ಟೇ ಜನ ಇದ್ರೂ ಆ ಕೋತಿ ಮಾತ್ರ ಆಕೆಯ ಮೇಲೆಯೇ ಅಟ್ಯಾಕ್‌ ಮಾಡಿದ್ದು, ಕಪಿರಾಯನ ಚೇಷ್ಟೆಗೆ ಯುವತಿ ಹೈರಾಣಾಗಿದ್ದಾಳೆ. ಈ ಕುರಿತ ವಿಡಿಯೋವೊಂದು ಇದೀಗ ವೈರಲ್‌ ಆಗುತ್ತಿದೆ.

Viral: ಮಾಲ್‌ನಲ್ಲಿ ಕೋತಿಯ ಕಾಟಕ್ಕೆ ಹೈರಾಣಾದ ಯುವತಿ; ವಿಡಿಯೋ ವೈರಲ್‌
Monkey Enters Shopping Mall, Attacks Woman
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷತಾ ವರ್ಕಾಡಿ

Updated on: Jan 12, 2025 | 9:50 AM

ಕೋತಿಗಳು ಮಾಡುವಂತಹ ಚೇಷ್ಟೆಗಳು ತುಂಬಾನೇ ತಮಾಷೆಯಾಗಿ ಕಾಣುತ್ತವೆ. ಅವುಗಳು ಮನುಷ್ಯರ ಕೈಯಲ್ಲಿದ್ದ ತಿಂಡಿ ತಿನಿಸುಗಳನ್ನು ಕಸಿದುಕೊಳ್ಳುವ ಮೂಲಕ, ಮೊಬೈಲ್‌ ಕಸಿದುಕೊಳ್ಳುವ ಮೂಲಕ ಹಲವಾರು ಚೇಷ್ಟೆಗಳನ್ನು ಮಾಡುತ್ತಿರುತ್ತವೆ. ಇಂತಹ ಸಾಕಷ್ಟು ವಿಡಿಯೋಗಳು ಕೂಡಾ ಸೋಷಿಯಲ್‌ ಮೀಡಿಯಾದಲ್ಲಿ ಆಗಾಗ್ಗೆ ಕಾಣಸಿಗುತ್ತಿರುತ್ತವೆ. ಇನ್ನೂ ಕೆಲವೊಮ್ಮೆ ಕೋತಿಗಳು ಕೋಪದಲ್ಲಿ ಮನುಷ್ಯರ ಮೇಲೆ ಅಟ್ಯಾಕ್‌ ಮಾಡುವುದು ಕೂಡಾ ಉಂಟು. ಅದೇ ರೀತಿ ಇಲ್ಲೊಂದು ಕೋತಿ ಕೂಡಾ ಯುವತಿಯೊಬ್ಬಳ ಮೇಲೆ ಅಟ್ಯಾಕ್‌ ಮಾಡಿ ಆಕೆಯ ಶೂ ಕಸಿದುಕೊಂಡಿದೆ. ಹೌದು ಮಾಲ್‌ಗೆ ನುಗ್ಗಿದಂತಹ ಕೋತಿ ಯುವತಿಯ ಮೇಲೆ ಅಟ್ಯಾಕ್‌ ಮಾಡಿದ್ದು, ಕಪಿರಾಯನ ಚೇಷ್ಟೆಗೆ ಆಕೆ ಹೈರಾಣಾಗಿದ್ದಾಳೆ. ಈ ಕುರಿತ ವಿಡಿಯೋವೊಂದು ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

ಉತ್ತರ ಪ್ರದೇಶದ ಝಾನ್ಸಿಯ ಮಾಲ್‌ ಒಂದರಲ್ಲಿ ಈ ಘಟನೆ ನಡೆದಿದ್ದು, ಮಾಲ್‌ಗೆ ನುಗ್ಗಿದಂತಹ ಕೋತಿಯೊಂದು ಅಲ್ಲಿದ್ದ ಯುವತಿಯ ಮೇಲೆ ಅಟ್ಯಾಕ್‌ ಮಾಡಿ ಆಕೆಯ ಶೂ ಕಸಿದುಕೊಂಡಿದೆ. ಹೌದು ಅಲ್ಲಿ ಎಷ್ಟೇ ಜನ ಇದ್ರೂ ಅವರ್ಯಾರಿಗೂ ತೊಂದರೆ ಕೊಡದೆ ಕೋತಿ ಪದೇ ಪದೇ ಆ ಯುವತಿಯ ಮೇಲೆಯೇ ದಾಳಿ ಮಾಡಿ ಆಕೆಯ ಕೂದಲನ್ನು ಎಳೆದು ಆಕೆಗೆ ತೊಂದರೆ ಕೊಟ್ಟಿದೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ಪುಟಾಣಿ ಮಕ್ಕಳಂತೆ ಮುದ್ದು ಕರುವಿಗೂ ನಡೆಯಿತು ಅದ್ದೂರಿ ತೊಟ್ಟಿಲು ಶಾಸ್ತ್ರ; ವಿಡಿಯೋ ವೈರಲ್‌

News1Indiatweet ಹೆಸರಿನ ಎಕ್ಸ್‌ ಖಾತೆಯಲ್ಲಿ ಈ ಕುರಿತ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಕೋತಿಯೊಂದು ಯುವತಿಯ ಮೇಲೆ ಅಟ್ಯಾಕ್‌ ಮಾಡಿ ಆಕೆಯ ಶೂ ಕಸಿದುಕೊಳ್ಳುತ್ತಿರುವ ದೃಶ್ಯವನ್ನು ಕಾಣಬಹುದು. ಅಲ್ಲಿದ್ದ ಜನರೆಲ್ಲಾ ಆಕೆಯ ಸಹಾಯಕ್ಕೆ ಬಂದರೂ ಆ ಯುವತಿಯ ಹಿಂದೆಯೇ ಪದೇ ಪದೇ ಓಡಿ ಹೋಗಿ ಕೋತಿ ಆಕೆಯ ಮೇಲೆ ದಾಳಿ ನಡೆಸಿದೆ. ಈ ಮಂಗನ ಕಾಟಕ್ಕೆ ಯುವತಿ ಫುಲ್‌ ಸುಸ್ತಾಗಿದ್ದಾಳೆ. ಕಪಿರಾಯನ ಚೇಷ್ಟೆಯ ದೃಶ್ಯವನ್ನು ಕಂಡು ನೆಟ್ಟಿಗರು ಶಾಕ್‌ ಆಗಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜನವರಿ 13 ರಿಂದ 19ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 13 ರಿಂದ 19ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ದೃಷ್ಟಿ ಗಣಪತಿ ಕುರಿತಾಗಿ ಶಾಸ್ತ್ರಗಳಲ್ಲಿ ಉಲ್ಲೇಖವಿದೆಯೇ? ಇಲ್ಲಿದೆ ಉತ್ತರ
ದೃಷ್ಟಿ ಗಣಪತಿ ಕುರಿತಾಗಿ ಶಾಸ್ತ್ರಗಳಲ್ಲಿ ಉಲ್ಲೇಖವಿದೆಯೇ? ಇಲ್ಲಿದೆ ಉತ್ತರ
Daily Horoscope: ರವಿವಾರದಂದು ಗ್ರಹಗಳ ಸಂಚಾರ, ರಾಶಿ ಭವಿಷ್ಯ ತಿಳಿಯಿರಿ
Daily Horoscope: ರವಿವಾರದಂದು ಗ್ರಹಗಳ ಸಂಚಾರ, ರಾಶಿ ಭವಿಷ್ಯ ತಿಳಿಯಿರಿ
ಕನ್ನೌಜ್​ನಲ್ಲಿ ರೈಲ್ವೆ ನಿಲ್ದಾಣದ ಕಟ್ಟಡ ಕುಸಿದು 20 ಜನರಿಗೆ ಗಾಯ
ಕನ್ನೌಜ್​ನಲ್ಲಿ ರೈಲ್ವೆ ನಿಲ್ದಾಣದ ಕಟ್ಟಡ ಕುಸಿದು 20 ಜನರಿಗೆ ಗಾಯ
ಸಿಎಂ ಯಾರೇ ಆದರೂ ಅನುದಾನಕ್ಕಾಗಿ ಹೋರಾಟ ನಿಲ್ಲಲ್ಲ: ಸುನೀಲ ಕುಮಾರ್
ಸಿಎಂ ಯಾರೇ ಆದರೂ ಅನುದಾನಕ್ಕಾಗಿ ಹೋರಾಟ ನಿಲ್ಲಲ್ಲ: ಸುನೀಲ ಕುಮಾರ್
ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್
ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್