ಯಾದಗಿರಿ: ಚಿಕಿತ್ಸೆ ಕೊಡಿಸಲು ಪುತ್ರಿಯನ್ನು ಹೆಗಲ ಮೇಲೆ 8 ಕಿಲೋಮೀಟರ್ ಹೊತ್ತುಕೊಂಡು ಬಂದ ತಂದೆ
ಬಸ್ಗಳಿಲ್ಲದೆ ಜನ ಸಾಮಾನ್ಯರು ಪಡುವ ಪರದಾಟ ಹೇಳತೀರದಂತಾಗಿದೆ. ಆದರೂ ಆಸ್ಪತ್ರೆಗೆ ಹೋಗಲೇ ಬೇಕಾದ್ದರಿಂದ ಕಿಲೋಮೀಟರ್ ಗಟ್ಟಲೆ ನಡೆದುಕೊಂಡು ಹೋಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗೆ ಜಿಲ್ಲೆಯಲ್ಲೊಬ್ಬರು ಚಿಕಿತ್ಸೆ ಕೊಡಿಸಲು ತನ್ನ ಮಗಳನ್ನು ಹೆಗಲ ಮೇಲೆ ಹೊತ್ತಿಕೊಂಡು ಸುಮಾರು 8 ಕಿಲೋಮೀಟರ್ ನಡೆದು ಆಸ್ಪತ್ರೆಗೆ ಬಂದಿದ್ದಾರೆ.
ಯಾದಗಿರಿ: ಮಹಾಮಾರಿ ಕೊರೊನಾ ಎರಡನೇ ಅಲೆಯ ಆರ್ಭಟ ರಾಜ್ಯದಲ್ಲಿ ಜೋರಾಗಿದೆ. ಹೀಗಾಗಿ ಸೋಂಕನ್ನು ನಿಯಂತ್ರಿಸಲು ಸರ್ಕಾರ ಲಾಕ್ಡೌನ್ ಕೂಡಾ ಜಾರಿಗೊಳಿಸಿದೆ. ಇನ್ನು ಲಾಕ್ಡೌನ್ ಮುಂದೂಡುವ ಸಾಧ್ಯತೆಯೂ ಇದೆ. ಅಗತ್ಯ ವಸ್ತುಗಳನ್ನು ಖರೀದಿಸಲು ಬೆಳಿಗ್ಗೆ 6 ಗಂಟೆಯಿಂದ ಬೆಳಿಗ್ಗೆ 10 ಗಂಟೆಯವರೆಗೆ ಅವಕಾಶ ನೀಡಿದೆ. ಆದರೆ ಯಾವುದೇ ಬಸ್ಗಳು, ಇತರೆ ವಾಹನಗಳು ಓಡಾಡದಂತೆ ಸರ್ಕಾರ ಕಠಿಣ ನಿಯಮಗಳನ್ನು ವಿಧಿಸಿದೆ. ಹೀಗಾಗಿ ಜನ ಸಾಮಾನ್ಯರಿಗೆ ಆಸ್ಪತ್ರೆಗೂ ಹೋಗಲು ಪರದಾಡುತ್ತಿದ್ದಾರೆ.
ಆಸ್ಪತ್ರೆಗೆ ಹೋಗಲು ಬಸ್ಗಳಿಲ್ಲದೆ ಜನ ಸಾಮಾನ್ಯರು ಪಡುವ ಪರದಾಟ ಹೇಳತೀರದಂತಾಗಿದೆ. ಆದರೂ ಆಸ್ಪತ್ರೆಗೆ ಹೋಗಲೇ ಬೇಕಾದ್ದರಿಂದ ಕಿಲೋಮೀಟರ್ ಗಟ್ಟಲೆ ನಡೆದುಕೊಂಡು ಹೋಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗೆ ಜಿಲ್ಲೆಯಲ್ಲೊಬ್ಬರು ಚಿಕಿತ್ಸೆ ಕೊಡಿಸಲು ತನ್ನ ಮಗಳನ್ನು ಹೆಗಲ ಮೇಲೆ ಹೊತ್ತಿಕೊಂಡು ಸುಮಾರು 8 ಕಿಲೋಮೀಟರ್ ನಡೆದು ಆಸ್ಪತ್ರೆಗೆ ಬಂದಿದ್ದಾರೆ. ಪುತ್ರಿ ಅನುಶಾ ಜ್ವರದಿಂದ ಬಳಲುತ್ತಿದ್ದರು. ಹೀಗಾಗಿ ಚಿಕಿತ್ಸೆ ಕೊಡಿಸಲು ತಂದೆ ಮರೇಪ್ಪ ನಡೆದುಕೊಂಡು ಮಗಳನ್ನು ಹೆಗಲ ಮೇಲೆ ಹೊತ್ತುಕೊಂಡು ಯಾದಗಿರಿಗೆ ಬಂದಿದ್ದಾರೆ.
ತಂದೆ ಮರೇಪ್ಪ ಯಾದಗಿರಿ ತಾಲೂಕಿನ ಪಗಲಾಪುರ ಗ್ರಾಮದಿಂದ ಯಾದಗಿರಿ ಜಿಲ್ಲಾ ಕೇಂದ್ರಕ್ಕೆ ಮಗಳನ್ನು ಕರೆದುಕೊಂಡು ಬಂದಿದ್ದಾರೆ. ಯಾದಗಿರಿಯಲ್ಲಿ ನಿನ್ನೆಯಿಂದ (ಮೇ 19) ಮೂರು ದಿನಗಳ ಕಾಲ ಕಠಿಣ ಲಾಕ್ಡೌನ್ ಹಿನ್ನೆಲೆ ಓಡಾಡುವ ವಾಹನಗಳನ್ನು ಪೊಲೀಸರು ಸೀಜ್ ಮಾಡುತ್ತಾರೆ. ಗಾಡಿಯನ್ನು ಸೀಜ್ ಮಾಡುತ್ತಾರೆಂದು ತಿಳಿದು ಪೊಲೀಸರಿಗೆ ಹೆದರಿ ಬೈಕ್ ಬಿಟ್ಟು ಸುಮಾರು 8 ಕಿಲೋಮೀಟರ್ ಮಗಳನ್ನು ಹೊತ್ತಿಕೊಂಡು ಬಂದಿದ್ದಾರೆ.
ಇದನ್ನೂ ಓದಿ
ಜಿಂದಾಲ್ ಕಂಪನಿ ಸಹಯೋಗದಿಂದ ರಾಜ್ಯದಲ್ಲಿ ಮೊದಲ ಬಾರಿಗೆ 1 ಸಾವಿರ ಆಕ್ಸಿಜನ್ ಬೆಡ್ಗಳ ಆಸ್ಪತ್ರೆ ಬಳ್ಳಾರಿಯಲ್ಲಿ ಆರಂಭ
ಎರಡು ವರ್ಷದ ನನ್ನ ಮಗನನ್ನು ನನ್ನೊಟ್ಟಿಗೆ ಕರೆದೊಯ್ಯಲು ಅನುಮತಿ ಕೊಡಿ: ಸಾನಿಯಾ ಮಿರ್ಜಾ
(A Yadgir father carrying his daughter on shoulder for 8 kilometer for treatment)