ಎರಡು ವರ್ಷದ ನನ್ನ ಮಗನನ್ನು ನನ್ನೊಟ್ಟಿಗೆ ಕರೆದೊಯ್ಯಲು ಅನುಮತಿ ಕೊಡಿ: ಸಾನಿಯಾ ಮಿರ್ಜಾ
ತಾನು ಒಂದು ತಿಂಗಳು ವಿದೇಶದಲ್ಲಿರಬೇಕಾಗಿರುವುದರಿಂದ ಎರಡು ವರ್ಷದ ಮಗುವನ್ನು ಬಿಟ್ಟಿರಲು ಸಾಧ್ಯವಿಲ್ಲ ಎಂದು ಸಾನಿಯಾ ಹೇಳಿದ್ದಾರೆ.
ಜೂನ್ 6 ರಂದು ನಾಟಿಂಗ್ಹ್ಯಾಮ್ ಓಪನ್ ಪಂದ್ಯಾವಳಿಯಲ್ಲಿ ಸಾನಿಯಾ ಭಾಗವಹಿಸಲಿದ್ದು, ಜೂನ್ 14 ರಂದು ಬರ್ಮಿಂಗ್ಹ್ಯಾಮ್ ಓಪನ್, ಜೂನ್ 20 ರಂದು ಈಸ್ಟ್ಬೋರ್ನ್ ಓಪನ್ ಮತ್ತು ಜೂನ್ 28 ರಂದು ವಿಂಬಲ್ಡನ್ ಗ್ರ್ಯಾಂಡ್ ಸ್ಲ್ಯಾಮ್ನಲ್ಲಿ ಭಾಗವಹಿಸಲಿದ್ದಾರೆ. ನಾಟಿಂಗ್ಹ್ಯಾಮ್ಗೆ ಪ್ರಯಾಣಿಸಲು ಸಾನಿಯಾ ಅವರಿಗೆ ವೀಸಾ ನೀಡಲಾಗಿದ್ದರೂ, ಭಾರತೀಯ ಪ್ರಯಾಣಿಕರ ಮೇಲಿನ ಪ್ರಯಾಣದ ನಿರ್ಬಂಧದಿಂದಾಗಿ ಅವರ ಮಗ ಮತ್ತು ಅವರ ಉಸ್ತುವಾರಿ ಯುಕೆ ವೀಸಾಗಳನ್ನು ಪಡೆಯಲು ಸಾಧ್ಯವಾಗಿಲ್ಲ.
ಕ್ರೀಡಾ ಸಚಿವಾಲಯದ ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಸ್ಕೀಮ್ (ಟಾಪ್ಸ್) ನ ಭಾಗವಾಗಿರುವ ಸಾನಿಯಾ, ತನ್ನ ಮಗ ಮತ್ತು ಅವರ ಉಸ್ತುವಾರಿ ವೀಸಾವನ್ನು ಪಡೆದುಕೊಳ್ಳುವ ಸಲುವಾಗಿ ಸಚಿವಾಲಯದ ಸಹಾಯಕ್ಕಾಗಿ ಕೋರಿದ್ದಾರೆ. ತಾನು ಒಂದು ತಿಂಗಳು ವಿದೇಶದಲ್ಲಿರಬೇಕಾಗಿರುವುದರಿಂದ ಎರಡು ವರ್ಷದ ಮಗುವನ್ನು ಬಿಟ್ಟಿರಲು ಸಾಧ್ಯವಿಲ್ಲ ಎಂದು ಸಾನಿಯಾ ಹೇಳಿದ್ದಾರೆ.
ಈ ಮನವಿಯನ್ನು ತಕ್ಷಣವೇ ಕ್ರೀಡಾ ಸಚಿವಾಲಯ ಕೈಗೆತ್ತಿಕೊಂಡಿದ್ದು, ಲಂಡನ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಮೂಲಕ ಯುಕೆಯಲ್ಲಿ ಈ ವಿಷಯವನ್ನು ಪರಿಶೀಲಿಸುವಂತೆ ಕೋರಿ ಎಂಇಎಗೆ ಈಗಾಗಲೇ ಪತ್ರ ಕಳುಹಿಸಲಾಗಿದೆ.
ಸಾನಿಯಾ ಅವರ ಈ ವಿನಂತಿಯನ್ನು ಸ್ವೀಕರಿಸಿದ್ದೇವೆ ಸಚಿವಾಲಯದ ಪ್ರಯತ್ನದ ಕುರಿತು ಮಾತನಾಡಿದ ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ ಶ್ರೀ ಕಿರೆನ್ ರಿಜಿಜು, ನಾವು ಕೆಲವು ದಿನಗಳ ಹಿಂದೆಯೇ ಸಾನಿಯಾ ಅವರ ಈ ವಿನಂತಿಯನ್ನು ಸ್ವೀಕರಿಸಿದ್ದೇವೆ. ಹಾಗೂ ತಾಯಿಯಾಗಿ ಸಾನಿಯಾ ತಮ್ಮೊಂದಿಗೆ ಇಬ್ಬರನ್ನು ಕರೆದೊಯ್ಯಲು ಅವಕಾಶ ನೀಡುವುದು ಮುಖ್ಯ ಎಂದು ನಾನು ಭಾವಿಸಿದ್ದೇವೆ. ಅಲ್ಲದೆ 2 ವರ್ಷದ ಮಗನನ್ನು ತನ್ನ ಜೊತೆಯಲ್ಲೆ ಕರೆದುಕೊಂಡು ಹೋಗುವುದರಿಂದ ಸಾನಿಯಾ, ತನ್ನ ಮಗುವಿನ ಬಗ್ಗೆ ಚಿಂತೆ ಮಾಡದೆ ಮುಕ್ತ ಮನಸ್ಸಿನಿಂದ ಆಟದಲ್ಲಿ ಭಾಗವಹಿಸಬಹುದು.
ಹಾಗಾಗಿ ನಾನು ಈ ವಿನಂತಿಯನ್ನು ಅಂಗೀಕರಿಸಿದ್ದೇವೆ ಮತ್ತು ಕ್ರೀಡಾ ಸಚಿವಾಲಯದ ಅಧಿಕಾರಿಗಳು ಎಂಇಎ ಜೊತೆ ಮಾತುಕತೆಯನ್ನು ಪ್ರಾರಂಭಿಸಿದ್ದಾರೆ. ಕ್ರೀಡಾ ಸಚಿವಾಲಯದ ಪ್ರಯತ್ನವು ಯಾವಾಗಲೂ ನಮ್ಮ ಕ್ರೀಡಾಪಟುಗಳಿಗೆ ಅವಶ್ಯಕವಿರುವ ಎಲ್ಲವನ್ನು ಒದಗಿಸುವುದಾಗಿರುತ್ತದೆ. ಈ ಸಂದರ್ಭದಲ್ಲಿ ಯುಕೆ ಸರ್ಕಾರವು ಅರ್ಹತೆಯನ್ನು ನೋಡಿ ಮಗುವಿಗೆ ಸಾನಿಯಾ ಜೊತೆ ಪ್ರಯಾಣಿಸಲು ಅವಕಾಶ ನೀಡುತ್ತದೆ ಎಂದು ನಾವು ಭಾವಿಸುತ್ತೇವೆ ಎಂದಿದ್ದಾರೆ.