Viral: ಪುಟಾಣಿ ಮಕ್ಕಳಂತೆ ಮುದ್ದು ಕರುವಿಗೂ ನಡೆಯಿತು ಅದ್ದೂರಿ ತೊಟ್ಟಿಲು ಶಾಸ್ತ್ರ; ವಿಡಿಯೋ ವೈರಲ್‌

ಮನುಷ್ಯರಂತೆ ಪ್ರಾಣಿಗಳಿಗೆ ಸೀಮಂತಶಾಸ್ತ್ರ ಮಾಡಿಸಿದಂತಹ ಸುದ್ದಿಗಳ ಬಗ್ಗೆ ಕೇಳಿರುತ್ತೀರಿ ಅಲ್ವಾ. ಆದ್ರೆ ಮಕ್ಕಳಂತೆ ಪ್ರಾಣಿಗಳಿಗೆ ತೊಟ್ಟಿಲು ಶಾಸ್ತ್ರ ಮಾಡಿಸುವುದನ್ನು ನೀವು ಎಂದಾದ್ರೂ ನೋಡಿದ್ದೀರಾ? ಇಲ್ಲೊಂದು ಕಡೆ ಮುದ್ದು ಕರುವಿಗೆ ಪುಟಾಣಿ ಮಗುವಿಗೆ ಮಾಡಿಸುವಂತೆ ಅದ್ದೂರಿ ತೊಟ್ಟಿಲು ಶಾಸ್ತ್ರವನ್ನು ಮಾಡಿದ್ದು, ಈ ಕುರಿತ ವಿಡಿಯೋವೊಂದು ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

Viral: ಪುಟಾಣಿ ಮಕ್ಕಳಂತೆ ಮುದ್ದು ಕರುವಿಗೂ ನಡೆಯಿತು ಅದ್ದೂರಿ ತೊಟ್ಟಿಲು ಶಾಸ್ತ್ರ; ವಿಡಿಯೋ ವೈರಲ್‌
Grand Cradle Ceremony For The Calf Cutest Video Goes Viral
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷತಾ ವರ್ಕಾಡಿ

Updated on:Jan 11, 2025 | 12:00 PM

ಸಾಮಾನ್ಯವಾಗಿ ಹುಟ್ಟಿದ ಮಕ್ಕಳಿಗೆ ತೊಟ್ಟಿಲು ಶಾಸ್ತ್ರ ಮಾಡುವಂತಹ ಸಂಪ್ರದಾಯ ನಮ್ಮಲ್ಲಿದೆ. ಆದ್ರೆ ನೀವು ಎಂದಾದರೂ ಕರುವಿಗೆ ತೊಟ್ಟಿಲು ಶಾಸ್ತ್ರವನ್ನು ಮಾಡುವುದನ್ನು ನೋಡಿದ್ದೀರಾ? ಈ ಹಿಂದೆ ಸಾಕು ಪ್ರಾಣಿಗಳಿಗೆ ಮನೆಯವರು ಸೀಮಂತ ಶಾಸ್ತ್ರ ಮಾಡಿಸಿದಂತಹ ಸುದ್ದಿಗಳನ್ನು ಕೇಳಿರುತ್ತೀರಿ ಅಲ್ವಾ. ಅದೇ ರೀತಿ ಇಲ್ಲೊಂದು ಕಡೆ ಮುದ್ದು ಕರುವಿಗೆ ತೊಟ್ಟಿಲು ಶಾಸ್ತ್ರವನ್ನು ನೆರವೇರಿಸಲಾಗಿದೆ. ಹೌದು ಪುಟಾಣಿ ಮಗುವಿಗೆ ಮಾಡಿಸುವಂತೆ ಕರುವಿಗೆ ಅದ್ದೂರಿ ತೊಟ್ಟಿಲುಶಾಸ್ತ್ರ ಮಾಡಿಸಿದ್ದಾರೆ. ಈ ಕುರಿತ ಮುದ್ದಾದ ವಿಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದ್ದು, ಈ ದೃಶ್ಯ ಇದೀಗ ನೆಟ್ಟಿಗರ ಮನ ಗೆದ್ದಿದೆ.

ಉಡುಪಿ ಜಿಲ್ಲೆಯ ಕಾರ್ಕಳದ ಬಂಡಿಮಠದ ಅನಂತಕೃಷ್ಣ ಗೋಶಾಲೆಯಲ್ಲಿ ಕರುವಿಗೆ ಅದ್ದೂರಿ ತೊಟ್ಟಿಲು ಶಾಸ್ತ್ರವನ್ನು ನೆರವೇರಿಸಲಾಗಿದೆ. ಈ ಕುರಿತ ವಿಡಿಯೋವನ್ನು ಆದರ್ಶ್‌ ಹೆಗ್ಡೆ (adarshahgd) ಎಂಬವರು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಶಾಸ್ತ್ರೋಕವಾಗಿ ನಾಮಕರಣ ಶಾಸ್ತ್ರ ನೆರವೇರಿಸುತ್ತಿರುವಂತಹ ದೃಶ್ಯವನ್ನು ಕಾಣಬಹುದು. ಮಂತ್ರಗಳನ್ನು ಪಠಿಸುತ್ತಾ ಕರುವನ್ನು ಮಗುವಿನಂತೆ ತೊಟ್ಟಿಲಲ್ಲಿ ಕೂರಿಸಿ ತೊಟ್ಟಿಲು ಶಾಸ್ತ್ರ ಮಾಡಿಸಿದ್ದಾರೆ.

ವೈರಲ್​ ವಿಡಿಯೋ ಇಲ್ಲಿದೆ ನೋಡಿ:

ಮತ್ತಷ್ಟು ಓದಿ:ಮನುಷ್ಯರನ್ನು ನೀರಿಗಿಳಿಯುವಂತೆ ಮಾಡಲು ಸಾವಿನ ನಾಟಕವಾಡುವ ಖತರ್ನಾಕ್‌ ಮೊಸಳೆಗಳು; ವಿಡಿಯೋ ವೈರಲ್‌

ಜನವರಿ 9 ರಂದು ಹಂಚಿಕೊಳ್ಳಲಾದ ಈ ವಿಡಿಯೋ 95 ಸಾವಿರ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼತುಂಬಾ ಅದ್ಭುತವಾಗಿದೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಗೋವುಗಳನ್ನು ಕುಟುಂಬ ಸದಸ್ಯರಂತೆ ಕಾಣುವ ಸಂಸ್ಕೃತಿ ನಮ್ಮ ದೇಶದಲ್ಲಿ ಮಾತ್ರ ಕಾಣಲು ಸಾದ್ಯʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಇನ್ನೂ ಅನೇಕರು ಈ ದೃಶ್ಯಕ್ಕೆ ಮೆಚ್ಚುಗೆಯನ್ನು ಸೂಚಿಸಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:59 am, Sat, 11 January 25

ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ