ಕೊರೊನಾ, ಬ್ಲಾಕ್ ಫಂಗಸ್ ಮುನ್ನೆಚ್ಚರಿಕಾ ಕ್ರಮಗಳ ಪರಿಶೀಲನೆಗಾಗಿ ಉತ್ತರ ಕರ್ನಾಟಕ ಪ್ರವಾಸ ಕೈಗೊಂಡ ಸಚಿವ ಸುಧಾಕರ್
ಕೊರೊನಾ ಎರಡನೇ ಅಲೆಯಲ್ಲಿ ಗ್ರಾಮೀಣ ಭಾಗದಲ್ಲಿ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ವೈದ್ಯಕೀಯ ವ್ಯವಸ್ಥೆ ಯಾವರೀತಿ ನಡೆಯುತ್ತಿದೆ ಹಾಗೂ ಏನಾದರೂ ಸಮಸ್ಯೆ ಇದ್ದರೇ ಸರಿಪಡಿಸೋಕೆ ಕೆಲ ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ.
ಬೆಂಗಳೂರು: ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಮೂರು ದಿನಗಳ ಕಾಲ ಉತ್ತರ ಕರ್ನಾಟಕ ಪ್ರವಾಸ ಕೈಗೊಳ್ಳಲಿದ್ದಾರೆ. ಕೊವಿಡ್ ನಿಯಂತ್ರಣದ ಮುನ್ನೆಚ್ಚರಿಕಾ ಕ್ರಮಗಳ ಪರಿಶೀಲನೆಗೆ ತೆರಳಿದ ಆರೋಗ್ಯ ಸಚಿವ ತುಮಕೂರು, ಚಿತ್ರದುರ್ಗ, ದಾವಣಗೆರೆ, ಹಾವೇರಿ, ಹುಬ್ಬಳ್ಳಿ, ಗದಗ ಪ್ರವಾಸ ಕೈಗೊಂಡು ಪರಿಶೀಲನೆ ನಡೆಸಲಿದ್ದಾರೆ.
ಕೊರೊನಾ ಎರಡನೇ ಅಲೆಯಲ್ಲಿ ಗ್ರಾಮೀಣ ಭಾಗದಲ್ಲಿ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ವೈದ್ಯಕೀಯ ವ್ಯವಸ್ಥೆ ಯಾವರೀತಿ ನಡೆಯುತ್ತಿದೆ ಹಾಗೂ ಏನಾದರೂ ಸಮಸ್ಯೆ ಇದ್ದರೇ ಸರಿಪಡಿಸೋಕೆ ಕೆಲ ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ.
ಹಾಗೂ ಸಚಿವ ಸುಧಾಕರ್ ಆರೋಗ್ಯಾಧಿಕಾರಿಗಳು ಹಾಗೂ ಜಿಲ್ಲಾಡಳಿತದ ನಡುವೆ ಸಭೆ ನಡೆಸಲಿದ್ದಾರೆ. ಪ್ರಾಥಮಿಕ ಹಾಗೂ ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಕೊವಿಡ್ ಜೊತೆಗೆ ಬ್ಲಾಕ್ ಫಂಗಸ್ ಬಗ್ಗೆಯೂ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಡಾ.ಕೆ ಸುಧಾಕರ್ ಪರಿಶೀಲನೆ ನಡೆಸಲಿದ್ದಾರೆ.
ಈ ಬಗ್ಗೆ ಮಾತನಾಡಿದ ಆರೋಗ್ಯ ಸಚಿವ ಸುಧಾಕರ್ ಇಂದು ತುಮಕೂರು ಭೇಟಿ ಕೊಡ್ತಾಯಿದ್ದೀನಿ. ಅಲ್ಲಿ ಹೆಚ್ಚು ಕೇಸ್ ಪತ್ತೆಯಾಗಿವೆ. ಜಿಲ್ಲಾ ಉಸ್ತುವಾರಿ ಸಚಿವರ ಜೊತೆಗೆ ಮಾತನಾಡಿ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದಿರುವೆ. ಏನು ಸಮಸ್ಯೆ ಇದ್ರೂ ಬಗೆಹರಿಸಲಾಗುವುದು. ಈಗಾಗಲೇ ಹೊಸದಾಗಿ 25 ಆಕ್ಸಿಜನ್ ಕಾನ್ಸಂಟ್ರೇಟರ್ ಕೊಡಲಾಗಿದೆ. ತುಮಕೂರಿನ ಅಧಿಕಾರಿಗಳ ಜೊತೆಗೆ ಸಭೆ ಮಾಡುತ್ತೇವೆ. ಇಂದೇ ಚಿತ್ರದುರ್ಗಕ್ಕೂ ಹೋಗಿ ನಾಳೆ ದಾವಣಗೆರೆ ಹಾಗೂ ಹಾವೇರಿ ಜಿಲ್ಲೆ ಭೇಟಿ ನೀಡುತ್ತೇವೆ. ಶನಿವಾರ ಹುಬ್ಬಳ್ಳಿ ಹಾಗೂ ಗದಗ ಜಿಲ್ಲೆ ಭೇಟಿ ಮಾಡುತ್ತೇನೆ. ಆರೋಗ್ಯ ಸಿಬ್ಬಂದಿಗೆ ಧೈರ್ಯ ತುಂಬುವ ಸಲುವಾಗಿ ಜೊತೆಗೆ ಪರಿಶೀಲನಾ ಸಭೆ ಸಹಾ ಮಾಡಬೇಕಿದೆ. ಒಟ್ಟು ಆರು ಜಿಲ್ಲೆಗಳಲ್ಲಿ ಭೇಟಿ ನೀಡಿ ಶನಿವಾರ ಬೆಂಗಳೂರು ವಾಪಸ್ ಬರುವೆ ಎಂದು ತಿಳಿಸಿದರು.
ಇದನ್ನೂ ಓದಿ: Karnataka Covid Update: ಕರ್ನಾಟಕದಲ್ಲಿ ಇಂದು ಕೊವಿಡ್ನಿಂದ 58,395 ಜನ ಗುಣಮುಖ, 30,309 ಹೊಸ ಪ್ರಕರಣ; ಸಚಿವ ಡಾ.ಸುಧಾಕರ್
Published On - 12:31 pm, Thu, 20 May 21