AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಸ್ಕರಿಸಿದ ಹಾಗೂ ಸಾವಯವ ಪ್ರಮಾಣೀಕೃತ ಹಲಸಿನ ಹಣ್ಣು ಬೆಂಗಳೂರಿನಿಂದ ಜರ್ಮನಿಗೆ ರಫ್ತು

ಇತ್ತೀಚೆಗೆ ತ್ರಿಪುರಾದಿಂದ ಲಂಡನ್‌ಗೆ 1.2 ಮೆಟ್ರಿಕ್ ಟನ್ (ಎಂಟಿ) ತಾಜಾ ಹಲಸಿನ ಹಣ್ಣು ರಫ್ತು ಮಾಡಲಾಯಿತು. ಹಲಸಿನ ಹಣ್ಣನ್ನು ತ್ರಿಪುರ ಮೂಲದ ಕೃಷಿ ಸಂಯೋಗ ಆಗ್ರೊ ಉತ್ಪಾದನಾ ಕಂಪನಿ ಒದಗಿಸಿತು.

ಸಂಸ್ಕರಿಸಿದ ಹಾಗೂ ಸಾವಯವ ಪ್ರಮಾಣೀಕೃತ ಹಲಸಿನ ಹಣ್ಣು ಬೆಂಗಳೂರಿನಿಂದ ಜರ್ಮನಿಗೆ ರಫ್ತು
ಹಲಸು (ಸಂಗ್ರಹ ಚಿತ್ರ)
TV9 Web
| Edited By: |

Updated on:Aug 21, 2021 | 9:50 AM

Share

ಬೆಂಗಳೂರು: ಸಾವಯವ ಉತ್ಪನ್ನಗಳ ರಫ್ತಿಗೆ ಉತ್ತೇಜನ ನೀಡುವ ಸಲುವಾಗಿ, 10.20 ಮೆಟ್ರಿಕ್ ಟನ್ ಸಾವಯವ ಪ್ರಮಾಣೀಕೃತ ಅಂಟು ರಹಿತ ಹಲಸಿನ ಹಣ್ಣು ಪೌಡರ್ ಮತ್ತು ಹಲಸಿನ ಹಣ್ಣಿನ ಕ್ಯೂಬ್‌ಗಳನ್ನು ಇಂದು ಬೆಂಗಳೂರಿನಿಂದ ಸಮುದ್ರ ಮಾರ್ಗದ ಮೂಲಕ ಜರ್ಮನಿಗೆ ರಫ್ತು ಮಾಡಲಾಯಿತು. ಎಪಿಇಡಿಎ ನೆರವಿನ ಬೆಂಗಳೂರಿನ ಫಲದಾ ಆಗ್ರೋ ರಿಸರ್ಚ್ ಫೌಂಡೇಶನ್ಸ್ (ಪಿಎಆರ್​ಎಫ್) ಒಡೆತನದ ಪ್ಯಾಕ್ ಹೌಸ್‌ನಲ್ಲಿ ಇದನ್ನು ಸಂಸ್ಕರಿಸಲಾಗಿದೆ.

ಎಪಿಇಡಿಎ ನೋಂದಾಯಿತ ಫಲದಾ ಆಗ್ರೋ ರಿಸರ್ಚ್ ಫೌಂಡೇಶನ್ಸ್ (ಪಿಎಆರ್​ಎಫ್) ಸುಮಾರು 12,000 ಎಕರೆ ಜಮೀನು ಹೊಂದಿರುವ 1,500 ರೈತರ ಗುಂಪನ್ನು ಪ್ರತಿನಿಧಿಸುತ್ತದೆ. ಈ ರೈತರು ಔಷಧೀಯ ಮತ್ತು ಸುಗಂಧ ಗಿಡಮೂಲಿಕೆಗಳು, ತೆಂಗಿನಕಾಯಿ, ಹಲಸಿನ ಹಣ್ಣು, ಮಾವು, ಮಸಾಲೆಗಳು ಮತ್ತು ಕಾಫಿಯನ್ನು ಬೆಳೆಯುತ್ತಾರೆ.

ಪಿಎಆರ್​ಎಫ್ ತನ್ನ ಸಣ್ಣ ರೈತ ಗುಂಪುಗಳಿಗೆ ಸಾವಯವ ಉತ್ಪಾದನೆಯ ರಾಷ್ಟ್ರೀಯ ಕಾರ್ಯಕ್ರಮ (ಎನ್‌ಪಿಒಪಿ), ಯುರೋಪಿಯನ್ ಒಕ್ಕೂಟ, ರಾಷ್ಟ್ರೀಯ ಸಾವಯವ ಕಾರ್ಯಕ್ರಮ (ಅಮೆರಿಕಾ) ದ ಮಾನದಂಡಗಳ ಪ್ರಕಾರ ಪ್ರಮಾಣೀಕರಣ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತದೆ. ಪಿಎಆರ್​ಎಫ್​ನ ಸಂಸ್ಕರಣಾ ಘಟಕಕ್ಕೆ ಎಪಿಇಡಿಎ ಸಾವಯವ ಪ್ರಮಾಣೀಕರಣದ ಮಾನ್ಯತೆ ನೀಡಿದೆ.

ಇತ್ತೀಚೆಗೆ ತ್ರಿಪುರಾದಿಂದ ಲಂಡನ್‌ಗೆ 1.2 ಮೆಟ್ರಿಕ್ ಟನ್ (ಎಂಟಿ) ತಾಜಾ ಹಲಸಿನ ಹಣ್ಣು ರಫ್ತು ಮಾಡಲಾಯಿತು. ಹಲಸಿನ ಹಣ್ಣನ್ನು ತ್ರಿಪುರ ಮೂಲದ ಕೃಷಿ ಸಂಯೋಗ ಆಗ್ರೊ ಉತ್ಪಾದನಾ ಕಂಪನಿ ಒದಗಿಸಿತು. ಸಾಲ್ಟ್ ರೇಂಜ್ ಸಪ್ಲೈ ಚೈನ್ ಸೊಲ್ಯೂಷನ್ ಲಿಮಿಟೆಡ್‌ನ ಎಪಿಇಡಿಎ ನೆರವಿನ ಪ್ಯಾಕ್-ಹೌಸ್ ಸೌಲಭ್ಯದಲ್ಲಿ ಇದನ್ನು ಪ್ಯಾಕ್ ಮಾಡಲಾಯಿತು ಮತ್ತು ಕೀಗಾ ಎಕ್ಸಿಮ್ ಪ್ರೈವೇಟ್ ಲಿಮಿಟೆಡ್‌ನಿಂದ ರಫ್ತು ಮಾಡಲಾಯಿತು. ಯುರೋಪಿಯನ್ ಯೂನಿಯನ್​ಗೆ ರಫ್ತು ಮಾಡಲು ಮೇ 2021 ರಲ್ಲಿ ಅಂಗೀಕಾರ ದೊರೆತ ಮೊದಲ ಪ್ಯಾಕ್ ಹೌಸ್ ಇದಾಗಿದೆ.

ಎನ್‌ಪಿಒಪಿ ಅಡಿಯಲ್ಲಿ, ಪರಿಸರ ಮತ್ತು ಸಾಮಾಜಿಕ ಹೊಣೆಗಾರಿಕೆಯಿಂದ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳನ್ನು ಬಳಸದೆ ಸಾವಯವ ಕೃಷಿ ವಿಧಾನದಲ್ಲಿ ಉತ್ಪನ್ನಗಳನ್ನು ಬೆಳೆಯಲಾಗುತ್ತದೆ. ಕೃಷಿಯ ಈ ವಿಧಾನವು ಮಣ್ಣಿನ ಫಲವತ್ತತೆ ಮತ್ತು ಪುನರುತ್ಪಾದಕ ಸಾಮರ್ಥ್ಯವನ್ನು ರಕ್ಷಿಸುತ್ತದೆ. ಉತ್ತಮ ಸಸ್ಯ ಪೋಷಣೆ ಮತ್ತು ಮಣ್ಣಿನ ನಿರ್ವಹಣೆಯನ್ನು ಕಾಪಾಡುತ್ತದೆ, ರೋಗಗಳಿಗೆ ಪ್ರತಿರೋಧವನ್ನು ಹೊಂದಿರುವ ಪೌಷ್ಟಿಕ ಆಹಾರವನ್ನು ಉತ್ಪಾದಿಸುತ್ತದೆ. ಎಪಿಇಡಿಎ ಪ್ರಸ್ತುತ ಎನ್‌ಪಿಒಪಿಯನ್ನು ಜಾರಿಗೊಳಿಸುತ್ತಿದೆ, ಇದು ಪ್ರಮಾಣೀಕರಣ ಸಂಸ್ಥೆಗಳ ಮಾನ್ಯತೆ, ಸಾವಯವ ಉತ್ಪಾದನೆಯ ಮಾನದಂಡಗಳು, ಸಾವಯವ ಕೃಷಿಯ ಪ್ರೋತ್ಸಾಹ ಮತ್ತು ಮಾರುಕಟ್ಟೆ ಇತ್ಯಾದಿಗಳನ್ನು ಒಳಗೊಂಡಿದೆ.

2020-21ರಲ್ಲಿ, ಭಾರತವು ಸುಮಾರು 3.49 ದಶಲಕ್ಷ ಟನ್ ಪ್ರಮಾಣೀಕೃತ ಸಾವಯವ ಉತ್ಪನ್ನಗಳನ್ನು ಉತ್ಪಾದಿಸಿತು, ಇದರಲ್ಲಿ ಎಣ್ಣೆ ಬೀಜಗಳು, ಕಬ್ಬು, ಸಿರಿಧಾನ್ಯಗಳು, ರಾಗಿ, ಹತ್ತಿ, ದ್ವಿದಳ ಧಾನ್ಯಗಳು, ಸುಗಂಧ ಮತ್ತು ಔಷಧೀಯ ಸಸ್ಯಗಳು, ಚಹಾ, ಕಾಫಿ, ಹಣ್ಣುಗಳು, ಮಸಾಲೆಗಳು, ಒಣ ಹಣ್ಣುಗಳು , ತರಕಾರಿಗಳು, ಸಂಸ್ಕರಿಸಿದ ಆಹಾರ ಇತ್ಯಾದಿ ಸೇರಿವೆ.

ಸಾವಯವ ಪ್ರಮಾಣೀಕರಣದ ಅಡಿಯಲ್ಲಿ ಮಧ್ಯಪ್ರದೇಶವು ಅತಿದೊಡ್ಡ ಭೂ ಪ್ರದೇಶವನ್ನು ಹೊಂದಿದೆ, ನಂತರದ ಸ್ಥಾನಗಳಲ್ಲಿ ರಾಜಸ್ಥಾನ, ಮಹಾರಾಷ್ಟ್ರ, ಗುಜರಾತ್, ಕರ್ನಾಟಕ, ಒಡಿಶಾ, ಸಿಕ್ಕಿಂ ಮತ್ತು ಉತ್ತರ ಪ್ರದೇಶ ರಾಜ್ಯಗಳಿವೆ. 2020-21ರಲ್ಲಿ ಸಾವಯವ ಉತ್ಪನ್ನಗಳ ಒಟ್ಟು ರಫ್ತು 8.88 ಲಕ್ಷ ಮೆಟ್ರಿಕ್ ಟನ್ ಮತ್ತು ಈ ರಫ್ತಿನ ಮೌಲ್ಯ ಸುಮಾರು 7,078 ಕೋಟಿ ರೂ. (1040 ಮಿಲಿಯನ್ ಡಾಲರ್) ಆಗಿತ್ತು.

ಇದನ್ನೂ ಓದಿ: ಹಲಸಿನ ಬೀಜದ ಉಪಯೋಗ ತಿಳಿದರೆ ಒಂದು ಬೀಜವನ್ನೂ ಹಾಳು ಮಾಡಲಾರಿರಿ; ಇಲ್ಲಿದೆ ವಿವರ

ಕೋಲಾರದಲ್ಲಿದೆ ಏಷ್ಯಾದ ಬೃಹತ್ ಹಲಸಿನ ತೋಟ; ಒಂದೇ ಕಡೆ ಸಿಗುತ್ತೆ ಸುಮಾರು 39 ಜಾತಿಯ ಹಣ್ಣು

Published On - 9:25 pm, Tue, 25 May 21

Follow Us
Web contact
Web contact

TV9 Kannada

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು