ನಾನಾ ಜಿಲ್ಲೆಗಳಲ್ಲಿ 4 ದಿನ ಸೀಲ್‌ಡೌನ್, ಲಾಕ್‌ಡೌನ್: ಕೊರೊನಾ ಫೀಲ್ಡ್​ ಕಮಾಂಡರ್​ಗಳಿಂದ ಕಠಿಣ ನಿರ್ಧಾರ

ಕೋಲಾರ: ದೇಶದ ಬಹುಭಾಗಗಳಲ್ಲಿ ಕೊರೊನಾ ಹೆಮ್ಮಾರಿ ಆರ್ಭಟ ಮುಂದುವರಿದೇ ಇದೆ. ಈ ಸಂದರ್ಭದಲ್ಲಿ ಇತ್ತೀಚೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಗಳನ್ನು ಹುರಿದುಂಬಿಸುತ್ತಾ ಕೊರೊನಾ ವಿರುದ್ಧ ಸಮರೋಪಾದಿಯಲ್ಲಿ ಹೋರಾಡಲು ಯುದ್ಧ ಕಮಾಂಡರ್​ಗಳಂತೆ ಕೆಲಸ ಮಾಡಿ ಎಂದು ಜಿಲ್ಲಾಧಿಕಾರಿಗಳಿಗೆ ಕರೆ ನೀಡಿದ್ದರು. ಅದರಿಂದ ಪ್ರೇರಿತರಾದವರಂತೆ ರಾಜ್ಯದಲ್ಲೂ ಒಬ್ಬೊಬ್ಬ ಜಿಲ್ಲಾಧಿಕಾರಿಯೂ ತಮ್ಮ ವ್ಯಾಪ್ತಿ ಪ್ರದೇಶಕ್ಕೆ ತಕ್ಕಂತೆ ಸಮರ್ಪಕ ಕಠಿಣ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದ್ದಾರೆ. ಸೀಲ್‌ಡೌನ್ ಮತ್ತು ಲಾಕ್‌ಡೌನ್ ಬಿಗಿ ಕ್ರಮಗಳ ಮೊರೆಹೋಗಿದ್ದಾರೆ. ಕೋಲಾರ ಜಿಲ್ಲಾಧಿಕಾರಿ ಸೆಲ್ವಮಣಿ […]

ನಾನಾ ಜಿಲ್ಲೆಗಳಲ್ಲಿ 4 ದಿನ ಸೀಲ್‌ಡೌನ್, ಲಾಕ್‌ಡೌನ್: ಕೊರೊನಾ ಫೀಲ್ಡ್​ ಕಮಾಂಡರ್​ಗಳಿಂದ ಕಠಿಣ ನಿರ್ಧಾರ
ಲಾಕ್​ಡೌನ್ (ಸಂಗ್ರಹ ಚಿತ್ರ)
Follow us
ಸಾಧು ಶ್ರೀನಾಥ್​
|

Updated on: May 20, 2021 | 1:13 PM

ಕೋಲಾರ: ದೇಶದ ಬಹುಭಾಗಗಳಲ್ಲಿ ಕೊರೊನಾ ಹೆಮ್ಮಾರಿ ಆರ್ಭಟ ಮುಂದುವರಿದೇ ಇದೆ. ಈ ಸಂದರ್ಭದಲ್ಲಿ ಇತ್ತೀಚೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಗಳನ್ನು ಹುರಿದುಂಬಿಸುತ್ತಾ ಕೊರೊನಾ ವಿರುದ್ಧ ಸಮರೋಪಾದಿಯಲ್ಲಿ ಹೋರಾಡಲು ಯುದ್ಧ ಕಮಾಂಡರ್​ಗಳಂತೆ ಕೆಲಸ ಮಾಡಿ ಎಂದು ಜಿಲ್ಲಾಧಿಕಾರಿಗಳಿಗೆ ಕರೆ ನೀಡಿದ್ದರು. ಅದರಿಂದ ಪ್ರೇರಿತರಾದವರಂತೆ ರಾಜ್ಯದಲ್ಲೂ ಒಬ್ಬೊಬ್ಬ ಜಿಲ್ಲಾಧಿಕಾರಿಯೂ ತಮ್ಮ ವ್ಯಾಪ್ತಿ ಪ್ರದೇಶಕ್ಕೆ ತಕ್ಕಂತೆ ಸಮರ್ಪಕ ಕಠಿಣ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದ್ದಾರೆ. ಸೀಲ್‌ಡೌನ್ ಮತ್ತು ಲಾಕ್‌ಡೌನ್ ಬಿಗಿ ಕ್ರಮಗಳ ಮೊರೆಹೋಗಿದ್ದಾರೆ.

ಕೋಲಾರ ಜಿಲ್ಲಾಧಿಕಾರಿ ಸೆಲ್ವಮಣಿ ಅವರೂ ಸಹ ತಮ್ಮ ಜಿಲ್ಲೆಯಲ್ಲಿ ಕೊರೊನಾ ಮಿತಿಮೀರಿರುವುದನ್ನು ಗಮನದಲ್ಲಿಟ್ಟುಕೊಂಡು ಇಡೀ ಜಿಲ್ಲೆಯನ್ನು ನಾಲ್ಕು 4 ದಿನ ಕಂಪ್ಲೀಟ್ ಲಾಕ್‌ಡೌನ್ ಮಾಡಲು ನಿರ್ಧರಿಸಿದ್ದಾರೆ. ಅಂದಹಾಗೆ ರಾಜ್ಯ ಸರ್ಕಾರ ಈಗಾಗಲೇ ರಾಜ್ಯದಲ್ಲಿ ಸೆಮಿ ಲಾಕ್‌ಡೌನ್ ಜಾರಿಗೊಳಿಸಿದೆ. ಅದಷ್ಟಕ್ಕೇ ಕೊರೊನಾ ಕ್ರಿಮಿಯನ್ನು ಕಟ್ಟಿಹಾಕಲು ಸಾಧ್ಯವಾಗದು ಎಂದು ಪೂರ್ಣ ಪ್ರಮಾಣದಲ್ಲಿ ಇಡೀ ಜಿಲ್ಲೆಯನ್ನು ಬಂದ್​ ಮಾಡಲು ಜಿಲ್ಲಾಧಿಕಾರಿ ಸೆಲ್ವಮಣಿ ನಿರ್ಧರಿಸಿದ್ದಾರೆ.

ನಾಳೆಯಿಂದ ಮೇ 25ರವರೆಗೆ ಕೋಲಾರ ಜಿಲ್ಲೆಯನ್ನು ಕಂಪ್ಲೀಟ್ ಲಾಕ್‌ಡೌನ್ ಮಾಡುತ್ತಿರುವುದಾಗಿ ಕೋಲಾರದಲ್ಲಿ ಜಿಲ್ಲಾಧಿಕಾರಿ ಸೆಲ್ವಮಣಿ ಇಂದು ಹೇಳಿದ್ದಾರೆ. ಕೊರೊನಾ ಪ್ರಕರಣ ಹೆಚ್ಚಳ ಹಿನ್ನೆಲೆ 21 ರಿಂದ 25 ರವರೆಗೆ ಕೋಲಾರದಲ್ಲಿ ಸಂಪೂರ್ಣ ಲಾಕ್‌ಡೌನ್ ಘೋಷಣೆಯಾಗಿದೆ.

ನಾಳೆ ಶುಕ್ರವಾರ ಸಂಜೆ 6 ಗಂಟೆಯಿಂದ 25 ರ ಬೆಳಗ್ಗೆ 6 ಗಂಟೆಯವರೆಗೆ 4 ದಿನಗಳ ಕಾಲ ಕೋಲಾರ ಜಿಲ್ಲೆ ಸಂಪೂರ್ಣ ಲಾಕ್‌ಡೌನ್ ಆಗಲಿದೆ. ತರಕಾರಿ, ದಿನಸಿ ಅಂಗಡಿಗಳು ಸಂಪೂರ್ಣ ಬಂದ್ ಆಗಲಿವೆ. ತರಕಾರಿಗಳನ್ನು ತಳ್ಳುಗಾಡಿಯಲ್ಲಿ ಮಾರಾಟ ಮಾಡಬಹುದು. ಆಸ್ಪತ್ರೆ ಮತ್ತು ಹೋಟಲ್ ಪಾರ್ಸೆಲ್ ಇರುತ್ತದೆ. ಮತ್ತು ಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿರುತ್ತದೆ. ಕಾನೂನು ಉಲ್ಲಂಘನೆ ಮಾಡಿದರೆ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಸೆಲ್ವಮಣಿ ಎಚ್ಚರಿಸಿದ್ದಾರೆ.

ಇನ್ನು ಅವಳಿ ಜಿಲ್ಲಾಯಾದ ಚಿಕ್ಕಬಳ್ಳಾಪುರದಲ್ಲಿಯೂ ಇಂತಹುದೇ ಕಠಿಣ ನಿಯಮ ಜಾರಿಯಲ್ಲಿದ್ದು ಇಡೀ ಚಿಕ್ಕಬಳ್ಳಾಪುರ ಜಿಲ್ಲೆ ಲಾಕ್‌ಡೌನ್ ಆಗಿದೆ.

ಬೆಳಗಾವಿ ನೇಗಿನಹಾಳ ಗ್ರಾಮ ಒಂದು ವಾರ ಸೀಲ್‌ಡೌನ್: ಜಿಲ್ಲೆಯ ಹಳ್ಳಿ ಹಳ್ಳಿಗಳಲ್ಲೂ ಮಹಾಮಾರಿ ಕೊರೊನಾದ ಅಬ್ಬರ ಹೆಚ್ಚಾಗ್ತಿದೆ. ಬೆಳಗಾವಿ ಜಿಲ್ಲೆಯ 331 ಹಳ್ಳಿಗಳಲ್ಲಿ ಮಹಾಮಾರಿ ಕೊರೊನಾ ಪತ್ತೆಯಾಗಿದೆ. ನೇಗಿಹಾಳ ಗ್ರಾಮದಲ್ಲಿ ಕೊರೊನಾಗೆ 6 ಜನ ಮೃತಪಟ್ಟಿದ್ದಾರೆ. ಬೈಲಹೊಂಗಲ ತಾಲೂಕಿನ ನೇಗಿಹಾಳದಲ್ಲಿ ಸೋಂಕಿತರು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮೇ 26ರವರೆಗೆ ಗ್ರಾಮ ಸೀಲ್‌ಡೌನ್ ಮಾಡಲು ನಿರ್ಧರಿಸಲಾಗಿದೆ.

ನೇಗಿನಹಾಳ ಗ್ರಾಮವೊಂದರಲ್ಲೇ ಕೊವಿಡ್ ಎರಡನೇ ಅಲೆಯಲ್ಲಿ 6 ಜನರು ಮೃತಪಟ್ಟಿದ್ದಾರೆ. ನೇಗಿನಹಾಳ ಗ್ರಾಮವೊಂದರಲ್ಲೇ 31 ಕೊವಿಡ್ ಪಾಸಿಟಿವ್ ಆ್ಯಕ್ಟೀವ್ ಕೇಸ್ಗಳಿವೆ. ಹೀಗಾಗಿ ನೇಗಿನಹಾಳ ಗ್ರಾಮ ಒಂದು ವಾರಗಳ ಕಾಲ ಸೀಲ್‌ಡೌನ್ ಮಾಡಲಾಗುತ್ತಿದೆ. ಮೇ 26ರವರೆಗೂ ನೇಗಿನಹಾಳ ಗ್ರಾಮ ಸೀಲ್‌ಡೌನ್‌ಗೆ ಗ್ರಾಮ ಪಂಚಾಯಿತಿಯಲ್ಲಿ ನಿರ್ಣಯ ಮಾಡಲಾಗಿದೆ.

ನೇಗಿನಹಾಳ ಗ್ರಾಮದ ಎಲ್ಲಾ ಅಂಗಡಿ ಮುಂಗಟ್ಟು, ಬಾರ್ & ರೆಸ್ಟೋರೆಂಟ್ ಬಂದ್ ಆಗಲಿವೆ. ಬೈಲಹೊಂಗಲ ತಾಲೂಕಿನ ದೊಡವಾಡ, ಬೆಳವಡಿ, ನೇಗಿನಹಾಳ ಗ್ರಾಮದಲ್ಲಿ 30ಕ್ಕೂ ಹೆಚ್ಚು ಕೇಸ್ಗಳು ಪತ್ತೆಯಾಗಿವೆ.

(as coronavirus aggravate district commissioner acting as field commanders against covid 19 declare 4 days lockdown seal down in the districts)

ಯುದ್ಧ ಕಮಾಂಡರ್‌ಗಳಂತೆ ಕೆಲಸ ಮಾಡಿ; ಜಿಲ್ಲಾ ಅಧಿಕಾರಿಗಳೇ ವೈರಸ್ ವಿರುದ್ಧ ಹೋರಾಟದ ಫೀಲ್ಡ್ ಕಮಾಂಡರ್​ಗಳು

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್