ಟೀಂ ಇಂಡಿಯಾದ ಇಂಗ್ಲೆಂಡ್ ಪ್ರವಾಸವನ್ನು ರದ್ದುಗೊಳಿಸಿ, ಸಂಕಷ್ಟದಲ್ಲಿರುವ ಕ್ರೀಡಾಪಟುಗಳ ನೆರವಿಗೆ ಬನ್ನಿ;​ ಎಂಎಲ್​ಸಿ ಮೋಹನ್ ಕೊಂಡಜ್ಜಿ

ಸಾಂಕ್ರಾಮಿಕ ರೋಗವು ದೇಶಾದ್ಯಂತ ಹರಡಿರುವ ಮತ್ತು ಅನೇಕ ಕ್ರೀಡಾಪಟುಗಳು ಇದಕ್ಕೆ ತುತ್ತಾಗುತ್ತಿರುವ ಸಮಯದಲ್ಲಿ, ಮಾಜಿ ಕ್ರಿಕೆಟಿಗರು, ಇತರ ಕ್ರೀಡಾಪಟುಗಳಿಗೆ ಸಹಾಯ ಮಾಡಲು ಕೆಎಸ್‌ಸಿಎ ಮುಂದೆ ಬರಬೇಕು.

ಟೀಂ ಇಂಡಿಯಾದ ಇಂಗ್ಲೆಂಡ್ ಪ್ರವಾಸವನ್ನು ರದ್ದುಗೊಳಿಸಿ, ಸಂಕಷ್ಟದಲ್ಲಿರುವ ಕ್ರೀಡಾಪಟುಗಳ ನೆರವಿಗೆ ಬನ್ನಿ;​ ಎಂಎಲ್​ಸಿ ಮೋಹನ್ ಕೊಂಡಜ್ಜಿ
ಕಾಂಗ್ರೇಸ್​ ಎಂಎಲ್​ಸಿ ಮೋಹನ್ ಕೊಂಡಜ್ಜಿ

ದೇಶದಲ್ಲಿ ಕೊರೊನಾ ತನ್ನ ಆರ್ಭಟವನ್ನು ಮುಂದುವರೆಸಿದೆ. ಇದರಿಂದ ಸಾಕಷ್ಟು ಜನ ತೊಂದರೆಗೀಡಾಗಿದ್ದಾರೆ. ಈ ಸೋಂಕಿನಿಂದ ಬಡ ಹಾಗೂ ಮಧ್ಯಮ ವರ್ಗದ ಜನರು ಉದ್ಯೋಗವಿಲ್ಲದೆ, ದಿನನಿತ್ಯ ಸೇವಿಸಲು ಆಹಾರವಿಲ್ಲದೆ ನರಳುವಂತಹ ಪರಿಸ್ಥಿತಿ ಎದುರಾಗಿದೆ. ಕೊರೊನಾದಿಂದಾಗಿ ನಾನಾ ಕ್ಷೇತ್ರದ ಜನರು ತೊಂದರೆಗೀಡಾಗಿದ್ದಾರೆ. ಅದರಲ್ಲಿ ಕ್ರೀಡಾ ವಿಭಾಗವು ಒಂದು. ಕೊರೊನಾದಿಂದಾಗಿ ಮಾಜಿ ಹಾಗೂ ಹಾಲಿ ಕ್ರೀಡಾಪಟುಗಳು ತೀರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಈಗ ಅಂತಹವರ ನೆರವಿಗೆ ಆಯಾ ಕ್ರೀಡಾ ಪ್ರಾಧಿಕಾರ ಬರಬೇಕೆಂದು ಕಾಂಗ್ರೇಸ್​ ಎಂಎಲ್​ಸಿ ಮೋಹನ್ ಕೊಂಡಜ್ಜಿಕೇಳಿಕೊಂಡಿದ್ದಾರೆ.

ಈ ಬಗ್ಗೆ ವಿಸ್ತೃತವಾಗಿ ಮಾತಾನಾಡಿರುವ ಮೋಹನ್ ಕೊಂಡಜ್ಜಿ, ಭಾರತದಲ್ಲಿ ಕೋವಿಡ್ ವೈರಸ್ ಹರಡಿದ ಕಾರಣ ಐಪಿಎಲ್ ಮುಂದೂಡಲ್ಪಟ್ಟಿದೆ ಎಂದು ನನಗೆ ಸಂತೋಷವಾಗಿದೆ. ಸಾಂಕ್ರಾಮಿಕ ರೋಗವು ದೇಶಾದ್ಯಂತ ಹರಡಿರುವ ಮತ್ತು ಅನೇಕ ಕ್ರೀಡಾಪಟುಗಳು ಇದಕ್ಕೆ ತುತ್ತಾಗುತ್ತಿರುವ ಸಮಯದಲ್ಲಿ, ಮಾಜಿ ಕ್ರಿಕೆಟಿಗರು, ಅಂಪೈರ್‌ಗಳು ಮತ್ತು ಇತರ ಕ್ರೀಡಾಪಟುಗಳಿಗೆ ಸಹಾಯ ಮಾಡಲು ಕೆಎಸ್‌ಸಿಎ ಮುಂದೆ ಬರಬೇಕಾದ ಸಮಯ ಎಂದು ನಾನು ಭಾವಿಸುತ್ತೇನೆ.

ನಾವು ಒಲಿಂಪಿಕ್ ಚಿನ್ನದ ಪದಕ ವಿಜೇತರಾದ ರವೀಂದರ್ ಪಾಲ್ ಸಿಂಗ್ ಮತ್ತು ಕೌಶಿಕ್ ಅವರನ್ನು ಕೋವಿಡ್ -19 ವೈರಸ್​ನಿಂದಾಗಿ ಕಳೆದುಕೊಂಡಿರುವುದು ಆಘಾತಕಾರಿ. ಹೀಗಾಗಿ ಕೋವಿಡ್ – 19 ಸಾಂಕ್ರಾಮಿಕ ರೋಗವನ್ನು ಎದುರಿಸಲು ಮಾಜಿ ಅಂತರರಾಷ್ಟ್ರೀಯ ಕ್ರೀಡಾಪಟುಗಳು ಮತ್ತು ತರಬೇತುದಾರರಿಗೆ ಸಹಾಯ ಮಾಡಲು ಎಸ್‌ಎಐ ಮತ್ತು ಐಒಎ ಕಾರ್ಯನಿರತ ಗುಂಪನ್ನು ರಚಿಸಿವೆ ಎಂದು ತಿಳಿದುಕೊಳ್ಳುವುದೂ ಸಹ ಹೃದಯಸ್ಪರ್ಶಿಯಾಗಿದೆ. ಹೀಗಾಗಿ ಕೆಎಸ್‌ಸಿಎ ಮಾಜಿ ಮತ್ತು ಪ್ರಸ್ತುತ ಕ್ರೀಡಾಪಟುಗಳಿಗೆ ಸಹಾಯ ಮಾಡಲು ಮೋಹನ್ ಕೊಂಡಜ್ಜಿ ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ.

ಕ್ರೀಡಾ ಪ್ರಾಧಿಕಾರ ಈಗ ಮಾಡಬೇಕಿರುವ ಕೆಲಸಗಳು
1) ಈ ಸಾಂಕ್ರಾಮಿಕ ಸಮಯದಲ್ಲಿ ಮಾಜಿ ಮತ್ತು ಪ್ರಸ್ತುತ ಕ್ರೀಡಾಪಟುಗಳಿಗೆ ಸಹಾಯ ಮಾಡಲು ಕೆಎಸ್‌ಸಿಎ ತಂಡವನ್ನು ರಚಿಸಬೇಕು.
2) ಮಾಜಿ ಕ್ರಿಕೆಟಿಗರು, ಅಂಪೈರ್‌ಗಳು ಮತ್ತು ಇತರ ಕ್ರೀಡಾಪಟುಗಳಿಗೆ ಕೋವಿಡ್ 19 ವೈರಸ್‌ನಿಂದ ಬಳಲುತ್ತಿದ್ದರೆ ಕೆಎಸ್‌ಸಿಎ ಸೌಲಭ್ಯಗಳನ್ನು ನೀಡಬೇಕು.
3) ಕೆಎಸ್‌ಸಿಎಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ, ಬೆಂಗಳೂರಿನ ಬಳಿಯ ಗೋಲ್ಡನ್ ಸ್ಪಾ ರೆಸಾರ್ಟ್ ಬಳಿಯ ಮೈದಾನದಲ್ಲಿ ಮತ್ತು ಹುಬ್ಭಳ್ಳಿ, ಶಿವಮೊಗ್ಗ ಮತ್ತು ಇತರ ಸ್ಥಳಗಳಲ್ಲಿ ಕೆಎಸ್‌ಸಿಎ ಅನೇಕ ಕೊಠಡಿಗಳನ್ನು ಹೊಂದಿದೆ. ಈ ಕೊಠಡಿಗಳನ್ನು ಆಸ್ಪತ್ರೆಗಳಾಗಿ ಪರಿವರ್ತಿಸಬಹುದು ಮತ್ತು ಗಂಭೀರ ರೋಗಿಗಳಿಗೆ ಹಾಸಿಗೆ, ಆಮ್ಲಜನಕ ಮತ್ತು ವೆಂಟಿಲೇಟರ್‌ಗಳನ್ನು ಒದಗಿಸಿ ಕ್ರೀಡಾಪಟುಗಳಿಗೆ ಬೇಕಾದ ಚಿಕಿತ್ಸೆಯನ್ನು ಸುಲಭಗೊಳಿಸಬಹುದು.
4) ಚಿಕಿತ್ಸೆಗಾಗಿ ಹಣದ ಅವಶ್ಯಕತೆಯಿರುವ ಮಾಜಿ ಕ್ರಿಕೆಟಿಗರಿಗೆ ಹಣಕಾಸಿನ ನೆರವು ನೀಡಬೇಕೆಂದು ನಾನು ಸೂಚಿಸುತ್ತೇನೆ.

ಇಂಗ್ಲೆಂಡ್ ಪ್ರವಾಸವನ್ನು ರದ್ದುಗೊಳಿಸಿ
ಟೀಂ ಇಂಡಿಯಾದ ಇಂಗ್ಲೆಂಡ್ ಪ್ರವಾಸದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಮೋಹನ್ ಕೊಂಡಜ್ಜಿ, ಭಾರತೀಯ ಕ್ರಿಕೆಟ್ ತಂಡ ಯುಕೆಗೆ ಪ್ರವಾಸ ಮಾಡಿ ಅಲ್ಲಿ ಅವರು ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಸೇರಿದಂತೆ ಆರು ಟೆಸ್ಟ್ ಪಂದ್ಯಗಳನ್ನು ಆಡಬೇಕಾಗಿದೆ. ಇಂತಹ ಸಮಯದಲ್ಲಿ ಈ ಪಂದ್ಯಾವಳಿಯ ಅವಶ್ಯಕತೆಯಿಲ್ಲ. ಹಾಗಾಗಿ ಈ ಪಂದ್ಯಾವಳಿಯನ್ನು ರದ್ದುಗೊಳಿಸಿ. ಇದರಿಂದ ನಾವು ನಮ್ಮ ಆಟಗಾರರನ್ನು ಅಪಾಯಕ್ಕೆ ತಳ್ಳುತ್ತಿದ್ದೇವೆ ಮತ್ತು ಅವರನ್ನು ಇಂಗ್ಲೆಂಡ್​ನ ರೂಪಾಂತರಿ ಕೋವಿಡ್ 19ಗೆ ತಳ್ಳುತ್ತಿದ್ದೇವೆ ಎಂಬುದು ನನ್ನ ಅಭಿಪ್ರಾಯವಾಗಿದೆ. ಇದು ಭಾರತದ ಪ್ರಸ್ತುತ ರೂಪಾಂತರಿಗಿಂತ ಹೆಚ್ಚು ಅಪಾಯಕಾರಿಯಾಗಿದೆ. ಹೀಗಾಗಿ ಇಂಗ್ಲೆಂಡ್ ಪ್ರವಾಸವನ್ನು ರದ್ದುಗೊಳಿಸಬೇಕಾಗಿ ನಾನು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಬಿಸಿಸಿಐ ಕಾರ್ಯದರ್ಶಿ ಜೇ ಷಾ ಬಳಿ ವಿನಂತಿಸಿಕೊಳ್ಳುತ್ತಿದ್ದೇನೆ ಎಂದಿದ್ದಾರೆ.